ETV Bharat / state

ಹಳೆ ವೈಷಮ್ಯದಿಂದ ಗಂಗಾವತಿಯಲ್ಲಿ ಚಾಕು ಇರಿತ: ನಾಲ್ವರಿಗೆ ಗಾಯ, ಓರ್ವ ಗಂಭೀರ - Knife Attack in Gangavathi

ಗಣೇಶ ನಿಮಜ್ಜನ ವೇಳೆ ನಡೆದ ಗಲಾಟೆಯಲ್ಲಿ ಚೂರಿ ಇರಿತಕ್ಕೊಳಗಾಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

Knife stabbing in Ganesha procession commotion: One serious, three injured
ಗಣೇಶ ಮೂರ್ತಿ ಮೆರವಣಿಗೆ ವೇಳೆ ಗಲಾಟೆ (ETV Bharat)
author img

By ETV Bharat Karnataka Team

Published : Sep 24, 2024, 8:51 AM IST

ಗಂಗಾವತಿ: ಗಣೇಶ ನಿಮಜ್ಜನ ಮೆರವಣಿಗೆಯ ಸಂದರ್ಭದಲ್ಲಿ ಗಲಾಟೆ ನಡೆದು ಚೂರಿ ಇರಿತಕ್ಕೊಳಗಾಗಿ ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗಂಗಾವತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಶಿವು ದುರುಗಪ್ಪ ಮಾದಿಗ ಎಂಬವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಗಣೇಶ, ಮಂಜು, ಸಾಗರ್​ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗುಂಡಮ್ಮ ಕ್ಯಾಂಪಿನ ಗಣೇಶ ಮೂರ್ತಿಯ ಮೆರವಣಿಯ ಯಶೋಧಾ ಆಸ್ಪತ್ರೆಯ ಮುಂಭಾಗ ಬಂದಾಗ ಡ್ಯಾನ್ಸ್ ಮಾಡುತ್ತಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಮುತ್ತಣ್ಣ, ಧರ್ಮಣ್ಣ, ಬಾಬು ವೆಂಕಟೇಶ, ಜಂಭ ಮತ್ತು ಇತರೆ 15 ಜನರು ಹಲ್ಲೆ ಮಾಡಿದ್ದಾಗಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಹಳೆ ವೈಷಮ್ಯ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಸ್ವಚ್ಛತಾ ಪೌರಕಾರ್ಮಿಕರ ಮೇಲೆ ಹಲ್ಲೆ, ನಿಂದನೆ ಶಿಕ್ಷಾರ್ಹ ಅಪರಾಧ: ಬಿಬಿಎಂಪಿ - BBMP new order

ETV Bharat Logo

Copyright © 2024 Ushodaya Enterprises Pvt. Ltd., All Rights Reserved.