ETV Bharat / health

ಎಷ್ಟು ದಿನಕ್ಕೊಮ್ಮೆ ದೇಹದ ತೂಕ ಪರೀಕ್ಷೆ ಮಾಡಬೇಕು? ಇದರ ಬಗ್ಗೆ ಇದ್ಯಾ ಐಡಿಯಾ - How often should check weigh

author img

By PTI

Published : Jul 1, 2024, 12:45 PM IST

ನಿಮ್ಮ ದೇಹದ ತೂಕ ಎಷ್ಟು, ಕಳೆದ ಬಾರಿ ಯಾವಾಗ ತೂಕ ಪರೀಕ್ಷಿಸಿದ್ರಿ? ಹೋಗಲಿ ಎಷ್ಟು ದಿನಕ್ಕೆ ಒಮ್ಮೆ ದೇಹದ ತೂಕ ಪರೀಕ್ಷೆ ಮಾಡಬೇಕು. ಇದರಿಂದ ಆಗುವ ಪ್ರಯೋಜನ ಏನು ಎಂಬ ಬಗ್ಗೆ ಚಿಂತಿಸಿದ್ದೀರಾ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

how-often-should-you-really-weigh-yourself
ದೇಹದ ತೂಕ ಪರೀಕ್ಷೆ (ಸಾಂದರ್ಭಿಕ ಚಿತ್ರ)

ಸಿಡ್ನಿ: ಆರೋಗ್ಯವಂತ ವ್ಯಕ್ತಿ ತೂಕ ನಿರ್ವಹಣೆಗೆ ಆಗಾಗ್ಗೆ ಪರೀಕ್ಷೆ ನಡೆಸುವುದು ಅಗತ್ಯ. ಆದರೆ, ಇದು ಎಷ್ಟು ದಿನಕ್ಕೆ ಒಮ್ಮೆ ಎಂಬ ವಿಚಾರ ಕುರಿತು ಅನೇಕ ವಾದ- ವಿವಾದಗಳಿವೆ. ಕೆಲವು ಮನೋವೈದ್ಯಕೀಯ ತಜ್ಞರ ಪ್ರಕಾರ, ಪದೇ ಪದೆ ದೇಹ ತೂಕ ನೋಡುವುದು ಅನಾರೋಗ್ಯಕರ ನಡವಳಿಕೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ಆದರೆ, ಕೆಲವರು ವಾರಕ್ಕೆ ಒಮ್ಮೆಯಾದರೂ ತೂಕ ಪರೀಕ್ಷಿಸಿಕೊಳ್ಳುವುದು ಮುಖ್ಯ. ಇದು ತೂಕ ಇಳಿಕೆ ಮಾಡುವ ಪಣ ತೊಟ್ಟವರಿಗೆ ಹಾಗೂ ಆರೋಗ್ಯಯುತ ತೂಕ ನಿರ್ವಹಣೆಗೆ ಸಹಾಯಕವಾಗಲಿದೆ ಎಂದಿದ್ದಾರೆ.

ಪ್ರತಿ ವಾರ ತೂಕ ಪರೀಕ್ಷೆಯಿಂದ ಆಗುವ ಪ್ರಯೋಜನ

ತೂಕ ನಿರ್ವಹಣೆಗೆ ಸಹಾಯ: ಸಂಶೋಧಕರು ಹೇಳುವಂತೆ ಈ ರೀತಿ ಮಾಡುವುದರಿಂದ ಪರಿಣಾಮಕಾರಿ ತೂಕ ನಷ್ಟದ ಜೊತೆಗೆ ತೂಕ ನಿರ್ವಹಣೆ ತಂತ್ರ ರೂಪಿಸಲು ಸಹಾಯ ಮಾಡುತ್ತದೆ. ಹಾಗೇ ಇದು ಪ್ರಸ್ತುತ ಇರುವ ತೂಕ ಹಾಗೂ ಅದರಲ್ಲಿ ಆಗಿರುವ ಬದಲಾವಣೆ ಬಗ್ಗೆ ಜಾಗೃತಿ ಹೆಚ್ಚಿಸುತ್ತದೆ.

ವ್ಯವಸ್ಥಿತವಾಗಿ ನಡೆಸಲಾದ 12 ಅಧ್ಯಯನಗಳ ಪ್ರಕಾರ, ವಾರ ಅಥವಾ ಪ್ರತಿದಿನ ತೂಕ ಪರೀಕ್ಷೆ ಮಾಡುವುದರಿಂದ ದೇಹದ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ವಾರಕ್ಕೆ ಒಮ್ಮೆ ತೂಕ ಪರಿಶೀಲಿಸುವುದರಿಂದ ತೂಕ ನಿರ್ವಹಣೆ ಕ್ರಮದ ಬಗ್ಗೆ ಮುನ್ನೆಚ್ಚರಿಕೆ ವಹಿಸಬಹುದು. ಇದರಿಂದ ಸ್ಥೂಲಕಾಯ, ಥೈರಾಯ್ಡ್​​, ಜೀರ್ಣಕ್ರಿಯೆ ಮತ್ತು ಮಧುಮೇಹದ ಬಗ್ಗೆ ಆರಂಭದಲ್ಲೇ ಕ್ರಮ ವಹಿಸಬಹುದು.

ದೇಹದ ಸಾಮಾನ್ಯ ಏರಿಳಿತ ತಕ್ಷಣಕ್ಕೆ ತಿಳಿಯಬಹುದು: ಒಂದೇ ದಿನದಲ್ಲಿ ದೇಹದ ತೂಕದಲ್ಲಿ ಏರಿಳಿತ ಕಾಣಬಹುದು. ಈ ಹಿನ್ನೆಲೆ ವಾರಕ್ಕೆ ಒಮ್ಮೆ ದೇಹದ ತೂಕ ಪರೀಕ್ಷೆ ನಡೆಸುವುದು ಅಗತ್ಯವಾಗಿದೆ. ದೈನಂದಿನ ದೇಹದ ಏರಿಳಿತದಲ್ಲಿ ಅನೇಕ ಅಂಶಗಳು ಕಾರಣವಾಗುತ್ತವೆ.

ದೇಹದ ತೂಕದಲ್ಲಿ ಏರಿಳಿತ..

ಆಹಾರ ಸೇವನೆ: ಸಾಮಾನ್ಯವಾಗಿ ಆಹಾರ ಸೇವನೆ ಬಳಿಕ ದೇಹದ ತೂಕ ಹೆಚ್ಚಾಗುತ್ತದೆ. ಈ ತೂಕವು ಆಹಾರ ಮತ್ತು ನೀರನ್ನು ಒಳಗೊಂಡಿರುತ್ತದೆ. ಇದು ತಾತ್ಕಾಲಿಕವಾಗಿದೆ. ಜೀರ್ಣಕ್ರಿಯೆ ಬಳಿಕ ಇದು ಸಾಮಾನ್ಯವಾಗಲಿದೆ. ಖಾಲಿ ಹೊಟ್ಟೆ ಮತ್ತು ರಾತ್ರಿ ಊಟದ ಬಳಿಕ ದೇಹದ ತೂಕದಲ್ಲಿ ವ್ಯತ್ಯಯ ಕಾಣಬಹುದು.

ವ್ಯಾಯಾಮ: ಜಿಮ್​, ವ್ಯಾಯಾಮದಂತಹ ಬೆವರಿಳಿಸುವ ಚಟುವಟಿಕೆ ಬಳಿಕವೂ ದೇಹ ತೂಕ ಕಡಿಮೆ ಆಗಲಿದೆ. ದೇಹದಲ್ಲಿನ ನೀರಿನ ನಷ್ಟ ಕೂಡ ತೂಕದ ಮೇಲೆ ಪರಿಣಾಮ ಬೀರುತ್ತದೆ.

ಹಾರ್ಮೋನ್​ ಬದಲಾವಣೆ: ಮಹಿಳೆಯರಲ್ಲಿ ಋತುಚಕ್ರ ಸಮಯದಲ್ಲಿನ ಏರಿಳಿತವು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ವೇಳೆ ಸುಮಾರು 0.52 ಕೆಜಿ ತೂಕ ಹೆಚ್ಚಲಿದೆ.

ಉಬ್ಬರದ ಸಂದರ್ಭ: ಸಾಮಾನ್ಯವಾಗಿ ಶೌಚಕ್ಕೆ ಹೋಗಿ ಬಂದಾಗ ತ್ಯಾಜ್ಯ ವಿಸರ್ಜನೆಯಿಂದ 100 ಗ್ರಾಂ ದೇಹದ ನಷ್ಟ ಉಂಟಾಗುತ್ತದೆ. ಈ ಎಲ್ಲಾ ಬದಲಾವಣೆಗಳು ದೇಹದ ಸಾಮಾನ್ಯ ಅಂಶವಾಗಿದ್ದು, ಇವು ತೂಕದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ಅಡ್ಡ ಪರಿಣಾಮ: ಸಾಮಾನ್ಯವಾಗಿ ದೇಹದ ತೂಕವನ್ನು ಪ್ರತಿ ವಾರ ಪರೀಕ್ಷಿಸಿದಾಗ ಇದರಿಂದ ಅನೇಕ ಬಾರಿ ಒಳ್ಳೆಯದಾಗುವುದಕ್ಕಿಂತ ಹಾನಿ ಆಗುತ್ತದೆ. ಕಾರಣ ನಿಯಮಿತವಾಗಿ ಒಂದೇ ತೂಕವನ್ನು ಕಾಯ್ದುಕೊಂಡಾಗ ಅದು ಖುಷಿ, ದುಃಖ ಎರಡಕ್ಕೂ ಕಾರಣವಾಗುತ್ತದೆ. ದೇಹದ ತೂಕ ಅಧಿಕವಾಗಿ ನಿಯಮಿತವಾಗಿ ಕಂಡಾಗ ಅದು ಚಿಂತೆಗೆ ಕಾರಣವಾಗಬಹುದು. ಅಥವಾ ದೀರ್ಘಕಾಲ ಸಾಮಾನ್ಯ ತೂಕವನ್ನು ಕಂಡಾಗ ಅದು ನಿಮ್ಮ ಡಯಟ್​ ಅನ್ನು ಹಾಳು ಮಾಡಿ ದೇಹ ತೂಕಕ್ಕೂ ಕಾರಣವಾಗಬಹುದು.

ಈ ಸಮಯದಲ್ಲಿ ನೋಡಿ ತೂಕ: ಸಾಮಾನ್ಯವಾಗಿ ಪ್ರತಿನಿತ್ಯ ತೂಕವನ್ನು ಪರೀಕ್ಷಿಸಬೇಕು ಎಂದು ನಿರ್ಧರಿಸಿದರೆ, ವಾರದಲ್ಲಿ ಯಾವುದಾದರೂ ಒಂದು ದಿನ, ನಿರ್ದಿಷ್ಟ ಸಮಯ ಮತ್ತು ಒಂದೇ ರೀತಿಯ ವಾತಾವರಣವನ್ನು ನಿಗದಿಪಡಿಸಿ. ಉದಾಹರಣೆಗೆ ಶುಕ್ರವಾರ ಬೆಳಗ್ಗೆ ಎಂದು ನಿರ್ಧರಿಸಿದರೆ, ಸ್ನಾನಕ್ಕೆ ಮೊದಲು ಶೌಚದ ಬಳಿಕ ನೋಡಿ. ಆದರೆ, ಈ ಸಮಯದಲ್ಲಿ ನೀವು ನೀರು ಅಥವಾ ಆಹಾರ ಸೇವನೆ ಮಾಡಬೇಡಿ. ಪ್ರತಿವಾರ ತೂಕ ಪರಿಶೀಲನೆ ನಿಮಗೆ ಆತಂಕ ಮತ್ತು ಒತ್ತಡ ಹೆಚ್ಚಿಸುತ್ತಿದ್ದರೆ, ಈ ಪರೀಕ್ಷೆಯನ್ನು ನಿಲ್ಲಿಸಿ.

ವಿಶೇಷ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಆರೋಗ್ಯ ಸಂಬಂಧಿತ ಟಿಪ್ಸ್ ಮತ್ತು ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕೂದಲು ಕಪ್ಪಾಗಬೇಕೇ? ತ್ವಚೆಯೂ ಹೊಳೆಯಬೇಕೇ? ಆಲೂಗಡ್ಡೆಯ ಹಲವು ಪ್ರಯೋಜನ ತಿಳಿಯಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.