ಹಾವೇರಿ: ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಬೇಸರ; ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮುದ್ದು ಮಕ್ಕಳು - Teacher Transfer - TEACHER TRANSFER
🎬 Watch Now: Feature Video
Published : Aug 31, 2024, 7:46 PM IST
ಹಾವೇರಿ: ನೆಚ್ಚಿನ ಶಿಕ್ಷಕಿಯೊಬ್ಬರು ಶಾಲೆಯಿಂದ ವರ್ಗಾವಣೆ ಆಗಿದ್ದಕ್ಕೆ ಆ ಶಾಲೆ ವಿದ್ಯಾರ್ಥಿಗಳು ಕಂಬನಿ ಇಟ್ಟ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ವಳಗೇರಿಯಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಾ ರಜಪೂತ ಅವರಿಗೆ ಸವಣೂರು ತಾಲೂಕಿಗೆ ಸಿಆರ್ಪಿಯಾಗಿ ಪ್ರಮೋಷನ್ ಆಗಿದೆ.
ಈ ಹಿನ್ನೆಲೆಯಲ್ಲಿ ಗಂಗಾ ರಜಪೂತ ಅವರಿಗೆ ಇಂದು ಶಾಲೆಯಲ್ಲಿ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಬೀಳ್ಕೊಡುಗೆ ಸಮಾರಂಭದ ಬಳಿಕ ಶಾಲೆಯಿಂದ ಹೊರಟ ಶಿಕ್ಷಕಿಯನ್ನ ವಿದ್ಯಾರ್ಥಿಗಳು ತಬ್ಬಿಕೊಂಡು, ಬಿಕ್ಕಿಬಿಕ್ಕಿ ಅತ್ತ ಘಟನೆ ನಡೆಯಿತು.
ಗಂಗಾ ಕಳೆದ ಎಂಟು ವರ್ಷಗಳಿಂದ ಶಾಲೆಯಲ್ಲಿ ಇಂಗ್ಲಿಷ್ ಮತ್ತು ವಿಜ್ಞಾನ ಪಾಠ ಬೋಧನೆ ಮಾಡುತ್ತಿದ್ದರು. ಶಾಲೆಯಲ್ಲಿನ ಮಕ್ಕಳಿಗೆ ಅತ್ಯಂತ ಪ್ರೀತಿಯ ನೆಚ್ಚಿನ ಶಿಕ್ಷಕಿಯಾಗಿದ್ದರು. ಆದರೆ, ಈಗ ಈ ಶಾಲೆಯಿಂದ ಅವರ ವರ್ಗಾವಣೆ ಆಗಿದ್ದಕ್ಕೆ ಮಕ್ಕಳು ತಮ್ಮ ಶಿಕ್ಷಕಿಯನ್ನು ಬಿಟ್ಟುಕೊಡದೆ ಕಣ್ಣೀರು ಹಾಕಿದರು. ಮಕ್ಕಳ ಕಣ್ಣೀರು ಕಂಡು ಶಿಕ್ಷಕಿ ಸಹ ದುಃಖ ತಡೆಯಲಾಗದೆ ಭಾವುಕರಾದ ದೃಶ್ಯ ಕಂಡುಬಂತು. ವಿದ್ಯಾರ್ಥಿ ಮತ್ತು ಶಿಕ್ಷಕಿಯರ ಈ ಅವಿಸ್ಮರಣೀಯ ಘಟನೆ ಕಂಡು ಗ್ರಾಮಸ್ಥರು ಶಿಕ್ಷಕಿಯ ಸೇವೆಯನ್ನು ನೆನೆದರು.
ಇದನ್ನೂ ಓದಿ: ಯಾದಗಿರಿ: ನೆಚ್ಚಿನ ಶಿಕ್ಷಕಿ ವರ್ಗಾವಣೆ.. ತಮ್ಮನ್ನು ಬಿಟ್ಟೋಗದಂತೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು