ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ತಲೆಕೂದಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕಾಗಿಯೇ ಅನೇಕರು ಸುಂದರ ಮತ್ತು ಉದ್ದ ಕೂದಲು ಹೊಂದಲು ಬಯಸುತ್ತಾರೆ. ಆದರೆ, ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಮಾಲಿನ್ಯ ಮತ್ತು ಕೂದಲ ರಕ್ಷಣೆಯ ಉತ್ಪನ್ನಗಳ ಕಾರಣಗಳಿಂದ ಕೂದಲು ಉದುರುತ್ತಿವೆ. ಕೂದಲು ಬೆಳೆಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುತ್ತಾರೆ. ಆದರೆ ಫಲಿತಾಂಶ ಮಾತ್ರ ಸೀಮಿತ. ಇಂಥ ಸಮಯದಲ್ಲಿ ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ ಕೂದಲು ಉದುರುವುದಿಲ್ಲ.
ತಲೆಯ ಭಾಗವನ್ನು ಆರೋಗ್ಯವಾಗಿಡಲು ನಿಯಮಿತ ಶುಚಿಗೊಳಿಸುವಿಕೆ ಅತ್ಯಗತ್ಯ. ಆದರೆ ಒದ್ದೆ ಕೂದಲು ಒಣಗಿಸುವುದು ಸ್ವಲ್ಪ ಕಷ್ಟ. ಅದಕ್ಕಾಗಿ ಅನೇಕರು ಹೇರ್ ಡ್ರೈಯರ್ ಬಳಸುತ್ತಾರೆ. ಇದರ ಶಾಖ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ.
ಹೇರ್ ಡ್ರೈಯರ್ ಅನ್ನು ಕೇವಲ ಸ್ಟೈಲಿಂಗ್ ಮತ್ತು ನೇರಗೊಳಿಸುವಿಕೆಗೆ ಬಳಸುವುದರ ಹೊರತಾಗಿ, ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವುದು, ಬಿಗಿಯಾಗಿ ಕೂದಲನ್ನು ಹೆಣೆಯುವುದು ಮತ್ತು ಒದ್ದೆಯಾದ ಕೂದಲನ್ನು ಟವೆಲ್‌ನಿಂದ ಹೊಡೆಯುವುದು ಮತ್ತು ಕಟ್ಟಿಕೊಳ್ಳುವುದೆಲ್ಲವೂ ಕೂದಲಿಗೆ ಹಾನಿಕಾರಕ. ಈ ಪದ್ಧತಿಗಳಿಂದ ಆದಷ್ಟು ದೂರವಿರಬೇಕು.
ಇದನ್ನೂ ಓದಿ:ಬೋಳು ತಲೆಗೆ ವಿಗ್ ಧರಿಸುವ ಮುನ್ನ ಎಚ್ಚರ! ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಜೋಕೆ.. - Wig Is Poison
ಇಂಟರ್ನ್ಯಾಷನಲ್ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ 2016ರ ಅಧ್ಯಯನವು ಹೀಟ್ ಸ್ಟೈಲಿಂಗ್ ಉಪಕರಣಗಳು (ಹೇರ್ ಡ್ರೈಯರ್ಗಳು, ಸ್ಟ್ರೈಟ್ನರ್ಗಳು, ಕರ್ಲಿಂಗ್ ಐರನ್ಗಳು) ಕೂದಲಿಗೆ ಕೆರಾಟಿನ್ ಹಾನಿ ಉಂಟುಮಾಡುತ್ತದೆ ಎಂದು ಹೇಳಿದೆ. ಕೆರಾಟಿನ್ ನಷ್ಟ ಕೂದಲನ್ನು ದುರ್ಬಲಗೊಳಿಸುತ್ತದೆ. ನ್ಯೂಯಾರ್ಕ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಚರ್ಮಶಾಸ್ತ್ರದ ಪ್ರಾಧ್ಯಾಪಕ ಡಾ.ಮಾರ್ಕ್ ರೋಜರ್ಸ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ನಿಂತು ನೀರು ಕುಡಿಯೋದರಿಂದ ಏನೆಲ್ಲಾ ಸಮಸ್ಯೆ; ಜೀವ ಜಲದ ಸೇವನೆ ಬಗ್ಗೆ ತಜ್ಞರ ಸಲಹೆ ಇಲ್ಲಿದೆ.. - HOW TO DRINK WATER
ಅನೇಕರು ಸ್ನಾನದ ನಂತರ ಕಂಡೀಷನರ್ ಅಪ್ಲೈ ಮಾಡುತ್ತಾರೆ. ಕಂಡೀಷನರ್ ಅಪ್ಲೈ ಮಾಡಿದಾಕ್ಷಣ ಕೂದಲುಗಳು ಗಂಟು ಬೀಳುತ್ತವೆ ಎಂಬ ಉದ್ದೇಶದಿಂದ ಒದ್ದೆಯಾದ ತಲೆಯ ಮೇಲೆ ಬಾಚಣಿಕೆಯಿಂದ ಬಾಚಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಕೂದಲಿನ ಬೇರುಗಳಿಗೆ ಹಾನಿ ಮಾಡುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಒದ್ದೆ ಕೂದಲನ್ನು ಬಾಚಣಿಕೆಯಿಂದ ಚಾಚಿಕೊಳ್ಳಬೇಡಿ.
ಕೂದಲು ಉದುರುವಿಕೆಗೆ ಮತ್ತು ತಲೆಹೊಟ್ಟು ನಿವಾರಣೆಗೆ ಹಲವರು ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿ ಅಲ್ಲಿರುವ ಸಲಹೆಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಮ್ಮೆ ಈ ಸಲಹೆಗಳು ಯಾವುದೇ ಪ್ರಯೋಜನ ನೀಡುವುದಿಲ್ಲ. ಇದರ ಪರಿಣಾಮ ಮೊದಲು ಚರ್ಮ ಮತ್ತು ಕೂದಲಿನ ಮೇಲಾಗುತ್ತದೆ. ಆದ್ದರಿಂದ ತಜ್ಞರ ಸಲಹೆಯಿಲ್ಲದೆ ಅಂತಹ ಸಲಹೆಗಳನ್ನು ಬಳಸದಿರುವುದು ಉತ್ತಮ.
ಕೂದಲು ಕತ್ತರಿಸಿದರೆ ಅದು ಬೇಗ ಬೆಳೆಯುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಪ್ರತಿ ಎರಡು ತಿಂಗಳಿಗೊಮ್ಮೆ ಕೂದಲನ್ನು ಕತ್ತರಿಸಲು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಒಣ ತುದಿಗಳು ಕೂಡ ಕೂದಲು ಬೆಳವಣಿಗೆಗೆ ಅಡ್ಡಿ. ಆದ್ದರಿಂದ ಅವುಗಳನ್ನು ತೆಗೆದುಹಾಕುವುದು ಅವಶ್ಯಕ.
ಕೆಲವರು ಕೂದಲಿಗೆ ಎಣ್ಣೆ ಹಚ್ಚುವುದಿಲ್ಲ. ಎಣ್ಣೆ ಹಚ್ಚಿದ್ರೆ ಕೂದಲು ಜಿಡ್ಡಾಗಿರುತ್ತದೆ ಎಂಬ ಭಾವನೆ ಅವರಲ್ಲಿದೆ. ಆದರೆ ವಾರದಲ್ಲಿ ಎರಡು ಬಾರಿ ಬೆಚ್ಚಗಿನ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದು ಕೂದಲನ್ನು ರಕ್ಷಿಸುತ್ತದೆ.
ದಿನನಿತ್ಯ ಬಳಸುವ ದಿಂಬು ಕೂದಲಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಸರಿಯಾದ ದಿಂಬುಗಳನ್ನು ಬಳಸದಿದ್ದರೆ ಕೂದಲಿನ ಬುಡದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಹೀರಿಕೊಳ್ಳುವುದಲ್ಲದೆ, ಘರ್ಷಣೆಯಿಂದ ಕೂದಲು ಉದರುತ್ತವೆ.
ಸೂಚನೆ: ಇಲ್ಲಿ ನೀಡಿರುವ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ಈ ಮಾಹಿತಿಯನ್ನು ಒದಗಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಬೋಳು ತಲೆಗೆ ವಿಗ್ ಧರಿಸುವ ಮುನ್ನ ಎಚ್ಚರ! ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಜೋಕೆ.. - Wig Is Poison