Tips While Book Reading: ನಹಿ ಜ್ಞಾನೇನ ಸದೃಶ್ಯಂ ಅಂದ್ರೆ ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ ಎಂದರ್ಥ. ಈ ಜ್ಞಾನ ನಮಗೆ ಹಲವು ರೀತಿಯಲ್ಲಿ ದೊರೆಯುತ್ತದೆ. ಹಾಗೇ ಇಂದು ಇಂಟರ್ನೆಟ್ ಬಳಕೆ ಹೆಚ್ಚಿದ್ದು, ಇದರಿಂದಲೂ ಸಾಕಷ್ಟು ಮಾಹಿತಿ ಬೆರಳ ತುದಿಯಲ್ಲೇ ಸಿಗುತ್ತಿದೆ. ಆದ್ರೆ ಇಷ್ಟೆಲ್ಲ ಸಿಗುವಾಗ ಪುಸ್ತಕಗಳು ಮೂಲೆಗೆ ಸೇರುತ್ತಿವೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಪುಸ್ತಕಗಳಿಂದ ನಿಖರ ಮಾಹಿತಿ: ಕಂಪ್ಯೂಟರ್, ಮೊಬೈಲ್ ಇತ್ಯಾದಿ ಗ್ಯಾಜೆಟ್ಗಳಿದ್ದರೂ ಸಹ ನಮ್ಮ ಓದು ಪರಿಪೂರ್ಣವಾಗಿರಬೇಕೆಂದರೆ ನಮಗೆ ಪುಸ್ತಕದಿಂದಲೇ ಸಿಗುವ ಜ್ಞಾನವೇ ಶ್ರೇಷ್ಠ ಎಂದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಕಾರಣ ಪುಸ್ತಕವನ್ನು ಮುದ್ರಿಸುವ ಮೊದಲು ಅದಕ್ಕೆ ಲೇಖಕರು, ಅವರು ಆಯ್ದುಕೊಂಡು ಬರೆದ ಆಕರ ಗ್ರಂಥಗಳು ಇತ್ಯಾದಿ ನಿಖರವಾದ ಅಂಶಗಳು ಸ್ಪಷ್ಟ ಚಿತ್ರಣವನ್ನು ವಿಷಯದ ಬಗ್ಗೆ ನೀಡುತ್ತವೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
ಇನ್ನು, ಸಾಮಾನ್ಯವಾಗಿ ಹೆಚ್ಚಿನವರು ಪುಸ್ತಕ ಹಿಡಿದು ಓದಲು ಆರಂಭಿಸಿದ ಕೂಡಲೇ ನಿದ್ದೆಗೆ ಜಾರುತ್ತಾರೆ. ಇತರರು ಬೇರೆ ವಿಷಯದ ಮೇಲೆ ಗಮನ ಹರಿಸುತ್ತಾರೆ. ಸ್ಮಾರ್ಟ್ ಫೋನ್ ಸಿಕ್ಕರೆ ಅಷ್ಟೇ. ಆದರೆ ನಾವಿಟ್ಟ ಗುರಿಯನ್ನು ಸಾಧಿಸಬೇಕಾದ್ರೆ ಅಡೆತಡೆಗಳನ್ನು ಮೆಟ್ಟಿನಿಂತು ಮುನ್ನಡೆಯಬೇಕು. ಕೇವಲ ಅಂಕಗಳಷ್ಟೇ ಅಲ್ಲ, ಪುಸ್ತಕ ಜ್ಞಾನವನ್ನೂ ಸಹ ಪಡೆಯಬೇಕೆಂದ್ರೆ ಶ್ರದ್ಧೆಯಿಂದ ಓದಬೇಕು. ಅದಕ್ಕಾಗಿ ಕೆಲವು ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು.
- ನೀವು ಓದುವಾಗ ನಿಮ್ಮ ಸುತ್ತಲೂ ಶಾಂತ ವಾತಾವರಣವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ನೀವು ಓದುವ ಪ್ರದೇಶವೂ ಉತ್ತಮ ಬೆಳಕಿನಿಂದ ಕೂಡಿರುವಂತೆ ರೆಡಿ ಮಾಡಿಕೊಳ್ಳಿ.
- ಪ್ರತಿ ಬಾರಿಯೂ ನೀವು ಎದ್ದು ನೀರು ಕುಡಿಯುವ ಬದಲು ಒಂದು ಬಾಟಲಿಯಲ್ಲಿ ನೀರನ್ನು ತುಂಬಿಸಿಟ್ಟುಕೊಳ್ಳಿ.
- ನಿಮಗೆ ಬೇಕಾದ ವಸ್ತುಗಳು ನಿಮ್ಮ ಹತ್ತಿರದಲ್ಲೇ ಲಭ್ಯವಿರಲಿ.
- ಆಗಾಗ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುತ್ತಾ ಇರಿ.
- ಐದು ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳುವುದು ಉತ್ತಮ.
- ನೀವು ಯಾವ ಪುಸ್ತಕವನ್ನು ಓದಬೇಕೆಂಬುದನ್ನು ಮೊದಲೇ ನಿರ್ಧರಿಸಬೇಕು.
- ಯಾವಾಗ ಪೂರ್ಣಗೊಳಿಸಬೇಕೆಂಬ ಗುರಿಯನ್ನು ಸಹ ನೀವು ಹೊಂದಿರಬೇಕು.
- ನೀವು ಯೋಜಿಸಿದ್ದನ್ನು ಪೂರ್ಣಗೊಳಿಸಿದ್ದೀರಾ ಅಥವಾ ಇಲ್ಲವಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಪುಸ್ತಕಗಳನ್ನು ಓದುವಾಗ ಮಧ್ಯೆ ನೀರು ಕುಡಿಯುತ್ತಲೇ ಇರಿ.
- ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಆರೋಗ್ಯಕರ ತಿಂಡಿಗಳನ್ನು ಆಗಾಗ್ಗೆ ತಿನ್ನುತ್ತಿರಿ.
ಇದು ಸ್ಮಾರ್ಟ್‌ಫೋನ್‌ಗಳ ಯುಗ. ಹಾಗಾಗಿ ಫೋನ್ ಇಲ್ಲದೆ ಇರುವುದು ಕಷ್ಟ. ಆದರೆ, ಫೋನ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ನೋಟಿಫಿಕೇಶ್ಗಳು ಆಗಾಗ ನಿಮ್ಮನ್ನು ಡಿಸ್ಟ್ರಬ್ ಮಾಡಬಹುದು. ಅದಕ್ಕಾಗಿಯೇ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುವಾಗ ಮೊಬೈಲ್ಗಳನ್ನು ದೂರ ಇಡುವುದು ಒಳ್ಳೆಯದು.
ಓದಿ: ನೀಟ್ ಯುಜಿ ಮರುಪರೀಕ್ಷೆಯ ಫಲಿತಾಂಶ ಪ್ರಕಟ - NEET UG Re Test Results