ಶಿವಲಿಂಗಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಫಾರ್ಚನೆ ಮಾಡಿ ಶಿವರಾತ್ರಿ ಹಬ್ಬ ಆಚರಣೆ: ವಿಡಿಯೋ - Shivaratri festival

🎬 Watch Now: Feature Video

thumbnail

By ETV Bharat Karnataka Team

Published : Mar 8, 2024, 8:53 PM IST

ದಾವಣಗೆರೆ: ನಾಡಿನಾದ್ಯಂತ ಶಿವರಾತ್ರಿ ಆಚರಣೆ ಸಂಭ್ರಮದಿಂದ ಕೂಡಿದೆ. ವಿವಿಧೆಡೆ ವಿಭಿನ್ನ ರೀತಿಯಲ್ಲಿ ಶಿವನ ಆರಾಧನೆ ನಡೆಯುತ್ತಿದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಹೆಲಿಕಾಪ್ಟರ್​ ಮೂಲಕ ಶಿವಲಿಂಗಗಳಿಗೆ ಪುಷ್ಪಾರ್ಚನೆ ಮಾಡಲಾಗಿದೆ.

ದಾವಣಗೆರೆಯ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಲಿಂಗುವಿನ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ಜಿಲ್ಲೆಯ ಹರಿಹರದ ಮಲೆಬೆನ್ನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಶಿವರಾತ್ರಿ ಹಬ್ಬದ ಹಿನ್ನೆಲೆ ಸದ್ಬಾವನಾ ಶೋಭಾಯಾತ್ರೆ ನಡೆಸಲಾಯಿತು. 

ಇದೇ ವೇಳೆ, 108 ಶಿವಲಿಂಗ ಹೊತ್ತು ಹಲವು ಗ್ರಾಮಗಳಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಹೆಲಿಕಾಪ್ಟರ್ ಮೂಲಕ 108 ಶಿವಲಿಂಗಗಳಿಗೆ ಆಕಾಶದಿಂದ ಹೂವಿನ ಮಳೆ ಸುರಿಸಲಾಯಿತು. ಇದಲ್ಲದೇ ಆಗಸದಿಂದ ಈಶ್ವರನ ಸಂದೇಶ ಕರಪತ್ರ ವಿತರಣೆ ಮಾಡಲಾಯಿತು. ಈ ವೇಳೆ ನೂರಾರು ವಾಹನಗಳಲ್ಲಿ ಜನರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಶಿವಲಿಂಗದ ಮೆರವಣಿಗೆ ಸರಿಸುಮಾರು 50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಚರಿಸಲಿದೆ. 

ಈ ಶೋಭಯಾತ್ರೆಯಲ್ಲಿ ದೇಶದ ಎಲ್ಲ ಕಡೆಗಳಲ್ಲಿ ಇರುವ 108 ಶಿವಲಿಂಗಗಳ ಮಾದರಿಗಳನ್ನು ಮಾಡಿ ಪ್ರದರ್ಶನ ಮಾಡಲಾಗಿದ್ದು, ಈ ಶಿವಲಿಂಗಗಳನ್ನು ಮೂರು ದಿನಗಳ ಕಾಲ ಜನರ ದರ್ಶನಕ್ಕೆ ಈಶ್ವರಿ ವಿದ್ಯಾಲಯ ಇಡಲಿದೆ ಎಂಬುದು ತಿಳಿದುಬಂದಿದೆ. 

ಇದನ್ನೂ ಓದಿ : ಹುಬ್ಬಳ್ಳಿಯ ಈಶ್ವರ ದೇವಸ್ಥಾನ, ಸಿದ್ದಾರೂಢ ಮಠದಲ್ಲಿ ಶಿವರಾತ್ರಿ ವಿಶೇಷ ಪೂಜೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.