ಗರ್ಭಿಣಿಯನ್ನು ಪ್ರವಾಹದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ತಹಶೀಲ್ದಾರ್​- ವಿಡಿಯೋ - Tehsildar Rescued Pregnant

🎬 Watch Now: Feature Video

thumbnail

ಗಡ್ಚಿರೋಳಿ(ಮಹಾರಾಷ್ಟ್ರ): ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ತೊರೆಗಳು ಮೈದುಂಬಿ ಹರಿಯುತ್ತಿವೆ. ಇದರಿಂದಾಗಿ ಸೇತುವೆಯಿಲ್ಲದ ಹೊಳೆಗಳನ್ನು ದಾಟಲೂ ಜನ ಹರಸಾಹಸ ಪಡುವಂತಾಗಿದೆ. ಇದೇ ಭಾನುವಾರ ಭಮ್ರಗಡ ತಾಲೂಕಿನಲ್ಲಿ ತುಂಬು ಗರ್ಭಿಣಿಯೊಬ್ಬರನ್ನು ಪ್ರವಾಹದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆಯಿತು.

ಭಮ್ರಗಢ ತಾಲೂಕಿನ ಕುಚೇರ್​ನ್ 9 ತಿಂಗಳ ಗರ್ಭಿಣಿ ಶೀಲಾ ಸದ್ಮೆಕ್​ ಅವರ ಹೆರಿಗೆಗೆ ದಿನ ಸಮೀಪಿಸಿದ್ದು, ಭಮ್ರಗಢ ಗ್ರಾಮೀಣ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಪತಿಯೊಂದಿಗೆ ಆಸ್ಪತ್ರೆಗೆ ತೆರಳಲು ಮೋಟಾರ್​ ಸೈಕಲ್​ನಲ್ಲಿ ಹೊರಟಿದ್ದರು. ಆದರೆ ಇದೇ ವೇಳೆ ಮಳೆಯಿಂದಾಗಿ ಇರ್ಪನಾರ್​ ಗ್ರಾಮದ ಬಳಿಯ ಹೊಳೆ ತುಂಬಿ ಹರಿಯುತ್ತಿತ್ತು. ಸೇತುವೆ ಇಲ್ಲದ ಆ ಹೊಳೆ ದಾಟುವುದು ಕಷ್ಟಸಾಧ್ಯವಾಗಿತ್ತು. ಅತ್ತ ಹೊಳೆಯನ್ನೂ ದಾಟಲಾಗದೆ, ಇತ್ತ ಆಸ್ಪತ್ರೆಗೂ ದಾಖಲಾಗದೆ ಬಾಕಿಯಾಗಿದ್ದ ಮಹಿಳೆಯ ಸಹಾಯಕ್ಕೆ ತಹಶೀಲ್ದಾರ್​ ಧಾವಿಸಿದರು.

ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಹೊಣೆ ಹೊತ್ತ ತಹಶೀಲ್ದಾರ್,​ ರಕ್ಷಣಾ ತಂಡದ ಜೊತೆಗೆ ಸ್ಥಳಕ್ಕೆ ತೆರಳಿ, ಮಹಿಳೆಯನ್ನು ಯಶಸ್ವಿಯಾಗಿ ಆಸ್ಪತ್ರೆ ಸೇರಿಸಿದರು.  

ಈ ಬಗ್ಗೆ ಮಾತನಾಡಿದ ತಹಶೀಲ್ದಾರ್​, "ಇರ್ಪನಾರ್​ ಹಾಗೂ ಕುಚೇರ್​ ಪ್ರದೇಶ ನಕ್ಸಲ್​ ಹಾವಳಿ ಇರುವ ಪ್ರದೇಶವಾಗಿದ್ದು, ಎಸ್​ಡಿಆರ್​ಎಫ್​ ಯೋಧರ ತಂಡವನ್ನು ಕರೆದುಕೊಂಡು ಹೋಗುವುದು ಅಪಾಯಕಾರಿಯಾಗಿತ್ತು. ಹಾಗಾಗಿ ನಗರ ಪಂಚಾಯತ್​ನ ರಕ್ಷಣಾ ತಂಡದ ಮೂಲಕ ಎಚ್ಚರಿಕೆಯಿಂದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳ ಖಾಯಂ ಸ್ಥಳಾಂತರಕ್ಕೆ ಚರ್ಚಿಸಿ ತೀರ್ಮಾನ: ಸಿಎಂ - siddaramaiah

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.