ಶ್ರೀನಗರ(ಉತ್ತರಾಖಂಡ): ರಾಜ್ಯದ ಚಮೋಲಿ ಜಿಲ್ಲೆಯ ಪ್ರಸಿದ್ದ ಸತೋಪಂತ್ ಸರೋವರ ಗಾತ್ರವು ಚಿಕ್ಕದಾಗಿದ್ದು, ನೀರಿನ ಮಟ್ಟವೂ ಕುಸಿಯುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳು ಇದಕ್ಕೆಲ್ಲ ಹವಾಮಾನ ಬದಲಾವಣೆ ಮುಖ್ಯ ಕಾರಣ ಅದರಿಂದಾಗಿಯೇ ಕೆರೆಯ ಗಾತ್ರ ಚಿಕ್ಕದಾಗುತ್ತಿದ್ದು, ನೀರಿನ ಮಟ್ಟವೂ ಕುಸಿಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೇಮಾವತಿ ನಂದನ್ ಬಹುಗುಣ ಸೆಂಟ್ರಲ್ ಗರ್ವಾಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, 2005 ರಿಂದ ಸತೋಪಂತ್ ಹಿಮನದಿ ಮತ್ತು 2013 ರಿಂದ ಸತೋಪಂತ್ ಸರೋವರದ ಮೇಲೆ ಅಧ್ಯಯನ ನಡೆಸಿದ್ದರು. ಇನ್ನು 2016ರಿಂದ ಹಿಮನದಿ ವಿಜ್ಞಾನಿ ಡಾ.ಆದಿತ್ಯ ಮಿಶ್ರಾ ಎಂಬುವವರು ಈ ಯೋಜನೆ ಕುರಿತು ಕೆಲಸ ಮಾಡುತ್ತಿದ್ದು, 2005ರಲ್ಲಿ ಸತೋಪಂತ್ ಸರೋವರದ ಉದ್ದ 300 ಮೀಟರ್ ಮತ್ತು ಅಗಲ 290 ಮೀಟರ್ ಇತ್ತು. ಆದರೇ ಕಾಲಾಂತರದಲ್ಲಿ ಸತೋಪಂತ್ ತಾಳವು ಒಂದು ಮೀಟರ್ನಷ್ಟು ಕುಗ್ಗಿದೆ ಎಂದು ತಿಳಿಸಿದ್ದಾರೆ.