ETV Bharat / international

ಇಸ್ರೇಲ್‌ ರಕ್ತಪಾತದ ರೂವಾರಿ ಹಮಾಸ್​ ಮಿಲಿಟರಿ ಕಮಾಂಡರ್ ಮುಹಮ್ಮದ್​ ದೀಫ್ ಹತ್ಯೆ - Hamas Military Commander Killed

author img

By ETV Bharat Karnataka Team

Published : Aug 1, 2024, 7:32 PM IST

ಹಮಾಸ್​ನ ಉನ್ನತ ಮಿಲಿಟರಿ ಕಮಾಂಡರ್​ ಮುಹಮ್ಮದ್ ದೀಫ್ ಹತನಾಗಿದ್ದಾನೆ ಎಂದು ಐಡಿಎಫ್ ಹೇಳಿದೆ.

ಗಾಜಾದಲ್ಲಿನ ಸಂಘರ್ಷದ ದೃಶ್ಯ (ಸಂಗ್ರಹ ಚಿತ್ರ)
ಗಾಜಾದಲ್ಲಿನ ಸಂಘರ್ಷದ ದೃಶ್ಯ (ಸಂಗ್ರಹ ಚಿತ್ರ) (IANS)

ಟೆಲ್ ಅವೀವ್(ಇಸ್ರೇಲ್): ಕಳೆದ ತಿಂಗಳು ಐಡಿಎಫ್ ಫೈಟರ್ ಜೆಟ್​ಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮಿಲಿಟರಿ ನಾಯಕ ಮುಹಮ್ಮದ್ ದೀಫ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗುರುವಾರ ದೃಢಪಡಿಸಿದೆ.

"ಜುಲೈ 13ರಂದು, ಐಡಿಎಫ್ ಫೈಟರ್ ಜೆಟ್​ಗಳು ಖಾನ್ ಯೂನಿಸ್ ಪ್ರದೇಶದಲ್ಲಿ ದಾಳಿ ನಡೆಸಿದ್ದವು. ದಾಳಿಯ ನಂತರ ನಡೆಸಲಾದ ಗುಪ್ತಚರ ಮೌಲ್ಯಮಾಪನದ ಪ್ರಕಾರ, ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಮಾಸ್ಟರ್​ಮೈಂಡ್​, ಗಾಜಾದಲ್ಲಿನ ಭಯೋತ್ಪಾದಕ ಸಂಘಟನೆ ಹಮಾಸ್​ನ ಕಮಾಂಡರ್ ಮೊಹಮ್ಮದ್ ದೀಫ್ ಈ ದಾಳಿಯಲ್ಲಿ ಹತರಾಗಿರುವುದು ದೃಢಪಟ್ಟಿದೆ" ಎಂದು ಐಡಿಎಫ್ ಗುರುವಾರ ಹೇಳಿದೆ.

ಐಡಿಎಫ್ ಮತ್ತು ಇಸ್ರೇಲಿ ಭದ್ರತಾ ಸಂಸ್ಥೆ ಶಿನ್ ಬೆಟ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದವು. "ಅಮ್ಮಾನ್ ಮತ್ತು ಶಿನ್ ಬೆಟ್​ನ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಖಾನ್ ಯೂನಿಸ್ ಬ್ರಿಗೇಡ್​ನ ಕಮಾಂಡರ್ ದೀಫ್ ಮತ್ತು ರಫೆ ಸಲಾಮಾ ಅಡಗಿದ್ದ ಕಾಂಪೌಂಡ್ ಮೇಲೆ ನಡೆಸಲಾದ ದಾಳಿಯಲ್ಲಿ ಇಬ್ಬರೂ ಕೊಲ್ಲಲ್ಪಟ್ಟಿದ್ದಾರೆ. ಅವರೊಂದಿಗೆ, ಇತರ ಭಯೋತ್ಪಾದಕರು ಸಹ ಹತರಾಗಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಐಡಿಎಫ್ ಪ್ರಕಾರ, ಗಾಜಾ ಪಟ್ಟಿಯಲ್ಲಿ ಹಮಾಸ್​ನ ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಡೀಫ್, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ಅನೇಕ ಭಯೋತ್ಪಾದಕ ಸಂಚುಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಾನೆ ಹಾಗೂ ಸಂಘಟನೆಯ ಹಿರಿಯ ಮಿಲಿಟರಿ ವಿಭಾಗಕ್ಕೆ ಆದೇಶಗಳು ಮತ್ತು ಸೂಚನೆಗಳನ್ನು ನೀಡಿದ್ದಾನೆ.

"ದೀಫ್ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಮತ್ತು ಜುಡಿಯಾ ಮತ್ತು ಸಮರಿಯಾದಲ್ಲಿ ಸಂಘಟನೆಯ ಬಲವರ್ಧನೆಗೆ ಕೆಲಸ ಮಾಡುತ್ತಿದ್ದ" ಎಂದು ಐಡಿಎಫ್ ವಿವರಿಸಿದೆ.

ದೀಫ್ 2002ರಲ್ಲಿ ಹಮಾಸ್​ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್-ಖಸ್ಸಾಮ್ ಬ್ರಿಗೇಡ್​ನ ಮುಖ್ಯಸ್ಥನಾಗಿ ನೇಮಕವಾಗಿದ್ದ. ಈತ ಸುಮಾರು ಮೂರು ದಶಕಗಳಿಂದ ಇಸ್ರೇಲ್​ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದು, 2015ರಿಂದ ಯುಎಸ್ ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿದ್ದ.

1965ರಲ್ಲಿ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ ದೀಫ್ ಈತನ ನಿಜವಾದ ಹೆಸರು ಮೊಹಮ್ಮದ್ ದಿಯಾಬ್ ಅಲ್-ಮಸ್ರಿ ಎಂದಾಗಿದೆ. 2014ರಲ್ಲಿ ಗಾಜಾ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ದೀಫ್ ಅವರ ಪತ್ನಿ ಮತ್ತು ಏಳು ತಿಂಗಳ ಮಗುವನ್ನು ಕೊಂದಿತ್ತು.

ಇದನ್ನೂ ಓದಿ: ಇರಾನ್​ನ ಸಂಭಾವ್ಯ ದಾಳಿ ಎದುರಿಸಲು ಐಡಿಎಫ್ ಸಕಲ ರೀತಿಯಲ್ಲೂ ಸಜ್ಜು: ಇಸ್ರೇಲ್​ ಸೇನೆ - IDF gears up for Iran attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.