ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ನ 20 ಕಿ.ಮೀ ಪುರುಷ ಮತ್ತು ಮಹಿಳೆಯರ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತ ನಿರಾಸೆ ಅನುಭವಿಸಿತು. ಇಂದು ಟ್ರೊಕಾಡೆರೊದಲ್ಲಿ ನಡೆದ ಪುರುಷರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ವಿಕಾಸ್ ಸಿಂಗ್ 30 ಮತ್ತು ಪರಮ್‌ಜಿತ್ ಸಿಂಗ್ ಬಿಶ್ತ್ 37ನೇ ಸ್ಥಾನ ಪಡೆದರು.
ವಿಕಾಸ್ ಭಾರತದ ಬೆಸ್ಟ್ ಫಿನಿಷರ್: ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂವರು ಭಾರತೀಯ ಅಥ್ಲೀಟ್‌ಗಳ ಪೈಕಿ ವಿಕಾಸ್ 1:22:36 ಸಮಯದೊಂದಿಗೆ 30ನೇಯವರಾಗಿ ಗುರಿ ತಲುಪಿದರು. ಇವರು ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 20 ಕಿ.ಮೀ ಓಟದ ರೇಸ್ ವಾಕ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿದ್ದರು.
ರೇಸ್ ವಾಕ್‌ನಲ್ಲಿ ಮತ್ತೆ ಸಿಗದ ಪದಕ: ಇನ್ನು, ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಪರಮ್‌ಜೀತ್ 1:23:48 ಗುರಿ ತಲುಪಿದರು. ಆದರೆ, ರಾಷ್ಟ್ರೀಯ ದಾಖಲೆ ಹೊಂದಿರುವ ಅಕ್ಷದೀಪ್ ಸಿಂಗ್ ಕೇವಲ 6 ಕಿ.ಮೀ ದೂರದಲ್ಲಿ ಓಟದಿಂದ ಹೊರಗುಳಿದರು. ಒಲಿಂಪಿಕ್ಸ್‌ನಲ್ಲಿ ಇದುವರೆಗೂ 20 ಕಿ.ಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತ ಯಾವುದೇ ಪದಕ ಗೆದ್ದಿಲ್ಲ.
ಮಹಿಳೆಯರ 20 ಕಿ.ಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಪ್ರಿಯಾಂಕಾ 41ನೇ ಸ್ಥಾನ ಪಡೆದರು. ಅವರು 1:45:55 ನಿಮಿಷಗಳಲ್ಲಿ ಗುರಿ ತಲುಪಿದರು. ಒಟ್ಟು 43 ಸ್ಪರ್ಧಿಗಳು ಭಾಗವಹಿಸಿದ್ದರು.
#GOLD! 🇪🇨
— The Olympic Games (@Olympics) August 1, 2024
Brian Daniel Pintado takes the first medal on Day 6, earning the win for Ecuador in the men’s 20km race walk.
It’s their first gold of the Games, and their fourth ever in Olympic history. 🎉@ECUADORolimpico | @WorldAthletics | #Athletics | #Paris2024 | #Samsung |… pic.twitter.com/FHVce1Nstq
ಈಕ್ವೆಡಾರ್ ಸ್ಪರ್ಧಿಗೆ ಚಿನ್ನ: ಈಕ್ವೆಡಾರ್‌ನ ಬ್ರಿಯಾನ್ ಡೇನಿಯಲ್ ಪಿಂಟಾಡೊ ಚಿನ್ನ ಗೆದ್ದರೆ, ಬ್ರೆಜಿಲ್‌ನ ಕೈಯೊ ಬೊನ್‌ಫಿಮ್ ಮತ್ತು ಸ್ಪೇನ್‌ನ ಅಲ್ವಾರೊ ಮಾರ್ಟಿನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಕೊರಳೊಡ್ಡಿದರು.
2023ರ ವಿಶ್ವ ಪದಕ ವಿಜೇತ ಪಿಂಟಾಡೊ 1:18:55 ನಿಮಿಷದಲ್ಲಿ ಗುರಿ ತಲುಪಿದರು. ಇದು ಈಕ್ವೆಡಾರ್‌ಗೆ ಲಭಿಸಿದ ಮೊದಲ ಪದಕ. ಇನ್ನುಳಿದಂತೆ, ಬ್ರೆಜಿಲ್‌ನ ಕೌಯಿ ಬೊನ್‌ಫಿಮ್ 1:19:09 ಮತ್ತು ಸ್ಪೇನ್‌ನ ಅಲ್ವಾರೊ ಮಾರ್ಟಿನ್ ಗುರಿ ತಲುಪಲು 1:19:11 ಸಮಯ ತೆಗೆದುಕೊಂಡರು.
ಇದನ್ನೂ ಓದಿ: ಒಲಿಂಪಿಕ್ಸ್ ಹಾಕಿ: ಭಾರತಕ್ಕೆ ಮೊದಲ ಸೋಲು; ಬೆಲ್ಜಿಯಂಗೆ ಹ್ಯಾಟ್ರಿಕ್ ಗೆಲುವು - Olympics Hockey