ಲೇಹ್(ಲಡಾಖ್): ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿಯೋಗವು ಲಡಾಖ್‌ಗೆ ಅಧ್ಯಯನ ಪ್ರವಾಸ ಕೈಗೊಂಡಿದೆ. ಸಮಿತಿಯ ಅಧ್ಯಕ್ಷ ಸಿಸಿ ಪಾಟೀಲ್ ನೇತೃತ್ವದಲ್ಲಿ ಸದಸ್ಯರು ಲಡಾಖ್‌ಗೆ ತೆರಳಿದ್ದು, ಇಂದು ಲೆಫ್ಟಿನೆಂಟ್ ಗವರ್ನರ್ ಬಿ.ಡಿ ಮಿಶ್ರಾ ಅವರನ್ನು ಭೇಟಿ ಮಾಡಿದರು.
ಸಮಿತಿಯ ಸದಸ್ಯರ ಸಂಕ್ಷಿಪ್ತ ಪರಿಚಯದ ನಂತರ ಸಮಿತಿಯ ಅಧ್ಯಕ್ಷ ಪಾಟೀಲ್ ಅವರು ಅಧ್ಯಯನ ಪ್ರವಾಸದ ಉದ್ದೇಶ ಮತ್ತು ಸಮಿತಿಯ ಕಾರ್ಯಚಟುವಟಿಕೆಯನ್ನು ಎಚ್‌ಎಲ್‌ಜಿಗೆ ವಿವರಿಸಿದರು. ಸಮಿತಿಯ ಸದಸ್ಯರು ಲಡಾಖ್‌ನಲ್ಲಿ ಕೃಷಿ, ಜಲವಿದ್ಯುತ್ ಯೋಜನೆಗಳು, ಕೈಗಾರಿಕಾ ನೀತಿ, ಹಿಲ್ ಕೌನ್ಸಿಲ್‌ಗಳ ಚುನಾವಣೆ ಮತ್ತು ಆಡಳಿತದಲ್ಲಿ ಅವರ ಪಾತ್ರ, ಲಡಾಖ್‌ನಲ್ಲಿನ ಅಪರಾಧ ಪ್ರಮಾಣ ಮತ್ತು ಜನರಿಗೆ ಒದಗಿಸಲಾದ ಆರೋಗ್ಯ ಸೌಲಭ್ಯಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು.
ಎಚ್‌ಎಲ್‌ಜಿ ಬಿ.ಡಿ ಮಿಶ್ರಾ ಮಾತನಾಡಿ, ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ಸೇವೆ ಸಲ್ಲಿಸಿದ ಪ್ರಸಿದ್ಧ ತಂಡದೊಂದಿಗೆ ಸಭೆ ನಡೆಸುತ್ತಿರುವುದಕ್ಕೆ ಸಂತೋಷವಾಗಿದೆ. 2019 ರಲ್ಲಿ ಕೇಂದ್ರಾಡಳಿತ ಪ್ರದೇಶವಾದ ನಂತರ ಲಡಾಖ್ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಪ್ರದೇಶವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗ ಜನರು ಬಜೆಟ್ ಹಂಚಿಕೆ ಮತ್ತು ಇತರ ವಿಚಾರದಲ್ಲಿ ನಿರ್ಲಕ್ಷ್ಯ ಎದುರಿಸಿದ್ದಾರೆ ಎಂದು ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರನ್ನು ಲೆಫ್ಟಿನೆಂಟ್ ಗವರ್ನರ್ ಬಿ.ಡಿ ಮಿಶ್ರಾ ಸನ್ಮಾನಿಸಿದರು. ಈ ವೇಳೆ ಎಚ್‌ಎಲ್‌ಜಿಯ ಸಲಹೆಗಾರ ಡಾ ಪವನ್ ಕೊತ್ವಾಲ್, ಲಡಾಖ್ ಎಡಿಜಿಪಿ ಡಾ ಎಸ್‌ಡಿ ಸಿಂಗ್ ಜಮ್ವಾಲ್ ಉಪಸ್ಥಿತರಿದ್ದರು.
ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಜುಲೈ 4 ರಿಂದ 7 ರವರೆಗೆ ಲಡಾಖ್‌ಗೆ ಅಧ್ಯಯನ ಪ್ರವಾಸ ಮಾಡಲಿದೆ.
ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ 2 ಕಡೆ ಗುಂಡಿನ ಚಕಮಕಿ: ಯೋಧ ಹುತಾತ್ಮ, ನಾಲ್ವರು ಉಗ್ರರ ಬೇಟೆ - Kulgam encounter