ETV Bharat / business

ಉತ್ಪಾದನಾ ಚಟುವಟಿಕೆ ಹೆಚ್ಚಳ: 19 ವರ್ಷದ ಗರಿಷ್ಠ ಮಟ್ಟದಲ್ಲಿ ಉದ್ಯೋಗ ನೇಮಕಾತಿಗಳು - Manufacturing Activity Surges

author img

By ETV Bharat Karnataka Team

Published : Jul 1, 2024, 2:03 PM IST

ಭಾರತದ ಉತ್ಪಾದನಾ ಚಟುವಟಿಕೆಗಳು ವೇಗ ಪಡೆದುಕೊಂಡಿವೆ ಎಂದು ಎಚ್​ಸಿಬಿಸಿ ವರದಿ ಹೇಳಿದೆ.

ಉತ್ಪಾದನಾ ಚಟುವಟಿಕೆ ಹೆಚ್ಚಳ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಗ್ರಾಹಕರಿಂದ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಉತ್ಪಾದನಾ ಚಟುವಟಿಕೆಯು ಜೂನ್​ನಲ್ಲಿ ವೇಗ ಪಡೆದುಕೊಂಡಿದ್ದು, ಉದ್ಯೋಗ ನೇಮಕಾತಿಗಳು 19 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ತಲುಪಿವೆ ಎಂದು ಸೋಮವಾರ ಬಿಡುಗಡೆಯಾದ ಎಚ್ಎಸ್​ಬಿಸಿಯ ಭಾರತ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ವರದಿ ಹೇಳಿದೆ.

"ಭಾರತೀಯ ಉತ್ಪಾದನಾ ವಲಯವು ಜೂನ್ ತ್ರೈಮಾಸಿಕವನ್ನು ಬಲವಾದ ನೆಲೆಗಟ್ಟಿನಲ್ಲಿ ಕೊನೆಗೊಳಿಸಿತು. ಉತ್ಪಾದನಾ ಪಿಎಂಐ ಜೂನ್​ನಲ್ಲಿ ಶೇಕಡಾ 0.8ರಷ್ಟು ಏರಿಕೆಯಾಗಿ 58.3ಕ್ಕೆ ತಲುಪಿದೆ" ಎಂದು ಎಚ್ಎಸ್​ಬಿಸಿಯ ಜಾಗತಿಕ ಅರ್ಥಶಾಸ್ತ್ರಜ್ಞ ಮೈತ್ರೇಯಿ ದಾಸ್ ಹೇಳಿದ್ದಾರೆ.

ಸೂಚ್ಯಂಕಕ್ಕಾಗಿ ಸಮೀಕ್ಷೆ ನಡೆಸಿದ 400 ಸಂಸ್ಥೆಗಳು ಮತ್ತೊಂದು ತಿಂಗಳಿಗಾಗಿ ಹೊಸ ರಫ್ತು ಆದೇಶಗಳನ್ನು ಪಡೆದುಕೊಂಡಿರುವುದರಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ ರಫ್ತು ಬೆಳವಣಿಗೆಯು ಉತ್ತಮವಾಗಿರಲಿದೆ. ಏಷ್ಯಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಯುರೋಪ್ ಮತ್ತು ಯುಎಸ್​ ದೇಶಗಳಿಗೆ ಭಾರತದಿಂದ ರಫ್ತು ಪ್ರಮಾಣ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.

"ಉತ್ಪಾದನಾ ವಲಯದ ದೃಷ್ಟಿಕೋನವು ಸಕಾರಾತ್ಮಕವಾಗಿದೆ. ಸುಮಾರು 29 ಪ್ರತಿಶತದಷ್ಟು ಪ್ಯಾನೆಲಿಸ್ಟ್​ಗಳು ಮುಂಬರುವ ವರ್ಷದಲ್ಲಿ ಉತ್ಪಾದನೆಯ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದಾರೆ. ಮುಂಬರುವ ವರ್ಷದಲ್ಲಿ ಬೇಡಿಕೆ ಮತ್ತು ಆರ್ಡರ್ ಬುಕ್​ಗಳ ಪರಿಮಾಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಕಂಪನಿಗಳು ನಿರೀಕ್ಷಿಸಿವೆ. ಆದಾಗ್ಯೂ, ಒಟ್ಟಾರೆ ವಿಶ್ವಾಸದ ಮಟ್ಟವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ" ಎಂದು ಎಸ್‌&ಪಿ ಗ್ಲೋಬಲ್ ಹೇಳಿದೆ.

9.45 ಕೋಟಿ ಜಿಎಸ್​ಟಿ ಪಾವತಿಸುವಂತೆ ಜೊಮ್ಯಾಟೊಗೆ ನೋಟಿಸ್: ಬಡ್ಡಿ ಮತ್ತು ದಂಡದೊಂದಿಗೆ ಸುಮಾರು 9.45 ಕೋಟಿ ರೂ.ಗಳ ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸುವಂತೆ ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್ ಜೊಮಾಟೊಗೆ ನೋಟಿಸ್​ ನೀಡಲಾಗಿದೆ. ಕರ್ನಾಟಕದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಲೆಕ್ಕಪರಿಶೋಧನೆ) ಈ ನೋಟಿಸ್ ನೀಡಿದ್ದಾರೆ ಎಂದು ಕಂಪನಿಯು ಸ್ಟಾಕ್ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ತಿಳಿಸಿದೆ.

"ಕರ್ನಾಟಕದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಲೆಕ್ಕಪರಿಶೋಧನೆ), 2019-20ರ ಹಣಕಾಸು ವರ್ಷಕ್ಕೆ ಜಿಎಸ್‌ಟಿ ರಿಟರ್ನ್ಸ್ ಮತ್ತು ಖಾತೆಗಳ ಲೆಕ್ಕಪರಿಶೋಧನೆಗೆ ಅನುಸಾರವಾಗಿ ಕಂಪನಿಯು 5,01,95,462 ರೂ.ಗಳ ಜಿಎಸ್​ಟಿ ತೆರಿಗೆಯನ್ನು 3,93,58,743 ರೂ.ಗಳ ಬಡ್ಡಿ ಮತ್ತು 50,19,546 ರೂ.ಗಳ ದಂಡದೊಂದಿಗೆ ಪಾವತಿಸುವಂತೆ ತಿಳಿಸಿದ್ದಾರೆ" ಎಂದು ಜೊಮಾಟೊ ತನ್ನ ಬಿಎಸ್ಇ ಫೈಲಿಂಗ್​ ನಲ್ಲಿ ತಿಳಿಸಿದೆ.

ಜೊಮ್ಯಾಟೊಗೆ ತೆರಿಗೆ ನೋಟಿಸ್ ಬಂದಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ದೆಹಲಿಯ ಮಾರಾಟ ತೆರಿಗೆ ಕಚೇರಿಯು ಜೊಮ್ಯಾಟೊಗೆ 2 ಕೋಟಿ ರೂ.ಗಿಂತ ಹೆಚ್ಚಿನ ಜಿಎಸ್​ಟಿ ಪಾವತಿಸುವಂತೆ ನೋಟಿಸ್ ನೀಡಿತ್ತು. 2018ರಲ್ಲಿ 4.2 ಕೋಟಿ ರೂ.ಗಳಷ್ಟು ಕಡಿಮೆ ಜಿಎಸ್​ಟಿಯನ್ನು ಕಡಿಮೆ ಪಾವತಿಸಿದ ಆರೋಪದ ಮೇಲೆ ದೆಹಲಿ ಮತ್ತು ಕರ್ನಾಟಕದ ತೆರಿಗೆ ಅಧಿಕಾರಿಗಳಿಂದ ನೋಟಿಸ್ ಬಂದಿತ್ತು ಎಂದು ಈ ತಿಂಗಳ ಆರಂಭದಲ್ಲಿ ಜೊಮಾಟೊ ಹೇಳಿತ್ತು.

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಬಂಡವಾಳೀಕರಣ ಶೇ 14ರಷ್ಟು ಏರಿಕೆ: ಇದು ವಿಶ್ವದಲ್ಲೇ ಅತ್ಯಧಿಕ - INDIAN EQUITY MARKETS SURGE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.