ETV Bharat / business

ನಿಮ್ಮ ಉಳಿತಾಯ ಖಾತೆಯಲ್ಲಿ ಎಷ್ಟು ಠೇವಣಿ ಮಾಡಬಹುದು?: ಮಿತಿ ದಾಟಿದರೆ ಏನಾಗುತ್ತದೆ? - What is the Cash Deposit Limit - WHAT IS THE CASH DEPOSIT LIMIT

ಜನ ಸಾಮಾನ್ಯರು ಅಂದರೆ ನಾವು ನೀವೆಲ್ಲ ಉಳಿಸಿದ ಹಣವನ್ನು ಕೂಡಿಡಲು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ( Savings Account) ತೆರೆಯುತ್ತೇವೆ. ಈ ಮೂಲಕ ನಮ್ಮ ಹಣಕ್ಕೆ ರಕ್ಷಣೆ ಪಡೆದುಕೊಳ್ಳುತ್ತೇವೆ ಹಾಗೂ ಇದರಿಂದ ಬಡ್ಡಿಯನ್ನೂ ಪಡೆದುಕೊಳ್ಳುತ್ತೇವೆ. ಹಾಗಾದರೆ ಸೇವಿಂಗ್ಸ್ ಖಾತೆಯಲ್ಲಿ ಗರಿಷ್ಠ ಎಷ್ಟು ಹಣ ಠೇವಣಿ ಮಾಡಬಹುದು? ಅದಕ್ಕೇನಾದರೂ ಮಿತಿ ಇದೆಯೇ? ಎಂಬ ಅನುಮಾನಗಳು ಅನೇಕ ಮನಸ್ಸಿನಲ್ಲಿ ಮೂಡಿರಬಹುದು. ಅದಕ್ಕೆಲ್ಲ ಉತ್ತರವನ್ನು ನಾವು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ

cash-deposit-limit-in-savings-account-know-how-much-money-can-be-kept-in-a-savings-account
ನಿಮ್ಮ ಉಳಿತಾಯ ಖಾತೆಯಲ್ಲಿ ಎಷ್ಟು ಠೇವಣಿ ಮಾಡಬಹುದು?: ಮಿತಿ ದಾಟಿದರೆ ಏನಾಗುತ್ತದೆ? (savings account cash deposit limit (Getty Images))
author img

By ETV Bharat Karnataka Team

Published : Jun 27, 2024, 6:36 AM IST

ದೇಶದಲ್ಲಿ ಇಂದು ಬಹುತೇಕ ಜನರು ಸ್ವಂತ ಬ್ಯಾಂಕ್​ ಖಾತೆ ಹೊಂದಿದ್ದಾರೆ. ಸರ್ಕಾರದ ಯೋಜನೆಗಳು, ಸಂಬಳ ಮತ್ತು ಇತರ ಹಣಕಾಸಿನ ವ್ಯವಹಾರಗಳನ್ನು ನಡೆಸಲು ಉಳಿತಾಯ ಖಾತೆಯನ್ನು ಹೊಂದಿಯೇ ಹೊಂದಿರುತ್ತಾರೆ. ಈ ಖಾತೆ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿ ಸಂಗ್ರಹಿಸುವುದಲ್ಲದೆ ಸಣ್ಣ ಬಡ್ಡಿಯನ್ನೂ ಗಳಿಸುತ್ತವೆ. ಅಷ್ಟೇ ಅಲ್ಲ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಮಾತ್ರ ನೀವು ಡಿಜಿಟಲ್ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುತ್ತದೆ.

ಉದಾಹರಣೆಗೆ ಫೋನ್​ ಪೇ, ಪೇಟಿಎಂ ಸೇರಿದಂತೆ ಇತರ ಯುಪಿಐ ಬಳಕೆಗೆ ಬ್ಯಾಂಕ್​ ಖಾತೆ ಇರಲೇಬೇಕಾಗುತ್ತದೆ. ಇನ್ನು ಒಂದು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಸಂಗ್ರಹಿಸಬಹುದು? ಅದಕ್ಕೇನಾದರೂ ಮಿತಿ ಇದೆಯೇ? ನಗದು ಬ್ಯಾಲೆನ್ಸ್ ಮಿತಿಯನ್ನು ಮೀರಿದರೆ ಯಾವುದೇ ಸಮಸ್ಯೆಗಳಿವೆಯೇ? ಎಂಬ ಡೌಟ್​ ನಿಮಗಿದೆಯೇ. ಖಂಡಿತ ಉಳಿತಾಯ ಖಾತೆಗೆ ಕೆಲ ಮಿತಿಗಳಿವೆ. ಆ ಬಗ್ಗೆ ಈ ತಿಳಿದುಕೊಳ್ಳೋಣ

ಹೆಚ್ಚಿನ ಬಳಕೆದಾರರು ಉಳಿತಾಯ ಖಾತೆಯ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಉಳಿತಾಯ ಖಾತೆಯಲ್ಲಿ ಯಾವುದೇ ಮೊತ್ತವನ್ನು ಜಮಾ ಮಾಡಬಹುದು. ಅದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಆದಾಯ ತೆರಿಗೆ ಇಲಾಖೆಯು ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಠೇವಣಿ ಇಡಬಹುದಾದ ಮೊತ್ತಕ್ಕೆ 10 ಲಕ್ಷ ರೂ.ಗಳ ಮಿತಿಯನ್ನು ವಿಧಿಸಿದೆ. ಆದ್ದರಿಂದ, ನೀವು 10 ಲಕ್ಷ ರೂಗಳಿಗಿಂತ ಹೆಚ್ಚು ಹಣದ ಠೇವಣಿ ಮಾಡಿದರೆ, ನೀವು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತೀರಿ. ಆ ಹಣದ ಮೇಲೆ ನೀವು ತೆರಿಗೆ ಪಾವತಿಸಬೇಕಾಗಬಹುದು. ಅಲ್ಲದೇ 10 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ಐಟಿ ಇಲಾಖೆಗೆ ಮಾಹಿತಿ ನೀಡಬೇಕು.

ನಿಮ್ಮ ಉಳಿತಾಯ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟಿದ್ದರೆ ಆದಾಯ ತೆರಿಗೆ ಇಲಾಖೆ ನಿಗಾ ಇಟ್ಟಿರುತ್ತದೆ. ನಿಮ್ಮ ಉಳಿತಾಯ ಖಾತೆಯ ಠೇವಣಿ ಇತಿಹಾಸವನ್ನು ಪರಿಶೀಲಿಸಿ. ಅದೇ ರೀತಿ, ಒಂದು ಹಣಕಾಸು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಹೊಂದಿರುವ ಉಳಿತಾಯ ಖಾತೆಗಳ ಬಗ್ಗೆ ಬ್ಯಾಂಕ್‌ಗಳು ಐಟಿ ಇಲಾಖೆಗೆ ಮಾಹಿತಿ ನೀಡುತ್ತವೆ. ಇದರೊಂದಿಗೆ ಐಟಿ ಇಲಾಖೆಯು ಉಳಿತಾಯ ಖಾತೆದಾರರಿಗೆ ನೋಟಿಸ್ ಕಳುಹಿಸುವ ಸಾಧ್ಯತೆಯೂ ಇದೆ. ಎಫ್‌ಡಿಗಳಲ್ಲಿ ನಗದು ಠೇವಣಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಷೇರುಗಳಲ್ಲಿನ ಹೂಡಿಕೆಗಳು, ಫಾರೆಕ್ಸ್ ಕಾರ್ಡ್‌ಗಳು ಮುಂತಾದ ವಿದೇಶಿ ಕರೆನ್ಸಿ ಖರೀದಿಗಳಿಗೆ 10 ಲಕ್ಷದ ಮಿತಿ ಅನ್ವಯವಾಗುತ್ತದೆ.

ಇದನ್ನು ಓದಿ: ಸಾರ್ವಕಾಲಿಕ ದಾಖಲೆಯತ್ತ ಷೇರು ಮಾರುಕಟ್ಟೆ: ಯಾವ ಷೇರುಗಳಿಗೆ ಲಾಭ, ನಷ್ಟ? - STOCK Market

ETV Bharat Logo

Copyright © 2025 Ushodaya Enterprises Pvt. Ltd., All Rights Reserved.