ETV Bharat / state

ಪ್ಲಾಟ ಕೊಡದ ಎಸ್.ಬಿ. ಪ್ರಾಪರ್ಟಿಸ್‍ಗೆ ದಂಡ; ಬಡ್ಡಿಸಹಿತ ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ - Penalty for SB Properties

author img

By ETV Bharat Karnataka Team

Published : Jun 27, 2024, 12:49 PM IST

ಹುಬ್ಬಳ್ಳಿಯ ನಗರವೊಂದರಲ್ಲಿ ಗ್ರಾಹಕರಿಂದ ಮುಂಗಡ ಹಣ ಪಡೆದುಕೊಂಡು ಪ್ಲಾಟ್ ಕೊಡದ ಪ್ರಾಪರ್ಟಿಸ್​ಗೆ ದಂಡ ಮತ್ತು ಪರಿಹಾರ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

DISTRICT CONSUMER COMMISSION
ಜಿಲ್ಲಾ ಗ್ರಾಹಕರ ಆಯೋಗ (ETV Bharat)

ಧಾರವಾಡ: ಹುಬ್ಬಳ್ಳಿಯ ಭಾಗ್ಯ ನಗರದಲ್ಲಿ ಪ್ಲಾಟ್ ಕೊಡದ ಎಸ್.ಬಿ. ಪ್ರಾಪರ್ಟಿಸ್‍ಗೆ ದಂಡ ಮತ್ತು ಪರಿಹಾರ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಹುಬ್ಬಳ್ಳಿಯ ಕೇಶ್ವಾಪುರ ನಗರದ ನಿವಾಸಿ ನಾಗರಾಜ ಮಾಲಗತ್ತಿ ಎಂಬುವವರು ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಸ್ವಂತ ಮನೆ ಕಟ್ಟಿಕೊಳ್ಳುವ ಇಚ್ಛೆಯಿಂದ ಹುಬ್ಬಳ್ಳಿಯ ವಿಜಯಕುಮಾರ ಅಯ್ಯಾವರಿ ಇವರ ಎಸ್.ಬಿ. ಪ್ರಾಪರ್ಟಿಸ್‍ ಅವರ ಜೊತೆ ಪ್ಲಾಟ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಹುಬ್ಬಳ್ಳಿಯ ಭಾಗ್ಯ ನಗರ ಲೇಔಟ್‍ನಲ್ಲಿ ಪ್ಲಾಟ್ ನಂ.23ನ್ನು 2022ರಲ್ಲಿ ಒಟ್ಟು ರೂ.12,31,720 ಪೈಕಿ ರೂ.6,15,000 ಮುಂಗಡ ಹಣವಾಗಿ ಪಾವತಿಸಿ ದೂರುದಾರ ಎದುರುದಾರ ಜೊತೆ ಖರೀದಿ ಕರಾರು ಮಾಡಿಕೊಂಡಿದ್ದರು. ನಂತರ ಎದುರುದಾರರು ಆ ಪ್ಲಾಟ್​ ಅಭಿವೃದ್ಧಿ ಪಡಿಸದೇ ಒಂದಿಲ್ಲೊಂದು ನೆಪ ಹೇಳಿ ಮುಂದುಡುತ್ತಾ ಬಂದರು. ದೂರುದಾರರು ಸಾಕಷ್ಟು ಸಲ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ದೂರುದಾರರ ಅಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ, ಬಿಲ್ಡರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2024ರ ಫೆಬ್ರವರಿ 28ರಂದು ಈ ದೂರನ್ನು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರನಿಂದ ರೂ.6,15,000 ಹಣ ಪಡೆದುಕೊಂಡು ಎದುರುದಾರ ಅವರಿಗೆ ಪ್ಲಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ದೂರುದಾರರು ಸಂದಾಯ ಮಾಡಿದ ರೂ.6,15,000 ಮತ್ತು ಅದರ ಮೇಲೆ ಮುಂಗಡ ಹಣ ಪಾವತಿಸಿದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ10% ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ತೀರ್ಪು ಪ್ರಕಟಿಸಿದೆ. ಒಂದು ತಿಂಗಳ ಒಳಗಾಗಿ ಹಣ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ.

ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎಸ್.ಬಿ. ಪ್ರಾಪರ್ಟಿಸ್ ಪಾಲುದಾರರಾದ ವಿಜಯಕುಮಾರ ಅಯ್ಯಾವರಿ/ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ: ಪಿಡಿಒ, ಗ್ರಾಪಂ ಕಾರ್ಯದರ್ಶಿ ಸೇರಿ ಹಲವು ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರದ ಆದೇಶ - Transfer Through Counseling

ETV Bharat Logo

Copyright © 2024 Ushodaya Enterprises Pvt. Ltd., All Rights Reserved.