ಕರ್ನಾಟಕ

karnataka

ನಾನ್​​ಸ್ಟ್ರೈಕ್​ನಲ್ಲೂ ಧೋನಿ ಫುಲ್ ಅಲರ್ಟ್​... ಮಂಕಡ್ ರನೌಟ್ ಮಾಡಲೆತ್ನಿಸಿದ ಪಾಂಡ್ಯಗೆ ನೆಟ್ಟಿಗರು ಗರಂ..!​

By

Published : Apr 4, 2019, 10:49 AM IST

Updated : Apr 4, 2019, 1:34 PM IST

ಈ ಮೊದಲು ಪಂಜಾಬ್ ತಂಡದ ಮಯಾಂಕ್ ಅಗರ್​ವಾಲ್​ರನ್ನು ಮಂಕಡ್ ರನೌಟ್ ಮಾಡುವ ಅವಕಾಶವಿದ್ದರೂ ಔಟ್ ಮಾಡಿರಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಕೃನಾಲ್ ಪಾಂಡ್ಯ

ಮುಂಬೈ:ಹದಿನೈದು ವರ್ಷದ ಅಂತರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿರುವ ಟೀಮ್ ಇಂಡಿಯಾ ಹಿರಿಯ ಆಟಗಾರ ಎಂ.ಎಸ್.ಧೋನಿಗೆ ಚಮಕ್ ನೀಡಲು ಹೋದ ಯುವ ಆಟಗಾರ ಕೃನಾಲ್​ ಪಾಂಡ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆರ್​.ಅಶ್ವಿನ್ ರಾಜಸ್ಥಾನ ರಾಯಲ್ಸ್ ಆಟಗಾರ ಜಾಸ್ ಬಟ್ಲರ್​​ರನ್ನು ಮಂಕಡ್ ರನೌಟ್ ಮಾಡಿ ಕ್ರಿಕೆಟ್ ವಲಯದಲ್ಲಿ ಭಾರಿ ಸುದ್ದಿಯಾಗಿದ್ದರು. ಅದನ್ನೇ ಅನುಸರಿಸಲು ಹೋಗಿರುವ ಕೃನಾಲ್ ಪಾಂಡ್ಯ ನಿರಾಸೆ ಅನುಭವಿಸಿದ್ದಲ್ಲದೆ ಧೋನಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣರಾಗಿದ್ದಾರೆ.

ಈ ಮೊದಲು ಪಂಜಾಬ್ ತಂಡದ ಮಯಾಂಕ್ ಅಗರ್​ವಾಲ್​ರನ್ನು ಮಂಕಡ್ ರನೌಟ್ ಮಾಡುವ ಅವಕಾಶವಿದ್ದರೂ ಔಟ್ ಮಾಡಿರಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.

14ನೇ ಒವರ್​ನಲ್ಲಿ ಕೇದಾರ್ ಜಾಧವ್ ಸ್ಟ್ರೈಕ್​ನಲ್ಲಿದ್ದರು. ಬೌಲಿಂಗ್ ಮಾಡಲು ಬಂದ ಕೃನಾಲ್ ಪಾಂಡ್ಯ ಇನ್ನೇನು ಬೌಲ್ ಮಾಡಬೇಕು ಎನ್ನುವಷ್ಟರಲ್ಲಿ ಹಿಂತಿರುಗಿ ಮಂಕಡ್ ರನೌಟ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಧೋನಿ, ಪಾಂಡ್ಯರ ರನೌಟ್ ಬಲೆಗೆ ಬೀಳದೆ ಜಾಣ್ಮೆ ಪ್ರದರ್ಶಿಸಿದ್ದಾರೆ.

ಧೋನಿ ಎಸೆತ ಎಸೆಯುವ ಕೊನೆ ಹಂತದವರೆಗೂ ಕ್ರೀಸಿನಲ್ಲಿದ್ದಿದ್ದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಚಮಕ್ ನೀಡಲು ಹೋದ ಕೃನಾಲ್ ಪಾಂಡ್ಯ ಧೋನಿ ಜಾಣ್ಮೆಯಿಂದ ಕೊಂಚ ಕಸಿವಿಸಿಗೊಂಡಿದ್ದಾರೆ. ಆದರೆ ಇದು ಧೋನಿ ಮೈದಾನದಲ್ಲಿ ಎಷ್ಟು ಚುರುಕಾಗಿರುತ್ತಾರೆ ಎನ್ನುವುದನ್ನು ಪ್ರೂವ್ ಮಾಡಿದೆ.

Last Updated : Apr 4, 2019, 1:34 PM IST

ABOUT THE AUTHOR

...view details