ಪ್ಯಾರಿಸ್(ಫ್ರಾನ್ಸ್): ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋಲು ಅನುಭವಿಸಿದೆ. ಗುರುವಾರ ನಡೆದ ಪೂಲ್-ಬಿ ಗುಂಪಿನ ಹಂತದ ಪಂದ್ಯದಲ್ಲಿ ಬೆಲ್ಜಿಯಂ 2-1 ಗೋಲುಗಳ ಅಂತರದಿಂದ ಭಾರತವನ್ನು ಸೋಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಟೇಬಲ್ ಟಾಪರ್ ಆಗಿ ಆಟ ಮುಂದುವರೆಸಿದೆ.
ಬೆಲ್ಜಿಯಂ ಪರ ತಿಬ್ಯು ಸ್ಟಾಕ್‌ಬ್ರೋಕ್ಸ್ (33ನೇ ನಿಮಿಷ) ಮತ್ತು ಜಾನ್-ಜಾನ್ ಡೊಹ್ಮೆನ್ (44ನೇ ನಿಮಿಷ) ಗೋಲು ಗಳಿಸಿದರೆ, ಭಾರತದ ಪರ 18ನೇ ನಿಮಿಷದಲ್ಲಿ ಅಭಿಷೇಕ್ ಏಕೈಕ ಗೋಲು ಹೊಡೆದರು.
ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡಕ್ಕೆ ಇದು ಮೊದಲ ಸೋಲು. ಕಳೆದ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ಭಾರತ ಪ್ಯಾರಿಸ್‌ನಲ್ಲಿ ತನ್ನ ಕೊನೆಯ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 3-2 ಗೋಲುಗಳ ಅಂತರದಿಂದ ಸೋಲಿಸಿತ್ತು. ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-0ರ ಅಂತರದಿಂದ ಜಯಿಸಿತ್ತು. ಅರ್ಜೆಂಟೀನಾ ವಿರುದ್ಧದ ಪಂದ್ಯ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು.
The #MenInBlue push the defending Olympic champions all the way at the #Paris2024Olympics.
— SAI Media (@Media_SAI) August 1, 2024
After taking the lead, they lose a close encounter 1-2 to Belgium.
Continue cheering for our Hockey Heroes and continue to #Cheer4Bharat!#OlympicsOnJioCinema @TheHockeyIndia… pic.twitter.com/e0xgjYbKHF
ಬೆಲ್ಜಿಯಂ ವಿರುದ್ಧದ ಇಂದಿನ ಪಂದ್ಯದಲ್ಲಿ ಭಾರತ ಮೊದಲಾರ್ಧದಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿತು. ಸ್ಟಾರ್ ಫಾರ್ವರ್ಡ್ ಆಟಗಾರ ಅಭಿಷೇಕ್ 18ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ಇದಾದ ನಂತರ ತಂಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು.
ಬೆಲ್ಜಿಯಂ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಅನ್ನು 2-0 ಅಂತರದಿಂದ ಸೋಲಿಸಿದೆ. ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 2-1 ಅಂತರದಿಂದ ಗೆಲುವು ದಾಖಲಿಸಿದರೆ, ಮೂರನೇ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್ನ 2020ರ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ವಿರುದ್ಧ 6-2 ಅಂತರದಿಂದ ಭರ್ಜರಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: ಶೂಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ - Third medal for India in Olympics