ಯುಬಿಟಿ ನಾಯಕಿ ಸುಷ್ಮಾ ಅಂಧಾರೆಯನ್ನು ಕರೆದುಕೊಂಡು ಹೋಗಲು ಬಂದಿದ್ದ ಹೆಲಿಕಾಪ್ಟರ್ ಪತನ - WATCH - Helicopter Crash - HELICOPTER CRASH
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/03-05-2024/640-480-21375566-thumbnail-16x9-am.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : May 3, 2024, 1:30 PM IST
|Updated : May 3, 2024, 2:10 PM IST
ರಾಯಗಢ(ಮಹಾರಾಷ್ಟ್ರ): ಯುಬಿಟಿ(ಶಿವಸೇನಾ) ನಾಯಕಿ ಸುಷ್ಮಾ ಅಂಧಾರೆಯನ್ನು ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದ ಹೆಲಿಕಾಪ್ಟರ್ ಮಹಾದ್‌ನಲ್ಲಿ ಲ್ಯಾಂಡ್ ಆಗುವ ವೇಳೆ ಪತನಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು ಎದೆ ಝಲ್ ಎನಿಸುವಂತಿದೆ. ಘಟನೆಯಲ್ಲಿ ಪೈಲಟ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಸುರಕ್ಷಿತನಾಗಿದ್ದಾನೆ. ಅದೃಷ್ಟವಶಾತ್ ಸುಶಾಮಾ ಅಂಧಾರೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಹೆಲಿಕಾಪ್ಟರ್ ರೋಟರ್ ಬ್ಲೇಡ್‌ಗಳು ಹಾನಿಗೊಳಗಾಗಿವೆ.
ಇಂದು ಬೆಳಗ್ಗೆ 9:30 ರ ಹೊತ್ತಿಗೆ ಮಹಾದ್ ಪ್ರದೇಶದಲ್ಲಿ ಲ್ಯಾಂಡಿಂಗ್ ಮಾಡುವಾಗ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆ ಕಂಡಿದೆ. ಇದರಿಂದ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಶಿವಸೇನಾ ಉದ್ಧವ್ ಠಾಕ್ರೆ ಗುಂಪಿನ ನಾಯಕಿ ಸುಷ್ಮಾ ಅಂಧಾರೆ ಅವರು ಗುರುವಾರ ಮಹಾದ್‌ನಲ್ಲಿ ರ‍್ಯಾಲಿ ನಡೆಸಿದರು. ಬಳಿಕ ಮುಂದಿನ ರ‍್ಯಾಲಿಗೆ ಬಾರಾಮತಿಗೆ ಹೋಗಬೇಕಿತ್ತು. ಇವರನ್ನು ಪಿಕ್ಪ್ ಮಾಡಲು ಹೆಲಿಕಾಪ್ಟರ್ ಬರಬೇಕಿತ್ತು. ಸರಿಯಾದ ಸಮಯಕ್ಕೆ ಹೆಲಿಕಾಪ್ಟರ್ ಬರದ ಕಾರಣ ಕಾರ್ಡಿನೇಟರ್ಗೆ ಕರೆ ಮಾಡಿದಾಗ ಹೆಲಿಕಾಪ್ಟರ್ ಬಗ್ಗೆ ಮಾಹಿತಿ ನೀಡಿ ಶೀಘ್ರದಲ್ಲೇ ಬರಲಿದೆ ಎಂದಿದ್ದಾರೆ. ಆದರೆ ನಂತರ ಬಂದ ಹೆಲಿಕಾಪ್ಟರ್ ಎರಡು ಸುತ್ತುಗಳನ್ನು ಹಾಕಿ ಭೂಸ್ಪರ್ಶಿಸುವಾಗ ಒಂದೇ ಸಲಕ್ಕೆ ಧೂಳು ಎದ್ದಿದ್ದು ದೊಡ್ಡ ಶಬ್ದವಾಗಿದೆ. ಒಮ್ಮೆಗೆ ಏನಾಯಿತು ಎಂಬುದೇ ತಿಳಿಯಲಿಲ್ಲ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಸುಷ್ಮಾ ಅಂಧಾರೆ ಹೇಳಿದ್ದಾರೆ.
ಇದನ್ನೂ ಓದಿ: ಕಂದಕಕ್ಕೆ ಬಸ್ ಉರುಳಿ 20 ಪ್ರಯಾಣಿಕರ ಸಾವು: 15 ಮಂದಿಗೆ ಗಂಭೀರ ಗಾಯ - 20 people died