ಬೆಂಗಳೂರು: ನಗರದಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು, ಕಳೆದೊಂದು ವಾರದಲ್ಲಿ 1,146 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಡ್ರಿಂಕ್ ಆ್ಯಂಡ್ ಡ್ರೈವ್ನಿಂದ ಸಂಭವಿಸುವ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸೆಪ್ಟಂಬರ್ 16ರಿಂದ 22ರವರೆಗೂ ನಗರದಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಒಟ್ಟು 75,800 ವಾಹನಗಳನ್ನು ತಪಾಸಣೆ ನಡೆಸಿ, ಈ ಪೈಕಿ ಪಾನಮತ್ತರಾಗಿದ್ದ 1,146 ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ನಗರದಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ದೃಷ್ಟಿಯಿಂದ ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಯುವಕನ ಮುಖಕ್ಕೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿ ಪರಾರಿ - Acid Attack