ETV Bharat / snippets

ಚಾಮರಾಜನಗರ: ಎದೆ ಮೇಲೆ ಕಾಲಿಟ್ಟ ಕಾಡಾನೆ, ಅದೃಷ್ಟವಶಾತ್ ಪಾರಾದ ರೈತ

author img

By ETV Bharat Karnataka Team

Published : Jun 28, 2024, 5:41 PM IST

ಆನೆ ದಾಳಿಗೊಳಗಾದ ರೈತ ಬಸವಣ್ಣ
ಆನೆ ದಾಳಿಗೊಳಗಾದ ರೈತ ಬಸವಣ್ಣ (ETV Bharat)

ಚಾಮರಾಜನಗರ: ಜಮೀನಿನಲ್ಲಿ ಮಲಗಿದ್ದ ರೈತನ ಎದೆಯ ಮೇಲೆ ಆನೆ ಕಾಲಿಟ್ಟಿದ್ದು, ಅವರು ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ನಿವಾಸಿ ಬಸವಣ್ಣ (52) ಅಪಾಯದಿಂದ ಪಾರಾದವರು. ಆಲೂಗೆಡ್ಡೆ ಬೆಳೆ ಸಂರಕ್ಷಣೆಗೆ ಕಾವಲಿಗೆಂದು ಇವರು ಜಮೀನಿಗೆ ತೆರಳಿದ್ದರು. ತೆವರಿನ ಮೇಲೆ ಮಲಗಿದ್ದಾಗ ಕಾಡಾನೆ ನುಗ್ಗಿ ಬಂದು ಬಲ ಎದೆಯ ಮೇಲೆ ಕಾಲಿಟ್ಟಿದೆ. ತಕ್ಷಣವೇ ಜೋರಾಗಿ ಕೂಗಿಕೊಂಡಿದ್ದರಿಂದ ತನ್ನ ಮರಿ ಜೊತೆ ಆನೆ ಕಾಲ್ಕಿತ್ತಿದೆ. ಇದರಿಂದಾಗಿ ರೈತ ಅಪಾಯದಿಂದ ಪಾರಾಗಿದ್ದಾರೆ. ಆದರೆ ಎದೆಗೆ ತೀವ್ರವಾದ ಗಾಯವಾಗಿದೆ.

ಮಾಹಿತಿ ಅರಿತ ತಕ್ಷಣ ಸ್ಥಳೀಯರು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಬಸವಣ್ಣರನ್ನು ದಾಖಲು ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.