ETV Bharat / state

ಹಾವೇರಿಯ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಆಚರಣೆ: ಮೂರು ದಿನದ ಹಬ್ಬಕ್ಕೆ ಇಂದು ಅದ್ಧೂರಿ ತೆರೆ - haveri karahunnime

author img

By ETV Bharat Karnataka Team

Published : Jun 27, 2024, 1:04 PM IST

Updated : Jun 27, 2024, 2:02 PM IST

ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಆಚರಿಸಲಾಗುತ್ತಿದ್ದು, ಇಂದು ತೆರೆ ಬೀಳಲಿದೆ. ಮೂರು ದಿನಗಳ ಕಾಲ ಕಾರಹುಣ್ಣಿಮೆ ಆಚರಿಸಲಾಗುತ್ತದೆ. ಈ ದಿನದಂದ ಗ್ರಾಮದಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ.

ಕಾರಹುಣ್ಣಿಮೆ ಆಚರಣೆ
ಕಾರಹುಣ್ಣಿಮೆ ಆಚರಣೆ (ETV Bharat)

ಕರ್ಜಗಿ ಕಾರಹುಣ್ಣಿಮೆ ಆಚರಣೆ (ETV Bharat)

ಹಾವೇರಿ: ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸಕ್ಕೆ ಬ್ರಹ್ಮಲಿಂಗೇಶ್ವರ ಜಾತ್ರೆ ಎಂದೇ ಕರೆಯಲಾಗುತ್ತದೆ. ಈ ಬಾರಿಯ ಕಾರುಹುಣ್ಣಿಮೆ ಮಂಗಳವಾರದಿಂದ ಆರಂಭವಾಗಿದ್ದು, ಇಂದು ತೆರೆ ಬೀಳಲಿದೆ.

ಕಾರಹುಣ್ಣಿಮೆ ಆಚರಣೆ
ಕಾರಹುಣ್ಣಿಮೆ ಆಚರಣೆ (ETV Bharat)

ಶತಶತಮಾನಗಳಿಂದ ಈ ಗ್ರಾಮದಲ್ಲಿ ಕಾರಹುಣ್ಣಿಮೆ ಆಚರಿಸಿಕೊಂಡು ಬರಲಾಗುತ್ತಿದೆ. ಮೊದಲ ದಿನ ಹೂನ್ನುಗ್ಗಿ ಆಚರಿಸಲಾಗುತ್ತದೆ. ಈ ದಿನ ರೈತರು ಒಡನಾಡಿ ಎತ್ತುಗಳಿಗೆ ಹೊನ್ನು ಎಂದರೆ ಚಿನ್ನವನ್ನು ಹಾಕಿ ಮನೆ ಒಳಗೆ ಬರಮಾಡಿಕೊಂಡು ಪೂಜೆ ಸಲ್ಲಿಸುತ್ತಾರೆ. ಎರಡನೇಯ ದಿನ ದೊಡ್ಡಕ್ಕಿ ಮತ್ತು ಮೂರನೇ ದಿನ ಸಣ್ಣಕ್ಕಿ ಬಂಡಿ ಓಡಿಸಲಾಗುತ್ತದೆ. ಈ ಬಂಡಿಗಳನ್ನು ಓಡಿಸಲು ಪ್ರತಿ ಬಂಡಿಗೆ ಏಳು ವೀರಗಾರರು ಇರುತ್ತಾರೆ.

ಕಾರಹುಣ್ಣಿಮೆ ಆಚರಣೆ
ಕಾರಹುಣ್ಣಿಮೆ ಆಚರಣೆ (ETV Bharat)

ಈ ಆಚರಣೆಗಾಗಿ ಇಲ್ಲಿ ವೀರಗಾರರ ಮನೆತನಗಳಿವೆ. ಆ ಮನೆತನದ ಪುರುಷರನ್ನು ವೀರಗಾರರನ್ನಾಗಿ ಮಾಡಲಾಗುತ್ತದೆ. ಇವರನ್ನು ಆರಿಸುವ ಪ್ರಕ್ರಿಯೆ ಸಹ ವಿಭಿನ್ನವಾಗಿರುತ್ತದೆ. ಇವರು 9 ದಿನಗಳ ಕಾಲ ಉಪವಾಸ ನಡೆಸುತ್ತಾರೆ. ಕಾರ ಹುಣ್ಣಿಮೆಯ ಆಚರಣೆ ನಂತರ ಉಪವಾಸ ಕೈಬೀಡುತ್ತಾರೆ. ಎರಡು ದಿನ ಈ ವೀರಗಾರರು ಕಠಿಣ ವೃತ ಆಚರಿಸುತ್ತಾರೆ. ಈ ಬಂಡಿ ಓಡಿಸುವಾಗ ಯಾವುದೇ ಅವಘಡ ನಡೆಯುವುದಿಲ್ಲ. ಈ ಮೂರು ದಿನಗಳಂದು ಕರ್ಜಗಿ ಗ್ರಾಮ ವಿದ್ಯುತ್ ದೀಪ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿರುತ್ತದೆ.

ಕಾರಹುಣ್ಣಿಮೆ ಆಚರಣೆ
ಕಾರಹುಣ್ಣಿಮೆ ಆಚರಣೆ (ETV Bharat)

ಎರಡನೇಯ ದಿನವಾದ ಬುಧವಾರ ಸುಮಾರು 108 ಜೋಡಿ ಎತ್ತುಗಳನ್ನು ಬಂಡಿಗೆ ಕಟ್ಟಿ ಓಡಿಸಲಾಗುತ್ತದೆ. ಕರ್ಜಗಿ ಮತ್ತು ಸುತ್ತಮುತ್ತಲಿನ ಏಳು ಗ್ರಾಮಗಳ ರೈತರು ತಮ್ಮ ಎತ್ತುಗಳನ್ನು ತರುತ್ತಾರೆ. ಈ ಕಾರಹುಣ್ಣಿಮೆಗಾಗಿ ಎತ್ತುಗಳನ್ನು ವಿಶೇಷವಾಗಿ ಬೆಳೆಸಲಾಗಿರುತ್ತದೆ. ಈ ಆಚರಣೆಯಲ್ಲಿ ಪಾಲ್ಗೊಳ್ಳುವ ಎತ್ತುಗಳಿಗೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಮತ್ತು ಎತ್ತುಗಳು ಗಟ್ಟಿಮುಟ್ಟಾಗಿರುತ್ತವೆ ಎಂಬ ನಂಬಿಕೆ ಇಲ್ಲಿಯ ರೈತರಲ್ಲಿದೆ.

ಕಾರಹುಣ್ಣಿಮೆ ಆಚರಣೆ
ಕಾರಹುಣ್ಣಿಮೆ ಆಚರಣೆ (ETV Bharat)

ಮತ್ತೊಂದು ವಿಶೇಷತೆ ಎಂದರೇ ಅಳಿಯ ಮಗಳು ಈ ಹಬ್ಬದಂದು ಗ್ರಾಮಕ್ಕೆ ಕರೆಸಿಕೊಳ್ಳುವ ಸಂಪ್ರದಾಯವಿದೆ. ಈ ದಿನದಂದು ಮದುವೆ ಮಾತುಕತೆಗಳೂ ನಡೆಸಲಾಗುತ್ತದೆ. ಕಾರಹುಣ್ಣಿಮೆಯನ್ನು ಕರ್ಜಗಿ ಗ್ರಾಮದಲ್ಲಿ ತಲತಲಾಂತರದಿಂದ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಈ ದಿನದಂದು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿರುತ್ತದೆ. ಅಲ್ಲದೇ ವಿಶೇಷವಾದ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಈ ವಿಶಿಷ್ಟ ಆಚರಣೆ ಮೂಲಕ ಕರ್ಜಗಿ ಗ್ರಾಮಸ್ಥರು ರಾಜ್ಯದ ಗಮನ ಸೆಳೆಯುತ್ತಾರೆ. ಈ ಮೂರು ದಿನಗಳ ಆಚರಣೆ ಮೂಲಕ ಗ್ರಾಮದ ಕಾರಹುಣ್ಣಿಮೆಗೆ ತೆರೆಬಿಳ್ಳುತ್ತದೆ. ಕರ್ಜಗಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವರಿಗೆ ವಿಶಿಷ್ಟ ಶಕ್ತಿಯಿದ್ದು ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಕೈ ಬೀಸಿ ಕರೆಯುತ್ತಿದೆ ಜನಾಕರ್ಷಣೆಯ 'ತಾಣ' ಪುತ್ತೂರು ನೆಲಪ್ಪಾಲ್‌ನ 'ಉದ್ಯಾನ' - Puttur Nelappal Park

Last Updated : Jun 27, 2024, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.