ETV Bharat / business

ಸೆನ್ಸೆಕ್ಸ್​, ನಿಫ್ಟಿ ಏರಿಕೆ: ಇಂದು 4 ಲಕ್ಷ ಕೋಟಿ ರೂಗಳಷ್ಟು ಶ್ರೀಮಂತರಾದ ಹೂಡಿಕೆದಾರರು - Stock market today

author img

By ETV Bharat Karnataka Team

Published : Jul 1, 2024, 5:03 PM IST

ಭಾರತದ ಷೇರು ಮಾರುಕಟ್ಟೆಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆಯೊಂದಿಗೆ ಕೊನೆಗೊಂಡಿವೆ.

ಸೆನ್ಸೆಕ್ಸ್​, ನಿಫ್ಟಿ ಏರಿಕೆ
ಸೆನ್ಸೆಕ್ಸ್​, ನಿಫ್ಟಿ ಏರಿಕೆ (IANS)

ಮುಂಬೈ : ಭಾರತೀಯ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ50 ಜುಲೈ 1ರ ಸೋಮವಾರದಂದು ಉತ್ತಮ ಏರಿಕೆಯೊಂದಿಗೆ ಕೊನೆಗೊಂಡವು. ಆಯ್ದ ಹಣಕಾಸು ಮತ್ತು ಐಟಿ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

ಸಕಾರಾತ್ಮಕ ಜಾಗತಿಕ ಸೂಚನೆಗಳು ದೇಶೀಯ ಮಾರುಕಟ್ಟೆಯ ಮನಸ್ಥಿತಿಯ ಮೇಲೆ ಪ್ರಭಾವ ಬೀರಿದ್ದರಿಂದ ಸೆನ್ಸೆಕ್ಸ್ 443 ಪಾಯಿಂಟ್ ಅಥವಾ ಶೇಕಡಾ 0.56 ರಷ್ಟು ಏರಿಕೆ ಕಂಡು 79,476.19 ಕ್ಕೆ ಕೊನೆಗೊಂಡರೆ, ನಿಫ್ಟಿ50 131 ಪಾಯಿಂಟ್ ಅಥವಾ ಶೇಕಡಾ 0.55 ರಷ್ಟು ಏರಿಕೆ ಕಂಡು 24,141.95 ರಲ್ಲಿ ಕೊನೆಗೊಂಡಿದೆ.

ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಸೆನ್ಸೆಕ್ಸ್ ಸೂಚ್ಯಂಕದ ಲಾಭಕ್ಕೆ ಹೆಚ್ಚಿನ ಕೊಡುಗೆ ನೀಡಿವೆ. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 46,711.27 ಮತ್ತು 52,981.03 ರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದರಿಂದ ಮಧ್ಯಮ ಮತ್ತು ಸಣ್ಣ ಕ್ಯಾಪ್ ವಿಭಾಗಗಳು ಮತ್ತಷ್ಟು ಹೆಚ್ಚಿನ ಖರೀದಿಯನ್ನು ಕಂಡವು. ಅಂತಿಮವಾಗಿ, ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇಕಡಾ 1.11 ರಷ್ಟು ಏರಿಕೆಯಾಗಿ 46,670.66 ಕ್ಕೆ ಕೊನೆಗೊಂಡಿತು ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 1.58 ರಷ್ಟು ಏರಿಕೆಯೊಂದಿಗೆ 52,951.73 ರಲ್ಲಿ ಸ್ಥಿರವಾಯಿತು.

ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನ ದಿನ ಇದ್ದ ಸುಮಾರು 439.2 ಲಕ್ಷ ಕೋಟಿ ರೂ.ಗಳಿಂದ ಸುಮಾರು 443.1 ಲಕ್ಷ ಕೋಟಿ ರೂ.ಗೆ ಏರಿದೆ. ಇದರಿಂದ ಹೂಡಿಕೆದಾರರು ಒಂದೇ ದಿನದ ವಹಿವಾಟಿನಲ್ಲಿ ಸುಮಾರು 3.9 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರಾಗಿದ್ದಾರೆ.

ನಿಫ್ಟಿ50 ಸೂಚ್ಯಂಕದಲ್ಲಿ 31 ಷೇರುಗಳು ಏರಿಕೆಯಲ್ಲಿ ಕೊನೆಗೊಂಡವು. ಟೆಕ್ ಮಹೀಂದ್ರಾ (ಶೇ 2.98), ವಿಪ್ರೋ (ಶೇ 2.40) ಮತ್ತು ಬಜಾಜ್ ಫೈನಾನ್ಸ್ (ಶೇ 2.06) ಷೇರುಗಳು ಏರಿಕೆ ಕಂಡಿವೆ. ಎನ್​ಟಿಪಿಸಿ (ಶೇ 2.06), ಐಷರ್ ಮೋಟಾರ್ಸ್ (ಶೇ 0.92) ಮತ್ತು ಅಪೊಲೊ ಆಸ್ಪತ್ರೆ (ಶೇ 0.82) ಷೇರುಗಳು ಸೂಚ್ಯಂಕದಲ್ಲಿ ಹೆಚ್ಚು ನಷ್ಟ ಅನುಭವಿಸಿದವು.

ನಿಫ್ಟಿ ಪಿಎಸ್​ಯು ಬ್ಯಾಂಕ್ (ಶೇ 0.76 ರಷ್ಟು ಕುಸಿತ) ಮತ್ತು ರಿಯಾಲ್ಟಿ (ಶೇ 0.33 ರಷ್ಟು ಕುಸಿತ) ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ಲಾಭದೊಂದಿಗೆ ಕೊನೆಗೊಂಡವು. ನಿಫ್ಟಿ ಮೀಡಿಯಾ (ಶೇ 2.42) ಮತ್ತು ಐಟಿ (ಶೇ 1.97) ವಲಯ ಸೂಚ್ಯಂಕಗಳಲ್ಲಿ ಹೆಚ್ಚಿನ ಲಾಭ ಗಳಿಸಿದವು.

ಇದನ್ನೂ ಓದಿ : ಬ್ಯಾಂಕುಗಳಿಗೆ​ ಮರಳಿದ ಶೇ 97.87ರಷ್ಟು 2,000 ಮುಖಬೆಲೆಯ ನೋಟುಗಳು: ಆರ್​ಬಿಐ - 2000 currency notes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.