ETV Bharat / snippets

ಮಲೆಮಹದೇಶ್ವರನ ಹುಂಡಿ ಎಣಿಕೆ: ತಿಂಗಳಲ್ಲಿ 1.76 ಕೋಟಿ ರೂ ಸಂಗ್ರಹ, 4 ದೇಶಗಳ ಕರೆನ್ಸಿ ಪತ್ತೆ

author img

By ETV Bharat Karnataka Team

Published : Aug 30, 2024, 3:28 PM IST

ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ
ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ (ETV Bharat)

ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, ಈ ಬಾರಿ 30 ದಿನಗಳಲ್ಲಿ 1.76 ಕೋಟಿ ರೂ. ಸಂಗ್ರಹವಾಗಿದೆ.

ಈ ಕುರಿತು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ, "ಭೀಮನ ಅಮವಾಸ್ಯೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಹರಕೆಯ ರೂಪದಲ್ಲಿ 1,76,29,849 ನಗದು, 45 ಗ್ರಾಂ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಹುಂಡಿಗೆ ಹಾಕಿದ್ದಾರೆ" ಎಂದಿದ್ದಾರೆ.

"ಇದಲ್ಲದೆ ಇ-ಹುಂಡಿಯಿಂದ 2,96,469 ಯುಎಸ್​ಎ 20 ಡಾಲರ್, ಥೈಲ್ಯಾಂಡ್ 1 , ಶ್ರೀಲಂಕಾ 2, ಅರಬ್ 3 ನೋಟುಗಳು ಸೇರಿದಂತೆ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 11 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ" ಎಂದು ತಿಳಿಸಿದ್ದಾರೆ‌.

ಇದನ್ನೂ ಓದಿ: ದೇವಾಲಯಕ್ಕೆ ಲೈಟಿಂಗ್​ ಅಳವಡಿಸುವಾಗ ವಿದ್ಯುತ್ ‌ಶಾಕ್: ಯುವಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.