ETV Bharat / state

ಸರ್ಕಾರಿ ಕಾರ್ಯಕ್ರಮದಲ್ಲೇ ಸಿಎಂ ರಾಜೀನಾಮೆ ಬೇಡಿಕೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವುದೇ ಸೂಕ್ತ: ಆರ್​ ಅಶೋಕ್ - R Ashok On Swamiji CM Statement

author img

By ETV Bharat Karnataka Team

Published : Jun 27, 2024, 5:17 PM IST

ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದೇ ಸೂಕ್ತ ಎಂದಿದ್ದಾರೆ.

ಆರ್ ಅಶೋಕ್
ಆರ್ ಅಶೋಕ್ (ETV Bharat)

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಸ್ವಾಮೀಜಿಗಳೇ ಸ್ವಯಂಪ್ರೇರಣೆಯಿಂದ ಹೇಳಿದರೋ ಅಥವಾ ಡಿಕೆ ಶಿವಕುಮಾರ್ ಹೇಳಿಸಿದರೋ ಗೊತ್ತಿಲ್ಲ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಎಂದೂ ಆಗಿರಲಿಲ್ಲ. ಮೊದಲ ಬಾರಿಗೆ ಸಿಎಂ ಎದುರಿಗೆ ನೀವು ರಾಜೀನಾಮೆ ನೀಡಿ ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಧರ್ಮಾರ್ಥರಾದರೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಜಾಲಹಳ್ಳಿ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸ್ವಾಮೀಜಿ ಹೇಳಿಕೆ ವಿಚಾರ ಗಮನಿಸಿದ್ದೇನೆ. ಯಾವುದೋ ಗಾದೆ ಮಾತಿದೆ, ಕರೆದು ಬಿಟ್ಟು ಕೊಡು ಅನ್ನುವಂತೆ. ಇದು ಒಂದು ತಂತ್ರ. ಡಿಕೆ ಶಿವಕುಮಾರ್ ಅವರಿಗೆ ತಮ್ಮನ ಸೋಲು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಹೇಳಿಕೆಗಳು ಬರುತ್ತಿರಬಹುದು. ನಾಲ್ವರು ಡಿಸಿಎಂ ಆಗಬೇಕು ಅಂತ ಸಿದ್ದರಾಮಯ್ಯ ಅವರ ಬಣ ಹೇಳುತ್ತಿದೆ‌. ಅದಕ್ಕೆ ಕೌಂಟರ್ ಆಗಿ ಈ ಹೇಳಿಕೆ ಬಂದಿದೆ. ಧರ್ಮಾರ್ಥರಾಗಿದ್ದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕು ಅಂತ ಸ್ವಾಮೀಜಿ ಹೇಳಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಇರುವ ವೇದಿಕೆಯಲ್ಲಿ ಸ್ವಾಮೀಜಿ ಹೇಳಿದ ಮೇಲೆ ಸಿದ್ದರಾಮಯ್ಯ ಅವರಿಗೆ ಗೌರವ ಇದ್ರೆ, ರಾಜೀನಾಮೆ ಕೊಡೋದು ಒಳ್ಳೆಯದು. ಸಿಎಂ ಅವರಿಗೆ ಗೌರವ ಇದ್ದರೆ ವೇದಿಕೆಯಲ್ಲೇ ಹೇಳಿಕೆ ಕೊಡಬೇಕಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಿನ್ನಮತೀಯ ಟ್ರೂಪ್ ನಡುವೆ ವಾರ್ ನಡೀತಿದೆ. ಕಳೆದ ವಾರದಿಂದ ಎರಡೂ ಬಣದಲ್ಲಿ ಒಬ್ಬೊಬ್ಬರು ಒಂದೊಂದು ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ. ಸರ್ಕಾರದಲ್ಲಿ ನಯಾಪೈಸೆ ಅಭಿವೃದ್ಧಿ ಇಲ್ಲ. ಆದರೆ ಇದೆಲ್ಲಾ ನೋಡಿದರೆ ಸರ್ಕಾರಕ್ಕೆ ಕಂಟಕ‌ ಇದೆ. ಈ ಸರ್ಕಾರ ತುಂಬಾ ದಿನ ಇರೋದಿಲ್ಲ ಅಂತ ನಾವು ಹೇಳುತ್ತಿದ್ದೆವು. ಈಗ ಅದು ಸ್ಪಷ್ಟವಾಗಿದೆ ಎಂದರು.

ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah

ಸಿದ್ದರಾಮಯ್ಯ ಅವರಿಗೆ ರಾಜಕೀಯದ ಒಳಗೆ ಹೋಗಿ ತಿಳಿದುಕೊಳ್ಳುವ ಸಾಮರ್ಥ್ಯ ಇದೆ. ಅದನ್ನು ಅನಾಲಿಸಿಸ್ ಮಾಡೋಕೆ ಗೊತ್ತಿದೆ. ಸಿದ್ದರಾಮಯ್ಯ ಧರ್ಮಾರ್ಥರಾದರೆ ರಾಜೀನಾಮೆ ನೀಡಲಿ. ಇಡೀ ರಾಜಕೀಯ ಇತಿಹಾಸದಲ್ಲಿ ಸಿಎಂಗೆ ಈ ರೀತಿ ವೇದಿಕೆಯಲ್ಲಿ ಅವಮಾನ ಆಗಿರಲಿಲ್ಲ. ಇದೇ ಮೊದಲು ಈ ರೀತಿ ಆಗಿರೋದು. ಅಧಿಕಾರ ಬಿಟ್ಟುಕೊಡಿ ಇಲ್ಲದಿದ್ದರೆ, ದೇವರಲ್ಲಿ ಪ್ರಾರ್ಥನೆ ಮಾಡೋದಾಗಿ ಸ್ವಾಮೀಜಿ ಹೇಳಿದ್ದಾರೆ. ಇದರ ಅರ್ಥ ಏನು? ಎಂದು ಅಶೋಕ್​ ಪ್ರಶ್ನಿಸಿದರು.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್ಲರ‌ ಆರೋಗ್ಯ ಕಾಪಾಡುವ ಅಧಿಕಾರಿಗಳಿಗೆ ಡೆಂಗ್ಯೂ ಬಂದಿದೆ ಎಂದರೆ ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ಇವರು ಕೆಲಸ‌ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಲಿದೆ. ಮತ್ತೊಂದು ಕಡೆ ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಕುಡಿಯುವ ನೀರು ಪೂರೈಸಬೇಕು. ಆದರೆ ನಿರ್ಲಕ್ಷ್ಯ ವಹಿಸುತ್ತಿದೆ. ಇದಕ್ಕಾಗಿ ಜನತೆ ಡೆಂಗ್ಯೂ, ಕಾಲರಾಗೆ ಬಲಿಯಾಗುತ್ತಿದ್ದಾರೆ. ಸರ್ಕಾರ ಕುಂಬಕರ್ಣ ನಿದ್ದೆ ಮಾಡಿಕೊಂಡು ಮಲಗಿದೆ ಎಂದು ಪ್ರತಿಪಕ್ಷ ನಾಯಕ ಟೀಕಿಸಿದರು.

ಇದನ್ನೂ ಓದಿ: ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಸಮ್ಮುಖದಲ್ಲೇ ಚಂದ್ರಶೇಖರ್ ಸ್ವಾಮೀಜಿ ಬೇಡಿಕೆ - Chandrashekhar Swamiji

ETV Bharat Logo

Copyright © 2024 Ushodaya Enterprises Pvt. Ltd., All Rights Reserved.