ಚಾಮರಾಜನಗರ: ಎಷ್ಟು ಬಾರಿ ಮನವಿ ಮಾಡಿದರೂ ಕಸ ವಿಲೇವಾರಿ ಹಾಗೂ ಸಂಗ್ರಹಕ್ಕೆ ಪಟ್ಟಣ ಪಂಚಾಯಿತಿ ಮುಂದಾಗದ ಪರಿಣಾಮ, ನಿವಾಸಿಗಳು ಪ.ಪಂ ಕಚೇರಿ ಮುಂದೆಯೇ ಕಸ ಸುರಿದು ಆಕ್ರೋಶ ಹೊರಹಾಕಿದ್ದಾರೆ.
ಹನೂರು ಪಟ್ಟಣದ 8ನೇ ವಾರ್ಡ್ನ ದೊಡ್ಡಿಕೇರಿ ಬೀದಿಯಲ್ಲಿ ಸಮರ್ಪಕವಾಗಿ ಕಸ ಸಂಗ್ರಹಣೆ ಮಾಡಲಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಹೀಗಾಗಿ, ಕಸ ಸಂಗ್ರಹಣೆ ಮಾಡಿ ಪಟ್ಟಣ ಪಂಚಾಯತಿ ಕಚೇರಿ ಮುಂಭಾಗ ಸುರಿದಿದ್ದಾರೆ.
8ನೆ ವಾರ್ಡ್ನ ಬಹುತೇಕ ಬಡಾವಣೆಗಳಲ್ಲಿ ಸಮರ್ಪಕ ಕಸ ಸಂಗ್ರಹಣೆ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದ್ದರಿಂದ ಬಡಾವಣೆ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಎಡೆಮಾಡಿಕೊಟ್ಟಿದೆ ಎಂದು ನಿವಾಸಿಗಳು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮನೆ ಮುಂದೆ ಕಸದ ಗಾಡಿ ಬರಲಿಲ್ಲವೆಂದು ಪಂಚಾಯಿತಿ ಮುಂದೆ ಕಸ ಸುರಿದ ವ್ಯಕ್ತಿ!