ETV Bharat / snippets

ಪ್ರಯಾಣಿಕರೇ ಗಮನಿಸಿ: ಈ ವಿಶೇಷ ರೈಲುಗಳ ಸೇವೆ ವಿಸ್ತರಣೆ

railway
ರೈಲು (ETV Bharat)
author img

By ETV Bharat Karnataka Team

Published : Sep 22, 2024, 4:22 PM IST

ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಬ್ಬದ ಋತುವಿನಲ್ಲಿ ಹೆಚ್ಚಿನ ದಟ್ಟಣೆ ಸರಿದೂಗಿಸಲು ದಕ್ಷಿಣ ರೈಲ್ವೆಯು ಈಗಾಗಲೇ ಎರ್ನಾಕುಲಂ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಓಡಿಸಲಾಗುತ್ತಿದ್ದ ವಿಶೇಷ ರೈಲುಗಳ ಸೇವೆಯನ್ನು ಹೆಚ್ಚುವರಿ ನಾಲ್ಕು ಟ್ರಿಪ್​ಗಳಿಗೆ ವಿಸ್ತರಿಸಲು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ.

1. ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ವಿಶೇಷ ರೈಲನ್ನು ಈ ಹಿಂದೆ ಸೆಪ್ಟೆಂಬರ್ 18ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ನಾಲ್ಕು ಹೆಚ್ಚುವರಿ ಟ್ರಿಪ್​ಗಳೊಂದಿಗೆ ಸೆಪ್ಟೆಂಬರ್ 22ರಿಂದ 29ರ ವರೆಗೆ ವಿಸ್ತರಿಸಲಾಗಿದೆ.

2. ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ವಿಶೇಷ ರೈಲನ್ನು ಸೆಪ್ಟೆಂಬರ್ 19ರ ವರೆಗೆ ಓಡಿಸಲು ಸೂಚಿಸಲಾಗಿತ್ತು. ಆದರೀಗ ನಾಲ್ಕು ಹೆಚ್ಚುವರಿ ಟ್ರಿಪ್​ಗಾಗಿ ಸೆ.23ರಿಂದ 30ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಸದ್ಯ ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳ ಪ್ರಕಾರವೇ ಈ ರೈಲುಗಳು ಚಲಿಸಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.