ತುಮಕೂರು: ಸೀಮೆಎಣ್ಣೆ ಸುರಿದು ಹೆಂಡತಿಗೆ ಬೆಂಕಿ ಹಚ್ಚಿ ನಾಪತ್ತೆಯಾಗಿದ್ದ ಆರೋಪಿಯನ್ನು 27 ವರ್ಷಗಳ ನಂತರ ನೊಣವಿನಕೆರೆ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ತಿಪಟೂರು ತಾಲೂಕು ಕುಡುವನಘಟ್ಟ ಗ್ರಾಮದಲ್ಲಿ 1997ರ ಮೇ 5ರಂದು ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಪತ್ನಿ ಗೌರಮ್ಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದು ಪತಿ ನಿಂಗಪ್ಪ ಪರಾರಿಯಾಗಿದ್ದ. ಈತನಿಗೆ ಆಗ 35 ವರ್ಷ ವಯಸ್ಸಾಗಿತ್ತು.
ಆರೋಪಿ ಇತ್ತೀಚೆಗೆ ಗ್ರಾಮಕ್ಕೆ ಹಿಂತಿರುಗಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕಲಬುರಗಿ: ಪಾರ್ಟಿ ವೇಳೆ ಗಲಾಟೆ, ಓರ್ವನ ಮೇಲೆ ಗುಂಡಿನ ದಾಳಿ