ETV Bharat / sports

ಭಾರತೀಯರ ಬ್ಯಾಡ್ಮಿಂಟನ್ ಕದನ:​ ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ಪ್ರಣಯ್​ ವಿರುದ್ಧ ಲಕ್ಷ್ಯ ಸೇನ್​ಗೆ ಗೆಲುವು - Paris olympics 2024

ಒಲಿಂಪಿಕ್ಸ್​ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ 21-12, 21-6 ಸೆಟ್​ಗಳಿಂದ ಪ್ರಣಯ್​ ವಿರುದ್ಧ ಗೆಲುವು ಸಾಧಿಸಿದ್ದಾರೆ. ​

ಲಕ್ಷ್ಯ ಸೇನ್​
ಲಕ್ಷ್ಯ ಸೇನ್​ (AP)
author img

By ETV Bharat Sports Team

Published : Aug 1, 2024, 7:03 PM IST

Updated : Aug 1, 2024, 7:43 PM IST

ಪ್ಯಾರಿಸ್​ (ಫ್ರಾನ್ಸ್​): ಪ್ಯಾರಿಸ್ ಒಲಿಂಪಿಕ್​ 2024ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್​ ಕೂಟ ತಲುಪಿದ್ದಾರೆ. ಸೇನ್ 21-12, 21-6 ಸೆಟ್​ಗಳಿಂದ ಭಾರತದ ಪ್ರಣಯ್ ಅವರನ್ನು ಸೋಲಿಸಿದರು. 40 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.

ಲಕ್ಷ್ಯ ಇದೀಗ 16ನೇ ಸುತ್ತಿಗೆ ತಲುಪಿದ್ದಾರೆ. ಒಲಿಂಪಿಕ್​ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಇವರಿಗಿಂತ ಮೊದಲು ಪಿ ಕಶ್ಯಪ್ 2012ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದೀಗ 12 ವರ್ಷಗಳ ನಂತರ ಭಾರತದ ಷಟ್ಲರ್​ ಈ ಸಾಧನೆ ಮಾಡಿದ್ದಾರೆ. ಸೇನ್​ ತಮ್ಮ ಮುಂದಿನ ಪಂದ್ಯದಲ್ಲಿ 12ನೇ ಶ್ರೇಯಾಂಕದ ಚೀನಾದ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ.

ಮೊದಲ ಸೆಟ್​: ಲಕ್ಷ್ಯ ಮೊದಲ ಸೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿ ಪ್ರಣಯ್‌ ಹೆಚ್‌ಎಸ್‌ ಗೆ ಯಾವುದೇ ಅವಕಾಶ ನೀಡದೆ ಮೊದಲಿನಿಂದಲೂ ಮುನ್ನಡೆ ಸಾಧಿಸಲು ಆರಂಭಿಸಿದರು. ಮೊದಲ ಸೆಟ್ ಅನ್ನು 21-12 ರಿಂದ ಏಕಪಕ್ಷೀಯ ರೀತಿಯಲ್ಲಿ ಗೆದ್ದು ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದರು.

ಎರಡನೇ ಸೆಟ್‌ನಲ್ಲೂ ತಮ್ಮ ಆಟವನ್ನು ಮುಂದುವರೆಸಿದ ಲಕ್ಷ್ಯ, ಇದರಲ್ಲೂ ಮೊದಲ ಸೆಟ್​ ಹಾಗೇ ಪ್ರದರ್ಶನ ತೋರಿದರು. ಅಂತಿಮವಾಗಿ 21-6 ಅಂತರಿಂದ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸುವ ಮೂಲಕ ಲಕ್ಷ್ಯ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದರು.

ಲಕ್ಷ್ಯ ಸೇನ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಕೆವಿನ್ ಕಾರ್ಡೆನ್ ಅವರನ್ನು ಸೋಲಿಸಿದ್ದರು. ಎರಡನೇ ಪಂದ್ಯ ಡ್ರಾ ಅಂತ್ಯ ಕಂಡಿತ್ತು. ನಂತರ ಪುರುಷರ ಸಿಂಗಲ್ಸ್‌ನ ಎಲ್ ಗುಂಪಿನಲ್ಲಿ ಬೆಲ್ಜಿಯಂನ ಜೂಲಿಯನ್ ಕ್ಯಾರೇಜ್ ಅವರನ್ನು ಸೋಲಿಸಿದರು.

ಇದನ್ನೂ ಓದಿ: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌: ಸಾತ್ವಿಕ್​-ಚಿರಾಗ್​ ಪದಕ ಕನಸು ಭಗ್ನ - Olympics Badminton

Last Updated : Aug 1, 2024, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.