ETV Bharat / snippets

ಮಂಗಳೂರು: 120 ಅಡಿ ಎತ್ತರದಿಂದ ಬಿದ್ದು MRPL​ ಗುತ್ತಿಗೆ ಕಾರ್ಮಿಕ ಸಾವು

author img

By ETV Bharat Karnataka Team

Published : May 29, 2024, 7:10 AM IST

ಮೃತಪಟ್ಟ ಕಾರ್ಮಿಕ ಮಾಂಗ್ರಾ ಓರೋನ್
ಮೃತಪಟ್ಟ ಕಾರ್ಮಿಕ ಮಾಂಗ್ರಾ ಓರೋನ್ (ETV Bharat)

ಮಂಗಳೂರು: ಸುಮಾರು 120 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಎಂಆರ್​ಪಿಎಲ್ ಗುತ್ತಿಗೆ ಕಾರ್ಮಿಕ ಮೃತಪಟ್ಟಿರುವ ಘಟನೆ ಮೇ 27ರಂದು ತಡರಾತ್ರಿ ನಡೆದಿದೆ. ಮಾಂಗ್ರಾ ಓರೋನ್ (38) ಮೃತಪಟ್ಟವರು. ಇವರು ಎಂಆರ್​ಪಿಎಲ್​ನಲ್ಲಿ ಸುಮಾರು 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಹೈಡ್ರೋ ಕ್ರಾಕರ್​ ಪ್ಲಾಂಟ್‌ನಲ್ಲಿ ನೀರು ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸರಿಪಡಿಸುತ್ತಿದ್ದಾಗ ಹರಿವು ದಿಢೀರ್ ಹೆಚ್ಚಾಗಿ ಮಾಂಗ್ರಾ ಅವರು ಮೇಲಿಂದ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸಿಬ್ಬಂದಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜೆಸಿ ಇಂಜಿನಿಯರಿಂಗ್ ಕಂಪನಿ, ಎಂಆರ್​ಪಿಎಲ್​ ಮತ್ತು ಜೆಸಿ ಇಂಜಿನಿಯರಿಂಗ್ ಕಂಪನಿಯ ಸುರಕ್ಷತಾ ಅಧಿಕಾರಿ, ಜೆಸಿ ಇಂಜಿನಿಯರಿಂಗ್ ಕಂಪನಿಯ ಸುಪರ್ ವೈಸರ್ ಸಾಯಿನಾಥ್ ಎಂಬುವರ ವಿರುದ್ಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ಕೊಪ್ಪಳ: ಅಜ್ಜಿ-ಮಗಳು-ಮೊಮ್ಮಗ ಮನೆಯಲ್ಲಿ ಶವವಾಗಿ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ - THREE PEOPLE DIED

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.