ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ- ವಿಡಿಯೋ - ಪ್ರಹ್ಲಾದ್ ಜೋಶಿ ಹಾಡು
🎬 Watch Now: Feature Video
Published : Jan 20, 2024, 10:29 AM IST
ಹುಬ್ಬಳ್ಳಿ : ವರನಟ ಡಾ. ರಾಜಕುಮಾರ್ ನಟಿಸಿ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಕತ್ ಸ್ಟೆಪ್ ಹಾಕಿದರು. ನವಲಗುಂದದಲ್ಲಿ ಆಯೋಜಿಸಿದ್ದ ಧಾರವಾಡ ಸಂಸದ ಕಬಡ್ಡಿ ಟ್ರೋಫಿ ಪಂದ್ಯಾವಳಿ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಗಾಯಕ ನವೀನ್ ಸಜ್ಜು ಅವರ ತಂಡದೊಂದಿಗೆ ಸೇರಿ ಪ್ರಹ್ಲಾದ್ ಜೋಶಿ ಹಾಡಿದರು.
ಕೇಂದ್ರ ಸಚಿವರಿಗೆ ಶಾಸಕ ಮಹೇಶ ಟೆಂಗಿನಕಾಯಿ ಸಾಥ್ ನೀಡಿದರು. ಇನ್ನು ಆಟಗಾರರೊಂದಿಗೆ ಸ್ವಲ್ಪ ಹೊತ್ತು ಪ್ರಹ್ಲಾದ್ ಜೋಶಿ ಅವರು ಕಬಡ್ಡಿ ಆಡಿದರು. ಈ ಮೂಲಕ ಆಟಗಾರರನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ, ಎಂ ಆರ್ ಪಾಟೀಲ್, ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಹಾಗೂ ಪಕ್ಷದ ಕಾರ್ಯಕರ್ತರು, ಹವ್ಯಾಸಿ ಕಬಡ್ಡಿ ಸಂಘ, ಕಬಡ್ಡಿ ಆಟಗಾರರು, ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ ಕೇಂದ್ರ ಸಚಿವರು, ಕಬಡ್ಡಿಯಂತಹ ದೇಶಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ. ಈ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಿದ್ದು, ಅದಕ್ಕಾಗಿ ಧಾರವಾಡ ಸಂಸದರ ಕಬಡ್ಡಿ ಟ್ರೋಫಿ ಪಂದ್ಯಾವಳಿ ಆಯೋಜಿಸಲಾಗಿದೆ. ಭಾರತದ ದೇಶಿ ಕ್ರೀಡೆ ಕಬಡ್ಡಿಗೆ 4000 ವರ್ಷಗಳ ಇತಿಹಾಸವಿದ್ದು, ಕಬಡ್ಡಿ ಈಗಿನ ಪೀಳಿಗೆಗೆ ಪ್ರಿಯವಾಗಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯವೆಂದರೆ ಈಗಲೂ ಗ್ರಾಮೀಣ ಭಾರತೀಯರಿಗೆ ಅಚ್ಚುಮೆಚ್ಚು ಎಂದು ಹೇಳಿದರು.
ಇದನ್ನೂ ಓದಿ : 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಚಿತ್ರೋತ್ಸವದ ಪ್ರಮುಖ ಹೈಲೆಟ್ಸ್ ಹೀಗಿದೆ