ETV Bharat / snippets

ಎತ್ತಿನಹೊಳೆ ಯೋಜನೆ: ಪೈಪ್​​ಗಳ ನಡುವೆ ಸಿಲುಕಿ ಬಿಹಾರದ ಕಾರ್ಮಿಕ ಸಾವು

WORKER DIES IN DODDABALLAPUR
ಬೃಹತ್​ ಪೈಪ್​ ಅಳವಡಿಕೆ ಕಾರ್ಯ (ETV Bharat)
author img

By ETV Bharat Karnataka Team

Published : Aug 16, 2024, 9:37 PM IST

ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆಯ ಪೈಪ್​ಲೈನ್ ಅಳವಡಿಸುವ ವೇಳೆ ಇಂದು ಅವಘಡವೊಂದು ಸಂಭವಿಸಿದೆ. ಎರಡು ಬೃಹತ್ ಪೈಪ್​​ಗಳ ನಡುವೆ ಸಿಲುಕಿ ಕಾರ್ಮಿಕ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದ ಬಳಿ ಘಟನೆ ನಡೆಯಿತು. ಬಿಹಾರ ಮೂಲದ ಚಿಂಟು ಕುಮಾರ್ (22) ಮೃತಪಟ್ಟ ಕಾರ್ಮಿಕ.

ಕಾರ್ಮಿಕ ಸಾವನ್ನಪ್ಪಿದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪಿ.ರವಿ, ಇನ್ಸ್​ಪೆಕ್ಟರ್​ ಡಾ.ಎಂ.ಬಿ.ನವೀನ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಮುಂಜಾಗ್ರತೆ ವಹಿಸದ ಗುತ್ತಿಗೆದಾರರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದರು.

ತಾಲೂಕಿನ ಮೂಲಕ ಹಾದು ಹೋಗಿರುವ ಎತ್ತಿನಹೊಳೆ ಯೋಜನೆಯ ಪೈಪ್​ಲೈನ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಚಪ್ಪಲಿಯ ರೂಪದಲ್ಲಿ ಬಂದ ಜವರಾಯ! ಇಬ್ಬರ ದುರ್ಮರಣ - Two Boys Drowned

ETV Bharat Logo

Copyright © 2024 Ushodaya Enterprises Pvt. Ltd., All Rights Reserved.