ಮಂಡ್ಯ: ಹೊಳೆ ಆಂಜನೇಯ ಸ್ವಾಮಿ ದೇಗುಲದ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ - WILD ELEPHANTS - WILD ELEPHANTS
🎬 Watch Now: Feature Video
Published : May 27, 2024, 3:29 PM IST
ಮಂಡ್ಯ: ಮದ್ದೂರು ಪಟ್ಟಣದಲ್ಲಿನ ಹೊಳೆ ಆಂಜನೇಯ ದೇವಾಲಯದ ಬಳಿಯ ಶಿಂಷಾ ನದಿ ಸಮೀಪ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಇಂದು ಬೆಳಗ್ಗೆ ಆರು ಆನೆಗಳು ಗುಂಪಾಗಿ ನದಿಯ ಬಳಿಗೆ ಬಂದು ನೀರಿನಲ್ಲಿ ಆಟವಾಡುತ್ತ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಟ ನಡೆಸಿವೆ.
ಆನೆಗಳು ಜನ ವಸತಿ ಪ್ರದೇಶಗಳಲ್ಲಿ ಬರದಂತೆ ಮುನ್ನೆಚ್ಚರಿಕೆ ವಹಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮತ್ತು ಆ ಪ್ರದೇಶದ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಶಿಂಷಾ ನದಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿರುವ ವಿಷಯ ತಿಳಿದು ಸಾರ್ವಜನಿಕರು ನದಿ ದಂಡೆ ಪ್ರದೇಶಕ್ಕೆ ತೆರಳಿ ಮೊಬೈಲ್ನಲ್ಲಿ ದೃಶ್ಯಗಳನ್ನು ಚಿತ್ರೀಕರಣ ಮಾಡಿಡಿದ್ದಾರೆ. ಇದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಕಾರಣಕ್ಕೂ ಆನೆಗಳ ಇರುವ ಸ್ಥಳಕ್ಕೆ ತೆರಳಿ ಫೋಟೋ ವಿಡಿಯೋ ಸೆರೆ ಹಿಡಿಯುವ ಸಾಹಸ ಮಾಡಬಾರದು. ಇದರಿಂದ ಆನೆಗಳಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಹಾಜರಿದ್ದು, ಆನೆಗಳನ್ನು ಕಾಡಿನತ್ತ ಓಡಿಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಕಾಡಾನೆಗಳ ಹಿಂಡು ಕಾವೇರಿ ವನ್ಯಧಾಮದಿಂದ ಇತ್ತ ಬಂದಿವೆ ಎಂದು ಹೇಳಲಾಗ್ತಿದೆ. ಜನ ಸಂಚಾರ ಕಡಿಮೆ ಆದ ಬಳಿಕ ಅಂದರೆ ಸಂಜೆ ಸಮಯ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಗಜ ಗಣತಿ: 2ನೇ ದಿನವಾದ ಇಂದು ಲದ್ದಿ ಮೂಲಕ ಆನೆ ಲೆಕ್ಕಾಚಾರ - ELEPHANT CENSUS 2ND DAY