ಪುರಿ ಜಗನ್ನಾಥ ರಥಯಾತ್ರೆ ವೈಭವ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ: LIVE - Puri Jagannath Ratha Yatra

🎬 Watch Now: Feature Video

thumbnail

By ETV Bharat Karnataka Team

Published : Jul 7, 2024, 10:26 AM IST

Updated : Jul 7, 2024, 6:54 PM IST

ಪುರಿ (ಒಡಿಶಾ): ದೇವಾಲಯಗಳ ನಗರಿ ಪುರಿಯಲ್ಲಿ ಇಂದು ಜಗನ್ನಾಥ ರಥಯಾತ್ರೆ. ಶ್ರೀ ಮಂದಿರದಲ್ಲಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದ ಮುಂದಿನ ಸಿಂಹದ್ವಾರದಲ್ಲಿ ರಥಗಳನ್ನು ಸಿದ್ಧವಾಗಿವೆ. ಇದೀಗ ಸಾಯಂಕಾಲ 5 ಗಂಟೆಯಿಂದ ರಥಯಾತ್ರೆ ಆರಂಭವಾಗಿದೆ. ಪ್ರತಿ ವರ್ಷ ಒಂದು ದಿನ ಮಾತ್ರ ರಥಯಾತ್ರೆ ಇರುತ್ತಿತ್ತು. ಆದರೆ ಈ ಬಾರಿ ಎರಡು ದಿನ ಅಂದರೆ ಇಂದು ಮತ್ತು ನಾಳೆ ರಥಯಾತ್ರೆ ನೆರವೇರುತ್ತಿರುವುದು ವಿಶೇಷ.ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಮೂರು ಪ್ರತ್ಯೇಕ ರಥಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ. ಜಗನ್ನಾಥನ ರಥವನ್ನು ನಂದಿಘೋಷ, ಬಲಭದ್ರನ ರಥವನ್ನು ತಾಳಧ್ವಜ ಮತ್ತು ಸುಭದ್ರೆಯ ರಥವನ್ನು ದರ್ಪದಲನ ಎಂದು ಕರೆಯುತ್ತಾರೆ. ಈ ಮೂರು ರಥಗಳ ಮೆರವಣಿಗೆಯನ್ನು ಭಕ್ತರು ಕಣ್ತುಂಬಿಕೊಂಡು ಕೃತಾರ್ಥರಾಗುತ್ತಾರೆ. ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ವಿದೇಶ ಮತ್ತು ದೇಶದ ಇತರ ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪುರಿಗೆ ಆಗಮಿಸಿದ್ದಾರೆ. ಮಹಾರಥೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮ ಭಾಗವಹಿಸಿದ್ದಾರೆ. ಭಕ್ತರಿಗೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ ಮಾಡಿದೆ.
Last Updated : Jul 7, 2024, 6:54 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.