ಪಡಿತರ ಚೀಟಿದಾರರಿಗೆ ಹಣದ ಬದಲಾಗಿ ಆಹಾರ ಪದಾರ್ಥ ಕೊಡಬೇಕು: ಟಿ ಕೃಷ್ಣಪ್ಪ - T Krishnappa
🎬 Watch Now: Feature Video
Published : Jul 3, 2024, 6:16 PM IST
ತುಮಕೂರು : ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಡಿಬಿಟಿ ಮುಖಾಂತರ ಹಣ ಕಳಿಸುವುದನ್ನು ಸ್ಥಗಿತಗೊಳಿಸಿ, ಅದರ ಬದಲಾಗಿ ಆಹಾರ ಪದಾರ್ಥಗಳನ್ನು ಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಣಾಂತರಗಳಿಂದ ಸರ್ಕಾರವು ಹಣ ಸಂದಾಯ ಮಾಡುತ್ತಿಲ್ಲ. ಸುಮಾರು ಏಳು ವರ್ಷದಿಂದ ಈ ಕೆವೈಸಿ ಮಾಡಿರುವ ಪಡಿತರ ಅಂಗಡಿ ಮಾಲೀಕರಿಗೆ ಕಮಿಷನ್ ಅನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪಡಿತರ ಅಂಗಡಿ ಮಳಿಗೆಗಳಿಗೆ ಹಾಗೂ ಹೋಲ್ಸೇಲ್ ಸಗಟು ಮಳಿಗೆಗಳಿಗೆ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಅಳವಡಿಸಲು ಹಾಗೂ ಎಲ್ಲಾ ಸಗಟು ಮಳಿಗೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆರ್ಥಿಕ ಇಲಾಖೆಯಿಂದ ಬಿಡುಗಡೆಯಾಗಿದ್ದರೂ ಕೂಡ ಇದುವರೆಗೂ ಅದನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದರು.
ಪಡಿತರ ಅಂಗಡಿಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳಲ್ಲಿ ಒಂದು ಕ್ವಿಂಟಾಲ್ಗೆ ಒಂದರಿಂದ ಎರಡು ಕೆಜಿ ಕಡಿಮೆ ಬರುತ್ತಿದೆ. ಇದರಿಂದ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಪಡಿತರ ಚೀಟಿಯಡಿ ಸಿಗುವುದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಸಾರವರ್ಧಿತ ಅಕ್ಕಿ: ಆಹಾರ ಇಲಾಖೆ ಸ್ಪಷ್ಟನೆ - Fortified Rice