ಕಾಡಿನಿಂದ ನಾಡಿಗೆ ಬಂದು ಮನೆಗೆ ನುಗ್ಗಿದ ಜಿಂಕೆ: ವಿಡಿಯೋ - Deer

By ETV Bharat Karnataka Team

Published : Apr 28, 2024, 7:31 AM IST

thumbnail

ರಾಮನಗರ: ಅಂದಾಜು 7 ವರ್ಷ ವಯಸ್ಸಿನ ಗಂಡು ಚುಕ್ಕಿ ಜಿಂಕೆ ಕಾಡಿನಿಂದ ದಾರಿ ತಪ್ಪಿ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ಶನಿವಾರ ಸಂಜೆ ಕಂಡುಬಂತು. ಕಾಡಂಚಿನ ಚನ್ನಪ್ಪಾಜಿ ಬೆಟ್ಟದಿಂದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿವೆ. ಜಿಂಕೆ ತನ್ನ ರಕ್ಷಣೆಗಾಗಿ ಗ್ರಾಮದ ವಸಂತಮ್ಮ ಎಂಬುವರ ಮನೆಗೆ ನುಗ್ಗಿದೆ. ಭಯದಿಂದ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದೆ. ಮನೆಯವರು ಅರೆಕ್ಷಣ ಗಾಬರಿಗೊಂಡಿದ್ದರು. 

ಬಳಿಕ ಸ್ಥಳೀಯ ಮುಖಂಡರಾದ ಎಂ.ರಾಮಕೃಷ್ಣ, ಎಂ.ಪುಟ್ಟೇಗೌಡ, ಎಚ್.ಎಸ್.ಸಿದ್ದರಾಜು ಇತರರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದರು. ಜಿಂಕೆಗೆ ತೊಂದರೆಯಾಗದಂತೆ ಅದನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿ ಅದಕ್ಕೆ ನೀರು ಕುಡಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಇಲಾಖೆಯ ಸಾತನೂರು ವಿಭಾಗದ ಸಿಬ್ಬಂದಿಗಳಾದ ಕಾಂತರಾಜು, ರಿಜ್ವಾನ್​ ಜಿಂಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮಾತನಾಡಿ, "ನೀರು ಅರಸಿಕೊಂಡು ಜಿಂಕೆ ಕಾಡಿನಿಂದ ನಾಡಿಗೆ ಬಂದಿದೆ. ಆರೋಗ್ಯ ತಪಾಸಣೆ ನಡೆಸಿ ಆ ನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಅರಣ್ಯಕ್ಕೆ ಬಿಡಲಾಗುವುದು" ಎಂದರು. 

ಇದನ್ನೂ ಓದಿ: ಚಾಮರಾಜನಗರ: ಇವಿಎಂ ಹೊತ್ತು ಬರುತ್ತಿದ್ದ ವಾಹನ ಅಡ್ಡಹಾಕಿದ ಕಾಡಾನೆ ಹಿಂಡು - ವಿಡಿಯೋ ನೋಡಿ - vehicle blocked by elephant

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.