ಕರ್ನಾಟಕ

karnataka

ಬಿಸಿ ಅಲೆಗಳನ್ನು ಉಗುಳುವ ಮೂಲಕ ಹೋರಾಡುತ್ತಿದೆ ಭೂಮಿ...

By

Published : Oct 4, 2020, 12:01 AM IST

ಕರಾವಳಿಯಾದ್ಯಂತ ಬಿಸಿ ಅಲೆಗಳ ಕಾರಣ ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ಪಶ್ಚಿಮ ಕರಾವಳಿಯ 12 ರಾಜ್ಯಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಆಕಾಶವು ಕಿತ್ತಳೆ ಬಣ್ಣದ ಬೆಂಕಿಯ ಹೊಳಪಾಗಿ ಬದಲಾಗಿದೆ. ಆ ಬೆಂಕಿಯಿಂದ ಹೊರ ಹೊಮ್ಮುತ್ತಿರುವ ಹೊಗೆ 10 ಕಿಲೋಮೀಟರ್ ಎತ್ತರಕ್ಕೆ ಹರಡಿರುವುದು ಮಾತ್ರವಲ್ಲ, ಅದು ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ಪೂರ್ವ ಕರಾವಳಿ ರಾಜ್ಯಗಳನ್ನು ತಲುಪಿ ವಾಯುಮಾಲಿನ್ಯವನ್ನು ಇನ್ನಿಲ್ಲದಂತೆ ಹೆಚ್ಚಿಸಿದೆ.

Earth
ಜಾಗತಿಕ ತಾಪಮಾನ ಏರಿಕೆ

ಜಾಗತಿಕ ತಾಪಮಾನ ಏರಿಕೆ - ಗಂಭೀರ ಕಾಳಜಿಗೆ ಇದೇ ಒಂದು ಕಾರಣ

ಇಡೀ ಜಗತ್ತು ಭಾರೀ ವಿಪತ್ತುಗಳ ಸರಣಿಯಿಂದ ತತ್ತರಿಸುತ್ತಿದೆ. ಯಾವಾಗಲೂ ವಿಶ್ವದ ಯಾವುದೋ ಒಂದು ಮೂಲೆಯಲ್ಲಿ ಅನಾಹುತ ನಡೆಯುತ್ತಲೆ ಇರುತ್ತದೆ. ಬೆಂಕಿ, ಚಂಡಮಾರುತ, ಪ್ರವಾಹ, ಕ್ಷಾಮ ಇವೇ ಮುಂತಾದ ಜನರಿಗೆ ನೋವುಂಟು ನೀಡುವಂತಹ ಅಸ್ತಿತ್ವವನ್ನೇ ಅಲುಗಾಡಿಸುವಂತಹ ಯಾವುದೋ ಒಂದು ವಿಪತ್ತು ನಡೆದೇ ಇರುತ್ತದೆ. ಕರಾವಳಿಯಾದ್ಯಂತ ಬಿಸಿ ಅಲೆಗಳ ಕಾರಣ ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ಪಶ್ಚಿಮ ಕರಾವಳಿಯ 12 ರಾಜ್ಯಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಆಕಾಶವು ಕಿತ್ತಳೆ ಬಣ್ಣದ ಬೆಂಕಿಯ ಹೊಳಪಾಗಿ ಬದಲಾಗಿದೆ. ಆ ಬೆಂಕಿಯಿಂದ ಹೊರ ಹೊಮ್ಮುತ್ತಿರುವ ಹೊಗೆ 10 ಕಿಲೋಮೀಟರ್ ಎತ್ತರಕ್ಕೆ ಹರಡಿರುವುದು ಮಾತ್ರವಲ್ಲ, ಅದು ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ಪೂರ್ವ ಕರಾವಳಿ ರಾಜ್ಯಗಳನ್ನು ತಲುಪಿ ವಾಯುಮಾಲಿನ್ಯವನ್ನು ಇನ್ನಿಲ್ಲದಂತೆ ಹೆಚ್ಚಿಸಿದೆ. ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದಲ್ಲಿ ಇದುವರೆಗೆ ಈ ಅಗ್ನಿಯ ಕೆನ್ನಾಲಿಗೆಯಲ್ಲಿ ಸುಟ್ಟು ಹೋದ ಪ್ರದೇಶವು 69 ಮಿಲಿಯನ್ ಎಕರೆಗಳು. ಅದರಲ್ಲಿ 33 ದಶಲಕ್ಷ ಎಕರೆ ಪ್ರದೇಶ ಕೇವಲ ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ ಸುಟ್ಟು ಹೋಗಿದೆ. ಉತ್ತರ ಧ್ರುವದಲ್ಲಿ ಅಲಾಸ್ಕಾ ಮತ್ತು ಸೈಬೀರಿಯಾದಿಂದ ದಕ್ಷಿಣಕ್ಕೆ ಆಸ್ಟ್ರೇಲಿಯಾ ಮತ್ತು ಪೂರ್ವದಲ್ಲಿ ಏಷ್ಯಾ ಮತ್ತು ಪಶ್ಚಿಮ ಅಮೆರಿಕಾದ ಪೆಸಿಫಿಕ್ ಕರಾವಳಿಯವರೆಗಿನ ಕಾಡುಗಳಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಕಡೆ ಬೆಂಕಿ ಹೊತ್ತಿ ಉರಿಯುತ್ತಿರುತ್ತದೆ.

ಎಲ್ಲಾ ರಾಷ್ಟ್ರಗಳಿಗೆ ಇದೆ ಆತಂಕ

ಭಾರತದಲ್ಲಿ, ಶೇಕಡಾ 21.4 ರಷ್ಟು ಕಾಡು ಪ್ರದೇಶವನ್ನು ಕಾಡಿನ ಬೆಂಕಿ ಪೀಡಿತ ಪ್ರದೇಶಗಳಾಗಿ ಗುರುತಿಸಲಾಗಿದೆ. ಕಳೆದ ವರ್ಷ ನಮ್ಮ ಅರಣ್ಯ ಪ್ರದೇಶಗಳಲ್ಲಿ 29,547 ಬೆಂಕಿ ಅನಾಹುತ ಪ್ರಕರಣಗಳು ದಾಖಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಕಾಡಿನ ಬೆಂಕಿ ಕಾಣಿಸಿಕೊಂಡಿದೆ. ಸೆಪ್ಟೆಂಬರ್ 1 ರಂದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರವಾಹದಲ್ಲಿ 190 ಜನರು ಸಾವನ್ನಪ್ಪಿದ್ದರೆ, ನೇಪಾಳ, ಚಾಡ್, ಸೆನೆಗಲ್, ಸುಡಾನ್, ನೈಜೀರಿಯಾ, ಕೀನ್ಯಾ, ಬುರ್ಕಿನಾ ಫಾಸೊ, ಘಾನಾ, ಪಾಕಿಸ್ತಾನ, ಕ್ಯಾಮರೂನ್, ಅಲ್ಜೀರಿಯಾ, ಟುನೀಶಿಯಾ, ವಿಯೆಟ್ನಾಂ ಮತ್ತು ಉಗಾಂಡಾ ದೇಶಗಳು ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದವು. ಆಗಸ್ಟ್‌ ತಿಂಗಳಲ್ಲಿ, ನಮ್ಮ ದೇಶದ (ಭಾರತ) 11 ರಾಜ್ಯಗಳಲ್ಲಿ ಸುಮಾರು 868 ಜನರು ಪ್ರವಾಹ ಹೊಡೆತಕ್ಕೆ ಸಿಲುಕಿದ್ದಾರೆ ಮತ್ತು ದೇಶದ ಐದನೇ ಒಂದು ಭಾಗವು ಬರಗಾಲದಿಂದ ಬಳಲುತ್ತಿದೆ. ಅಮೆರಿಕದ ಮೂರನೇ ಒಂದು ಭಾಗದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. 5 ಕೋಟಿ 30 ಮಿಲಿಯನ್ ಜನರನ್ನು ಬರಗಾಲದಿಂದ ತೊಂದರೆ ಅನುಭವಿಸಿದ ಸಂತ್ರಸ್ತರೆಂದು ಗುರುತಿಸಲಾಗಿದೆ. ಇವೆಲ್ಲವೂ ಭೂಮಿಯ ಮೇಲೆ ವಿಪತ್ತಿಗೆ ಗುರಿಯಾಗದ ದೇಶವಿಲ್ಲ ಎಂದು ಸೂಚಿಸುತ್ತಿದೆ.

ಈ ವರ್ಷ, ಕೋವಿಡ್ ಮಹಾಮಾರಿ ಸಾಂಕ್ರಾಮಿಕ ಹೊಡೆತದಿಂದಾಗಿ ಸಾಮಾನ್ಯ ಜನ ಜೀವನವನ್ನು ಸ್ಥಗಿತಗೊಂಡಿದೆಯಾದರೂ, ಸುಡುವ ಕಾಡುಗಳು ಮತ್ತು ಪೀಟ್‌ ಲ್ಯಾಂಡ್‌ಗಳಿಂದ ಇಂಗಾಲದ ಹೊರಸೂಸುವಿಕೆಯು ಕೇವಲ ಶೇ 4 ರಿಂದ 7 ರಷ್ಟು ಮಾತ್ರ ಇಳಿಕೆಯಾಗುವ ನಿರೀಕ್ಷೆ ಇದೆ. 2010 ಕ್ಕೆ ಹೋಲಿಸಿದರೆ 2030 ರ ಅಂತ್ಯದ ವೇಳೆಗೆ ಇಂಗಾಲದ ಹೊರಸೂಸುವಿಕೆಯು ಕನಿಷ್ಠ 45% ರಷ್ಟು ಕುಸಿಯಬೇಕು ಎಂದು ಜಾಗತಿಕ ತಾಪಮಾನ ವರದಿಯು ಸೂಚಿಸುತ್ತದೆಯಾದರೂ, ಅದನ್ನು ಸಾಧಿಸಲು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಸರ್ಕಾರಗಳು, ಸಾರ್ವಜನಿಕರು ಮತ್ತು ಮಾಧ್ಯಮಗಳು ಈ ಸಮಸ್ಯೆಯನ್ನು ಗುರುತಿಸಲು ಸಹ ಸಿದ್ಧವಾಗಿಲ್ಲ. 2019 ರ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷವು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಉಲ್ಲೇಖಿಸಿಲ್ಲ.

ವಿಶ್ವ ಪರಿಸರ ಸಂಸ್ಥೆ ಮತ್ತು ಇತರ ಆರು ಪ್ರಮುಖ ವೈಜ್ಞಾನಿಕ ಸಂಸ್ಥೆಗಳೊಂದಿಗೆ 2020 ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ ವರದಿಯು 2024 ರ ವೇಳೆಗೆ ಜಾಗತಿಕ ತಾಪಮಾನ ಏರಿಕೆಯು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತದೆ ಎಂದು ತಿಳಿಸುತ್ತದೆ. ಶೀಘ್ರದಲ್ಲೇ, ಈ ಮಿತಿಯ ಹೆಚ್ಚಳವು ಶಾಶ್ವತವಾಗಿ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾದ ಮತ್ತೊಂದು ವರದಿಯು ಹವಾಮಾನ ಬಿಕ್ಕಟ್ಟಿನಿಂದಾಗಿ 2050 ರ ವೇಳೆಗೆ 120 ಶತಕೋಟಿ ಜನರು ಸ್ಥಳಾಂತರಗೊಳ್ಳುತ್ತಾರೆ, ಇದು ಇಡೀ ಜಗತ್ತನ್ನು ಕುಗ್ಗಿಸುವ ಸಾಧ್ಯತೆಯಿದೆ. ಮೇಲ್ಮೈ ತಾಪಮಾನವು ಕಡಿಮೆಯಾದಾಗ ಸಮಭಾಜಕವು ಪೆಸಿಫಿಕ್ ಮಹಾಸಾಗರದ ಮೂಲಕ ಹಾದು ಹೋಗುವ ಸಂದರ್ಭ ಸಾಮಾನ್ಯ ತಾಪಮಾನಕ್ಕಿಂತ 0.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಆಗುತ್ತದೆ, ಇದನ್ನು ಲಾ ನೀನಾ(La Nina) ಪರಿಣಾಮ ಎಂದು ಕರೆಯಲಾಗುತ್ತದೆ ಮತ್ತು ಇದು ಅಮೆರಿಕದ ಪೆಸಿಫಿಕ್ ಕರಾವಳಿಯಲ್ಲಿ ಹೆಚ್ಚುತ್ತಿರುವ ಬೆಂಕಿಯ ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿದೆ.

ತೀವ್ರ ಹವಾಮಾನ ವೈಪರಿತ್ಯ ಪರಿಸ್ಥಿತಿಗಳು

ಸ್ಪ್ಯಾನಿಷ್ ಪದ 'ಲಾ ನೀನಾ' ಎಂದರೆ 'ಲಿಟಲ್ ಗರ್ಲ್'. ತಾಪಮಾನವು ಕನಿಷ್ಠ 0.5 ಡಿಗ್ರಿ ಸೆಲ್ಸಿಯಸ್ ಏರಿದಾಗ ಉಂಟಾಗುವ ಸ್ಥಿತಿಯನ್ನು 'ಎಲ್ ನಿನ್' (ಲಿಟಲ್ ಬಾಯ್) ಎಂದು ಕರೆಯಲಾಗುತ್ತದೆ. ಲಾ ನೀನಾ ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ದಕ್ಷಿಣ ಮತ್ತು ಪಶ್ಚಿಮ ಪೆಸಿಫಿಕ್ ತೀರಗಳಿಗೆ ಶುಷ್ಕ, ಬಿಸಿ ಗಾಳಿ ಮತ್ತು ಉತ್ತರ ಮತ್ತು ಪಶ್ಚಿಮ ಪೆಸಿಫಿಕ್ ತೀರಗಳಿಗೆ ಶೀತ ಮತ್ತು ಆರ್ದ್ರ ಮಾರುತಗಳನ್ನು ತರುತ್ತದೆ. ಇದು ಪೂರ್ವ ಅಟ್ಲಾಂಟಿಕ್ ಕರಾವಳಿಯ ಪ್ರಮುಖ ಬಿರುಗಾಳಿಗಳಿಗೆ ಸೂಕ್ತವಾದ ಭೌತಿಕ ಪರಿಸ್ಥಿತಿಗಳನ್ನು ಒದಗಿಸುತ್ತಿದೆ. ಲಾ ನೀನಾ ಒಂದು ನೈಸರ್ಗಿಕ ಪ್ರಕ್ರಿಯೆ. ಆದರೆ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಇದು ಬಿಸಿ ಅಲೆಗಳು, ಕಾಡಿನ ಬೆಂಕಿ ಮತ್ತು ಜೊತೆಯಾಗಿ ಬರುವ ದೊಡ್ಡ ಬಿರುಗಾಳಿಗಳಿಗೆ ಕಾರಣವಾಗುತ್ತದೆ ಎಂದು ಪ್ರಮುಖ ಹವಾಮಾನ ತಜ್ಞ ಮೈಕೆಲ್ ಮಾನ್ ಹೇಳುತ್ತಾರೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೆಚ್ಚುತ್ತಿರುವ ತಾಪಮಾನದ ಮೇಲೆ ಲಾ ನಿನಾದ ಪ್ರಭಾವದೊಂದಿಗೆ, ಅಮೆರಿಕದಲ್ಲಿ ಬೆಂಕಿ ಅನಿಯಂತ್ರಿತವಾಗಿ ಹರಡುತ್ತಿದೆ. 1970 ರ ದಶಕಕ್ಕೆ ಹೋಲಿಸಿದರೆ ಕ್ಯಾಲಿಫೋರ್ನಿಯಾದ ಕಾಡುಗಳನ್ನು ಸುಡುವ ವಾರ್ಷಿಕ ವಿಸ್ತೀರ್ಣದ ಪ್ರಮಾಣ ಸುಮಾರು ಐದು ಪಟ್ಟು ಹೆಚ್ಚಾಗಿದೆ. ಇದು ಬೇಸಿಗೆಯಲ್ಲಿ ಎಂಟು ಪಟ್ಟು ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ತಾಪಮಾನದೊಂದಿಗೆ ಮರಗಳು ಮತ್ತು ಹುಲ್ಲು ಭಾರೀ ಪ್ರಮಾಣದಲ್ಲಿ ಒಣಗುವುದು ಇದಕ್ಕೆ ಪ್ರಮುಖ ಕಾರಣ. ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ, ಪಶ್ಚಿಮ ಕರಾವಳಿ ಅಮೆರಿಕಾದಲ್ಲಿ ಕಾಡ್ಗಿಚ್ಚು ಅನಿಯಂತ್ರಿತವಾಗಿ ಉಲ್ಬಣಗೊಳ್ಳುತ್ತಿರುವಾಗ, ಕೊಲೊರಾಡೋ ಮತ್ತು ವ್ಯೋಮಿಂಗ್‌ನಂತಹ ನಗರಗಳು ಇರುವ ಈ ಸ್ಥಳದ ಪೂರ್ವಕ್ಕೆ ಕೆಲವು ನೂರು ಮೈಲುಗಳಷ್ಟು ದೂರದಲ್ಲಿ, ಸುಮಾರು 33 ಡಿಗ್ರಿ ಸೆಲ್ಸಿಯಸ್‌ ನಷ್ಟು ತಾಪಮಾನದಲ್ಲಿ ತೀವ್ರ ಕುಸಿತದೊಂದಿಗೆ ಹಿಮಪಾತವಾಗುತ್ತಿದೆ. ಸೆ. 7 ರ ಸಂಜೆಯಿಂದ ಪ್ರಾರಂಭವಾಗಿ ಮರುದಿನ ಬೆಳಗ್ಗೆ ತನಕ ನಿರಂತರವಾಗಿ 18 ಗಂಟೆಗಳ ಕಾಲ. ಹಿಮವು ಮೇಲ್ಮೈಯಿಂದ ಸುಮಾರು 2 ಅಡಿ ಆಳಕ್ಕೆ ಭೂಮಿಗೆ ಹಿಮದ ಹೊದಿಕೆ ಹೊದಿಸಿತು. ಅದೇ ಸಮಯದಲ್ಲಿ, ಯುನೈಟೇಡ್‌ ಸ್ಟೇಟ್ಸ್‌ ಆಫ್‌ ಅಮೆರಿಕದ ಹವಾಮಾನ ಇಲಾಖೆ ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದ ಪೂರ್ವ ಕರಾವಳಿಯಲ್ಲಿ ಗರಿಷ್ಠ 25 ಚಂಡಮಾರುತಗಳನ್ನು ಮುನ್ಸೂಚನೆ ನೀಡಿದೆ.

ಇದು ತೀವ್ರ ಹವಾಮಾನ ವೈಪರಿತ್ಯ ಪರಿಸ್ಥಿತಿಗಳ ಸಂಕೇತವಾಗಿದೆ. ಅಂತಹ ವಿಪರೀತ ಹವಾಮಾನ ಬದಲಾವಣೆಗಳು ಮತ್ತು ಹವಾಮಾನ ಪರಿಸ್ಥಿತಿಗಳೊಂದಿಗೆ, ಹೊಸ ತೀವ್ರ ಹವಾಮಾನವು ಸ್ವತಃ ಹೊಸ ಸಾಮಾನ್ಯ ಶ್ರೇಣಿಯಾಗುತ್ತಿದೆ !! ಪ್ರಸ್ತುತ, ಪರಿಸ್ಥಿತಿಗಳು ಅಭಿವೃದ್ಧಿ ಹೊಂದುತ್ತಿವೆ, ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಒಂದೊಮ್ಮೆ ಈ ಪರಿಸ್ಥಿತಿ ಎದುರಾದರೆ, ವಿಜ್ಞಾನಿಗಳು ಹೇಳುವ ಪ್ರಕಾರ, ಪ್ರಸ್ತುತ ವಿಶ್ವದಲ್ಲಿ ಇರುವ ಜನಸಂಖ್ಯೆಯ ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ಬದುಕಲು ಸಾಧ್ಯವಾಗುತ್ತದೆ. ಸಹಿಸಿಕೊಳ್ಳುವುದು ಕಷ್ಟವಾದ ಇಂತಹ ಪರಿಸ್ಥಿತಿಯನ್ನು ತಡೆಯಲು ಎಲ್ಲರೂ ಮುಂದೆ ಸಾಗಬೇಕು. ಮಾನವರ ಮಿತಿ ಇಲ್ಲ ಕಾರ್ಯ ಚಟುವಟಿಕೆಗಳಿಂದ ಉಂಟಾಗುವ ಈ ದುರಂತವನ್ನು ಮಾನವರು ತೊಡೆದುಹಾಕಬೇಕು. ಈ ಪ್ರಯತ್ನಕ್ಕೆ ಮಾನವಕುಲದ ಜಂಟಿ ಪ್ರಯತ್ನದ ಅಗತ್ಯವಿದೆ.

ಪ್ರಕೃತಿ ಪದೇ ಪದೇ ನೀಡುತ್ತಿರುವ ಎಚ್ಚರಿಕೆ ಬಗ್ಗೆ ಅಸಡ್ಡೆ ...

ಕಳೆದ ಹನ್ನೆರಡು ಸಾವಿರ ವರ್ಷಗಳಿಂದ ಮಾನವ ನಾಗರಿಕತೆಯ ವಿಕಾಸಕ್ಕೆ ಸಹಕಾರಿ ಮತ್ತು ಕೊಡುಗೆ ನೀಡಿದ ಹವಾಮಾನವು ಈಗ ಮಾನವಕುಲದ ಅಸ್ತಿತ್ವಕ್ಕೆ ಏಕೆ ಅಪಾಯಕಾರಿಯಾಗಿದೆ? ಇದು ಇನ್ನೂ ಚರ್ಚೆಯಾಗದ ವಿಷಯವಾಗಿದೆ ಎಂದು ವಿಜ್ಞಾನವು ಸ್ಪಷ್ಟವಾಗಿ ಹೇಳಿದೆ. ಈಗ ನಡೆಯುತ್ತಿರುವ ಎಲ್ಲಾ ಅನಾಹುತಗಳು ಸಹಜವಾಗಿ ನಡೆಯುತ್ತಿರುವ ನೈಸರ್ಗಿಕ ವಿದ್ಯಮಾನವಲ್ಲ, ಆದರೆ, ಹವಾಮಾನ ಬದಲಾವಣೆಗಳ ಈ ಪ್ರತಿಯೊಂದು ಬೆಳವಣಿಗೆಗಳ ಹಿಂದೆ ಮಾನವ ಬೆರಳಚ್ಚುಗಳು ಮತ್ತು ಹೆಜ್ಜೆ ಗುರುತುಗಳಿವೆ.

ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚಳದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತದೆ ಎಂದು ನೂರಾರು ವರ್ಷಗಳ ಹಿಂದೆ ಆರ್ಹೆನಿಯಸ್ ಸಂಶೋಧನೆಯು ಎಚ್ಚರಿಸಿದೆ. ಆದರೆ, ಒಟ್ಟಾರೆಯಾಗಿ ವಿಶ್ವದ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಕಲ್ಪನೆಯಲ್ಲಿ ಸರ್ಕಾರಗಳು ಮತ್ತು ಮಾನವ ಸಮಾಜಗಳು ಈ ಸಮಸ್ಯೆಯನ್ನು ಉಲ್ಬಣಗೊಳಿಸಿವೆ. ಜೇಮ್ಸ್ ಹ್ಯಾನ್ಸೆನ್ 1988 ರಲ್ಲಿಯೇ ಜಾಗತಿಕ ತಾಪಮಾನ ಏರಿಕೆಯನ್ನು ವಿವರಿಸಿದ್ದರು, ಹೀಗಾಗಿ ಮೊದಲ ಐಪಿಸಿಸಿ (ಹವಾಮಾನ ಬದಲಾವಣೆಯ ಕುರಿತು ಅಂತರ್ ಸರ್ಕಾರಿ ಸಮಿತಿ) 1990 ರಲ್ಲಿ ರಚನೆಯಾಯಿತು. ಜಾಗತಿಕ ತಾಪಮಾನ ಏರಿಕೆಯ ಅಪಾಯ ಮತ್ತು ತಡೆಗಟ್ಟುವ ಕ್ರಮಗಳಿಗಾಗಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಪ್ರಾರಂಭಿಸುವುದಕ್ಕೆ ಶಿಫಾರಸು ಮಾಡಿ ಸಮಿತಿ ವರದಿ ನೀಡಿತು, ಆದರೂ, ಅಂದಿನಿಂದ ಕಳೆದ 30 ವರ್ಷಗಳಲ್ಲಿ ಗಾಳಿಯಲ್ಲಿ ಇಂಗಾಲ ಹೊರಸೂಸುವಿಕೆ ಒಟ್ಟು ವಾಯು ಹೊರಸೂಸುವಿಕೆಯ ಶೇಕಡಾ 62 ರಷ್ಟು ಹೆಚ್ಚಾಗಿದೆ. ಇದರರ್ಥ ಅಪಾಯಕಾರಿ ಘಟನೆಗಳ ಗುರುತಿಸುವಿಕೆ ಮತ್ತು ಮುನ್ಸೂಚನೆಯ ನಂತರವೇ ಹೆಚ್ಚಿನ ಇಂಗಾಲ ಹೊರಸೂಸಲ್ಪಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಹಸಿರುಮನೆ ಅನಿಲಗಳ ಪ್ರಮಾಣವನ್ನು ಗಾಳಿಯಲ್ಲಿ ಹೆಚ್ಚಿಸುವ ಮೂಲಕ ನಾವು ಭೂಮಿಯ ಶಕ್ತಿಯ ಮಟ್ಟದಲ್ಲಿ ಅಸಮತೋಲನವನ್ನು ಸೃಷ್ಟಿಸಿದ್ದೇವೆ. ಭೂಮಿಯ ಮೇಲ್ಮೈ ತಾಪಮಾನದ ಸರಾಸರಿ ಏರಿಕೆ 1.5-2 ಡಿಗ್ರಿ ಸೆಲ್ಸಿಯಸ್‌ಗಳ ನಡುವಿನ ಮಿತಿಯನ್ನು ಸೀಮಿತಗೊಳಿಸಲು 2015 ರ ಡಿಸೆಂಬರ್‌ನಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಒಪ್ಪಿದ ದೇಶಗಳು ಅದನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ವಿಫಲವಾಗಿವೆ. ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಪ್ರತಿವರ್ಷ ನಿರಂತರ ಆಧಾರದ ಮೇಲೆ ಏರುತ್ತಲೇ ಇದೆ.

ABOUT THE AUTHOR

...view details