ದೌಸಾ, ರಾಜಸ್ಥಾನ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಶನಿವಾರ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯಲ್ಲಿ ಮೂರ್ಛೆ ಹೋಗಿದ್ದಾನೆ. ಬಾಲಕ ಮೂರ್ಛೆ ಹೋಗಿದ್ದರಿಂದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಹೃದಯಾಘಾತದಿಂದಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.
ಶಾಲೆಯಲ್ಲಿ ನಡೆದಿದ್ದೇನು?: ಬಂದಿಕುಯಿ ಉಪವಿಭಾಗದ ಪಂಡಿತಪುರ ನಿವಾಸಿ ಯತೇಂದ್ರ ಉಪಾಧ್ಯಾಯ, ಬರ್ಹ್ ಬಿಶನ್ಪುರದಲ್ಲಿರುವ ಜ್ಯೋತಿಬಾ ಫುಲೆ ಪ್ರೌಢ ಶಾಲೆಯಲ್ಲಿ ಪ್ರಜ್ಞಾಹೀನರಾಗಿದ್ದರು. ಶಾಲಾ ಸಿಬ್ಬಂದಿ ವಿದ್ಯಾರ್ಥಿಯನ್ನು ಬಂಡಿಕುಯಿ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು , ಅಲ್ಲಿ ವೈದ್ಯರು ಬಾಲಕನನ್ನು ಪರೀಕ್ಷಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಯತೇಂದ್ರ ಅವರಿಗೆ ಹೃದಯಾಘಾತವಾಗಿದೆ ಎಂದು ಪ್ರಾಥಮಿಕ ಮಾಹಿತಿ ಹೊರ ಬಿದ್ದಿದ್ದು, ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವೇ ಗೊತ್ತಾಗಲಿದೆ ಎಂದು ಎಸ್‌ಎಚ್‌ಒ ಬಂಡಿಕುಯಿ ಪೊಲೀಸ್ ಠಾಣೆ ಪ್ರೇಮ್ ಚಂದ್ ಹೇಳಿದರು, ಇದಕ್ಕೆ ಬಾಲಕನ ಕುಟುಂಬ ಸದಸ್ಯರು ಒಪ್ಪಿಗೆ ನೀಡಿಲ್ಲ. ಉಪಾಧ್ಯಾಯ ಅವರು ಹೃದಯ ಸಂಬಂಧಿ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 5 ರಂದು ಅಂದರೆ ಶುಕ್ರವಾರವಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು ಎಂದು SHO ಹೇಳಿದರು.
ಬಾಲಕನನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದಿಷ್ಟು: ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಪವನ್ ಜರ್ವಾಲ್ ಈ ಬಗ್ಗೆ ಮಾತನಾಡಿದ್ದಾರೆ. ಶಾಲಾ ಸಿಬ್ಬಂದಿ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದರು. ಕರೆತಂದಾಗ ಆತನಿಗೆ ಹೃದಯ ಬಡಿತ ಇರಲಿಲ್ಲ. ನಾವು CPR ಮಾಡಿದೆವು. ಆದರೆ ಅದು ವ್ಯರ್ಥವಾಯಿತು. “ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಈ ನಡುವೆ ಬಾಲಕನ ಪೋಷಕರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿಲ್ಲ ಹೀಗಾಗಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಒಪ್ಪದ ಪೋಷಕರು: ಬಾಲಕನ ಅಂತ್ಯಕ್ರಿಯೆಯನ್ನು ಅಲ್ವಾರ್‌ನಲ್ಲಿರುವ ಅವರ ಸ್ವಗ್ರಾಮದಲ್ಲಿ ನೆರವೇರಿಸುವುದಾಗಿ ಬಾಲಕನ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಕುಟುಂಬದವರ ಪ್ರಕಾರ, ಸುಮಾರು 3 ವರ್ಷಗಳ ಹಿಂದೆ, ವಿದ್ಯಾರ್ಥಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು, ಈ ಕಾರಣದಿಂದಾಗಿ 15 ದಿನಗಳ ಕಾಲ ಜೆಕೆ ಲೋನ್ ಆಸ್ಪತ್ರೆಗೆ ಕೂಡಾ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನು ಓದಿ: 30 ವಾರದ ಭ್ರೂಣದ ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅನುಮತಿ - terminate 30 week pregnancy