ರಾಯಚೂರು: ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸ್ವಾಗತ
🎬 Watch Now: Feature Video
ರಾಯಚೂರು: ರಾಜ್ಯಾದ್ಯಂತ ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಇತ್ತ ರಾಯಚೂರಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಪರಿಕ್ಷಾ ಕೇಂದ್ರಕ್ಕೆ ಶಿಕ್ಷಕರು ಸ್ವಾಗತಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಕೋರಿ, ಶುಭ ಹಾರೈಸಿ ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಾಯಿತು. ಈ ವೇಳೆ ಪಾಲಕರು, ಉಪನ್ಯಾಸಕರು ಇದ್ದರು.
ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಒಟ್ಟು 42 ಕೇಂದ್ರಗಳು ಗುರುತಿಸಲಾಗಿದೆ. ರಾಯಚೂರು ತಾಲೂಕಿನ 13, ಸಿಂಧನೂರು ತಾಲೂಕಿನ 9, ಲಿಂಗಸೂಗೂರು 8, ಮಾನವಿ ಹಾಗೂ ದೇವದುರ್ಗ ತಲಾ 4, ಸಿರವಾರ ಮತ್ತು ಮಸ್ಕಿ ತಲಾ 2 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿವೆ. ಪರೀಕ್ಷೆಗಳು ಸುಸೂತ್ರವಾಗಿ ನಡೆಸಲು 42 ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪಾಲಕರು ಮತ್ತು 30 ವಿದ್ಯಾರ್ಥಿಗಳಿಗೆ ಒಬ್ಬರಂತೆ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಒಳಗೊಂಡ ಜಾಗೃತದಳವನ್ನು ರಚಿಸಲಾಗಿದೆ.
ರಾಯಚೂರು ತಾಲೂಕಿನ 5,241 ವಿದ್ಯಾರ್ಥಿಗಳು, ಸಿಂಧನೂರು ತಾಲೂಕಿನ 4315, ಸಿಂಧನೂರು ತಾಲೂಕಿನ 770, ಮಸ್ಕಿ 825, ಮಾನವಿ 1,729, ಲಿಂಗಸೂಗೂರು 4,337, ದೇವದುರ್ಗ ತಾಲೂಕಿನ 1950 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪುನಾವರ್ತಿತ 2,217, ಖಾಸಗಿ ಶಾಲೆಯಲ್ಲಿ 916 ವಿದ್ಯಾರ್ಥಿಗಳು ಸೇರಿ ಒಟ್ಟು 22,300 ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷೆ ಬರೆಯಲಿರುವ 6,98,624 ವಿದ್ಯಾರ್ಥಿಗಳು