ETV Bharat / state

ಸ್ವಾಮೀಜಿ ಹೇಳಿದ್ರೆ ಸಿಎಂ ಬದಲಾವಣೆ ಮಾಡಲು ಆಗುವುದಿಲ್ಲ : ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ - MLA Shamanur Shivashankarappa

author img

By ETV Bharat Karnataka Team

Published : Jun 27, 2024, 5:20 PM IST

ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಡಿ. ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

mla-shamanur-shivashankarappa
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (ETV Bharat)

ದಾವಣಗೆರೆ : ಸ್ವಾಮೀಜಿಗಳು ಹೇಳಿದ್ರೆ ಸಿಎಂ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಚಂದ್ರಶೇಖರ್ ಸ್ವಾಮೀಜಿಯವರಿಗೆ ಟಾಂಗ್ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಒಕ್ಕಲಿಗ ಸ್ವಾಮೀಜಿ ಚಂದ್ರಶೇಖರ್ ಶ್ರೀ ಅವರು ಸಿಎಂ ಬದಲಾವಣೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಹೇಳಿದ್ರೆ ಸಿಎಂ ಬದಲಾವಣೆ ಮಾಡೋದು ಅಂತ ಯಾರು ಹೇಳಿದ್ರು? ಸಿಎಂ ಬದಲಾವಣೆ ಮಾಡಲ್ಲ, ಹೈಕಮಾಂಡ್ ಹೇಳಿದಂತೆ ಆಗುತ್ತೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಒಳ್ಳೆ ಆಡಳಿತ ಮಾಡುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಸರಿಯಾದ ಉತ್ತರ ನೀಡುತ್ತೆ, ಹೈಕಮಾಂಡ್ ಹೇಳಿದಂತೆ ಅವರು ನಡೆಯಬೇಕು ಎಂದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸಚಿವರು ಬದಲಾವಣೆ ಆಗ್ಬೇಕೆಂದು ಪದೇ ಪದೆ ಹೇಳಿಕೆ ನೀಡ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವನಿಗೇನು ಗೊತ್ತು. ಯಾರೋ ಚಾರ್ಜ್ ಮಾಡಿ ಹಿಂಗೆ ಹೇಳು ಅಂತಾ ಹೇಳಿರಬೇಕು. ಅದಕ್ಕೆ ಹೇಳಿಕೆ ಕೊಡ್ತಿದ್ದಾನೆ‌. ಯಾರ್ ಹೇಳಿದ್ರು ನಡೆಯಂಗಿಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನ ಎಂದು ತಿಳಿಸಿದರು.

ಇನ್ನು ಜಾತಿವಾರು ಡಿಸಿಎಂ ಕೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದೆಲ್ಲಾ ಸುಮ್ನೆ ಆಗಲ್ಲ, ಮಾಡಲ್ಲ, ಡಿಸಿಎಂ ಮಾಡಿದ್ರೆ ಹೈಕಮಾಂಡ್ ಮಾಡಬೇಕು, ಸಿಎಂ ಬದಲಾವಣೆ ಆಗಬೇಕು ಅಥವಾ ಆಗಬಾರದು ಎಂಬುದನ್ನ ನಾನು ಹೇಳಲ್ಲ. ಅದಕ್ಕೆಲ್ಲ ಹೈಕಮಾಂಡ್ ಇದೆ. ಸ್ವಾಮೀಜಿ ಹೇಳಿರಬಹುದು. ಅವರು ಹೇಳಿದಂತೆ ಮಾಡೋಕೆ ಆಗುತ್ತಾ?. ಹೈಕಮಾಂಡ್ ತೀರ್ಮಾನವೇ ನನ್ನ ತೀರ್ಮಾನ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಇದನ್ನೂ ಓದಿ : ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.