ಕರ್ನಾಟಕ

karnataka

ಸಹೋದ್ಯೋಗಿಯ ಕೊಲೆಗೆ ಯತ್ನ: ಆರೋಪಿ ಸಹ ಶಿಕ್ಷಕ ಪರಾರಿ

By

Published : Jul 13, 2020, 10:01 AM IST

ಸಹ ಶಿಕ್ಷಕನೋರ್ವ ತನ್ನ ಸಹೋದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

Fatal assault on a colleague by a teacher
ಸಹೋದ್ಯೋಗಿಯಿಂದ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ:ಖಾಸಗಿ ಶಾಲೆಯೊಂದರ ಸಹ ಶಿಕ್ಷಕ ತನ್ನ ಸಹೋದ್ಯೋಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗೋಕಾಕ್ ತಾಲೂಕಿನ ಕಡಬಗಟ್ಟಿ ಗುಡ್ಡದಲ್ಲಿ ನಡೆದಿದೆ.

ಅರಬಾಂವಿಯ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಲಕ್ಕಪ್ಪ ಬೆನ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅದೇ ಶಾಲೆಯ ಸಹ ಶಿಕ್ಷಕ ಬೀರಪ್ಪ ಕಂಡ್ರಟ್ಟಿ ಎಂಬುವರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಶಿಕ್ಷಕ ಲಕ್ಕಪ್ಪನ ಮೇಲೆ ಬೀರಪ್ಪ ಹಲ್ಲೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗ್ತಿದೆ.

ಸಹೋದ್ಯೋಗಿಯಿಂದ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

ಗಂಭೀರವಾಗಿ ಗಾಯಗೊಂಡಿರುವ ಲಕ್ಕಪ್ಪ ಬೆನ್ನಿಯನ್ನು ಗೋಕಾಕ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details