ನವದೆಹಲಿ: ಜೀವನಶೈಲಿ ಬದಲಾವಣೆ ಸೇರಿದಂತೆ ಅನೇಕ ಕಾರಣಗಳಿಂದ ಇಂದು ಆತಂಕ, ಒತ್ತಡ ಎಂಬುದು ಸಾಮಾನ್ಯ ಎಂಬಂತೆ ಆಗಿದೆ. ಅಲ್ಲದೇ, ಪ್ರತಿಯೊಬ್ಬರು ಒಂದಲ್ಲ ಒಂದು ಕ್ಷಣದಲ್ಲಿ ಈ ರೀತಿ ಸಮಸ್ಯೆ ಅನುಭವಿಸುವುದು ಸಹಜ. ಆದರೆ, ಜೀವನ ಆನಂದಕ್ಕಿಂತ ಆಂತಕವೇ ಅಧಿಕವಾದರೆ, ಅದು ಅಪಾಯ. ಅಲ್ಲದೇ ಈ ಸಮಸ್ಯೆ ಭವಿಷ್ಯದಲ್ಲಿ ಪಾರ್ಕಿನ್ಸನ್ ರೋಗದ ಅಭಿವೃದ್ಧಿ ಅಪಾಯವನ್ನು ದುಪ್ಪಟ್ಟು ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ಪಾರ್ಕಿನ್ಸನ್ ಎಂಬುದು ಸದ್ಯಕ್ಕೆ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನರ ಸಂಬಂಧಿ ಸಮಸ್ಯೆಯಾಗಿದ್ದು, ಜಾಗತಿಕವಾಗಿ 10 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆ. ಸದ್ದಿಲ್ಲದೇ ಮಿದುಳಿನಲ್ಲಿ ಅಭಿವೃದ್ಧಿಯಾಗುವ ಈ ರೋಗದಿಂದ ವ್ಯಕ್ತಿಯ ಕೈ ಕಾಲು ನಡುಗುತ್ತದೆ. ದೇಹದ ಸಮತೋಲನ ಕಾಪಾಡುವುದು ಕಷ್ಟವಾಗುತ್ತದೆ.
ಈ ಸಂಬಂಧ ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಅಧ್ಯಯನ ನಡೆಸಿದೆ. ಖಿನ್ನತೆ, ನಿದ್ರೆ ಕೊರತೆ, ಆಯಾಸ, ಅರಿವಿನ ಕೊರತೆ, ಅಧಿಕ ರಕ್ತದೊತ್ತಡ, ಸಮತೋಲನದ ಕೊರತೆ, ಮಲಬದ್ಧತೆ ಎಲ್ಲವೂ ಆತಂಕದ ಲಕ್ಷಣಗಳಾಗಿವೆ, ಇದು ಪಾರ್ಕಿನ್ಸನ್ ಅಪಾಯದ ಅಭಿವೃದ್ಧಿಗೆ ಕಾರಣವಾಗುತ್ತದೆ.
ಪಾರ್ಕಿನ್ಸನ್ ರೋಗದ ಆರಂಭಿಕ ಹಂತ ಈ ಆತಂಕವಾಗಿದೆ. ಆದರೆ, ಈ ಹಿಂದಿನ ಅಧ್ಯಯನದಲ್ಲಿ ಹೊಸ ಆರಂಭದ ಆತಂಕದೊಂದಿಗೆ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಪಾರ್ಕಿನ್ಸನ್‌ನ ನಿರೀಕ್ಷಿತ ಅಪಾಯವು ತಿಳಿದಿಲ್ಲ ಎಂದು ಯುಸಿಎಲ್ನ ಅಪಿಡೆಮಿಲಾಜಿ ಮತ್ತು ಹೆಲ್ತ್ನ ಡಾ. ಜುವಾನ್ ಬಾಜೊ ಅವರೆಜ್ ತಿಳಿಸಿದ್ದಾರೆ.
ಆತಂಕವನ್ನು ಅರ್ಥೈಸಿಕೊಂಡು, ಉಲ್ಲೇಖಿಸಲಾದ ಅದರ ಲಕ್ಷಣಗಳೊಂದಿಗೆ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಪಾರ್ಕಿನ್ಸನ್ ಕಾಯಿಲೆ ಅಭಿವೃದ್ಧಿ ಅಪಾಯ ಹೆಚ್ಚಿದೆ. ಈ ಪರಿಸ್ಥಿತಿಯನ್ನು ಆರಂಭದಲ್ಲಿ ಪತ್ತೆ ಮಾಡಿ, ರೋಗಿಗಳಿಗೆ ಅಗತ್ಯ ಚಿಕಿತ್ಸೆಗೆ ಸಹಾಯ ಮಾಡಬಹುದು. ಇದು 2040ರ ಹೊತ್ತಿಗೆ 14.2 ಮಿಲಿಯನ್ ಜನರನ್ನು ಅಂದಾಜಿಸಬಹುದಾಗಿದೆ ಎಂದು ಅವರೆಜ್ ತಿಳಿಸಿದ್ದಾರೆ.
ಈ ಅಧ್ಯಯನವೂ ಬ್ರಿಟಿಷ್ ಜರ್ನಲ್ ಆಫ್ ಜನರಲ್ ಪ್ರಾಕ್ಟೀಸ್ನಲ್ಲಿ ಪ್ರಕಟವಾಗಿದೆ. ಇದಕ್ಕಾಗಿ ತಂಡ ಆಂತದಕ ಲಕ್ಷಣ ಹೊಂದಿರುವ 50 ವರ್ಷ ಮೇಲ್ಪಟ್ಟ 1,09,435 ಜನರನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಅಲ್ಲದೇ ಇವರನ್ನು ಆತಂಕ ಪರಿಸ್ಥಿತಿ ಹೊಂದಿಲ್ಲದ 8,78,256 ಮಂದಿಯೊಂದಿಗೆ ಹೋಲಿಕೆ ಮಾಡಲಾಗಿದೆ.
ಅಧ್ಯಯನ ಫಲಿತಾಂಶದಲ್ಲಿ ಎರಡು ಗುಂಪಿಗೆ ಹೋಲಿಕೆ ಮಾಡಿದಾಗ ಆತಂಕ ಹೊಂದಿರುವ ಜನರಲ್ಲಿ ಪಾರ್ಕಿನ್ಸ್ ಅಭಿವೃದ್ಧಿಆಗುವ ಅಪಾಯ ದುಪ್ಪಟು ಹೊಂದಿರುವುದು ಕಾಣಬಹುದಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರಲ್ಲೇ ಆತಂಕ ಹೆಚ್ಚು; ಇದಕ್ಕೆ ಕಾರಣಗಳೇನು?