ಬೆಂಗಳೂರು: ಸದ್ಯ ಜಗತ್ತಿನೆಲ್ಲೆಡೆ ಹಣ ದುಬ್ಬರ ಹಿನ್ನೆಲೆ ಐಟಿ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ವಜಾ ಪ್ರಕ್ರಿಯೆ ಮುಂದುವರೆಸಿವೆ. ಇದರಲ್ಲಿ ಟೆಕ್ ದೈತ್ಯ ಗೂಗಲ್ ಹೊರತಲ್ಲ. ಕ್ಯಾಲಿಫೋರ್ನಿಯಾ ಮೂಲದ ಈ ಸಂಸ್ಥೆ ಕಳೆದ ಎರಡು ತಿಂಗಳ ಹಿಂದೆ 12 ಸಾವಿರ ಮಂದಿಗೆ ಪಿಂಕ್ ಸ್ಲಿಪ್ ನೀಡಿ ಅಚ್ಚರಿ ಮೂಡಿಸಿತ್ತು. ಈ ಮೂಲಕ ಸಂಸ್ಥೆಯ ಜಾಗತಿಕ ನೌಕರರಲ್ಲಿ ಶೇ 6ರಷ್ಟನ್ನು ಕಡಿತಗೊಳಿಸಿತು. ಈ ಎಲ್ಲ ಉದ್ಯೋಗ ವಜಾದ ಪರಿಸ್ಥಿತಿಯಲ್ಲೇ ಭಾರತೀಯ ಮೂಲಕ ಗೂಗಲ್ ಸಿಇಒ ಸುಂದರ್ ಪಿಚ್ಛೈ ಕಳೆದ ವರ್ಷದ ವೇತನ ಘೋಷಣೆಯಾಗಿದ್ದು, ಮೊತ್ತ ಕೇಳಿದರೆ ಅಚ್ಚರಿ ಪಡದೇ ಇರಲಾರಿರಿ.
2022ರಲ್ಲಿ ಪಿಚ್ಛೆ 226 ಡಾಲರ್ ಮಿಲಿಯನ್ ವೇತನ ಪಡೆದಿದ್ದಾರೆ. ಅಂದರೆ ಭಾರತೀಯ ರೂಪಾಯಿಯಲ್ಲಿ 1,854 ಕೋಟಿ ರೂ ಆಗುತ್ತದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ)ಗೆ ಸಲ್ಲಿಸಿದ ಮಾಹಿತಿ ಅನುಸಾರ ಅವರ ಗಳಿಗೆ ಸುಮಾರು 218 ಮಿಲಿಯನ್ ಮೌಲ್ಯದ ಸ್ಟಾಕ್ ಅವಾರ್ಡ್ ಹೊಂದಿದೆ. ಆದಾಗ್ಯೂ ಕಳೆದ ಮೂರು ವರ್ಷಗಳಿಂದ ಅವರ ವೇತನ ಸ್ಥಿರವಾಗಿದೆ. ಇನ್ನು ಪಿಚ್ಚೈ ಅವರ ಈ ವೇತನ ಸಂಸ್ಥೆಯ ಮಧ್ಯಮ ವರ್ಗದ 800 ಮಂದಿಯ ವೇತನಕ್ಕೆ ಸರಿಸಮವಾಗಿದೆ ಎನ್ನಲಾಗಿದೆ.
ಉದ್ಯೋಗ ಕಡಿತ ಘೋಷಿಸಿದ್ದ ಪಿಚ್ಛೈ: ಹಣ ದುಬ್ಬರದ ಹಿನ್ನೆಲೆಯಲ್ಲಿ ಸಂಸ್ಥೆಯ ಉದ್ಯೋಗಿಗಳ ಕಡಿತ ಅನಿವಾರ್ಯವಾದ ಹಿನ್ನಲೆ ಈ ಕ್ರಮ ಕೈಗೊಂಡಿದ್ದರು. ವ್ಯವಹಾರದ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. ಈ ಹಿನ್ನಲೆ ನಾವು ಸಂಸ್ಥೆಯ 12 ಸಾವಿರ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದ್ದೇವೆ. ಈ ಸಂಬಂಧ ಈಗಾಗಲೇ ಅಮೆರಿಕದ ಉದ್ಯೋಗಿಗಳಿ ಇ-ಮೇಲ್ ಕಳಿಸಲಾಗಿದ್ದು, ಉಳಿದ ದೇಶಗಳಿಗೂ ಅಲ್ಲಿನ ಕಾನೂನಿನ ಅನುಸಾರವಾಗಿ ವಜಾ ಪ್ರಕ್ರಿಯೆಗೆ ಮುಂದಾಗಿದ್ದೆವು ಎಂದು ಪಿಚ್ಛೈ 2023ರ ಆರಂಭದಲ್ಲಿ ತಿಳಿಸಿದ್ದರು.