ಶಿವಕುಮಾರ ಸ್ವಾಮೀಜಿ 117ನೇ ಜನ್ಮದಿನಾಚರಣೆ: ಶ್ರೀಗಳ ಗದ್ದುಗೆಗೆ ವಿವಿಧ ಹಣ್ಣುಗಳಿಂದ ಅಲಂಕಾರ - Shivakumar Swamiji - SHIVAKUMAR SWAMIJI

🎬 Watch Now: Feature Video

thumbnail

By ETV Bharat Karnataka Team

Published : Apr 1, 2024, 11:28 AM IST

ತುಮಕೂರು: ಇಂದು ಶಿವಕುಮಾರ ಸ್ವಾಮೀಜಿಗಳ 117ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮದಿನ ಆಚರಿಸಲಾಗುತ್ತಿದೆ. ಬೆಳಗ್ಗೆ 5 ಗಂಟೆಯಿಂದಲೇ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 8 ಗಂಟೆಗೆ ಶ್ರೀಗಳ ಪುತ್ಥಳಿಯನ್ನ ರುದ್ರಾಕ್ಷಿ ಮಂಟಪದಲ್ಲಿಟ್ಟು ವಾದ್ಯಮೇಳ, ಪೂರ್ಣಕುಂಬದೊಂದಿಗೆ ಮೆರವಣಿಗೆ ಮಾಡಲಾಯಿತು. ಹರಗುರುಶರಣರ ನೇತೃತ್ವದಲ್ಲಿ ಸಿದ್ದಗಂಗಾ ಮಠದ ಆವರಣದಲ್ಲಿ ಮೆರವಣಿಗೆ ನೆರವೇರಿತು.

ಮುಖ್ಯವಾಗಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯನ್ನು ವಿವಿಧ ಹಣ್ಣುಗಳಿಂದ ಅಲಂಕಾರ ಮಾಡಲಾಗಿರುವುದು ವಿಶೇಷವಾಗಿದೆ. ಅದರಲ್ಲೂ ಶಿವಕುಮಾರ್ ಸ್ವಾಮೀಜಿ ನಿತ್ಯ ಬಳಸುತ್ತಿದ್ದಂತಹ ಪರಂಗಿ ಹಣ್ಣುಗಳನ್ನು ಹೆಚ್ಚಾಗಿ ಅಲಂಕಾರದಲ್ಲಿ ಬಳಸಲಾಗಿರುವುದು ವಿಶೇಷವಾಗಿದೆ. ಹಲಸು, ಕಿತ್ತಳೆ, ಮೋಸಂಬಿ, ಪಪ್ಪಾಯ ಸೇರಿದಂತೆ ಹತ್ತಕ್ಕೂ ಹೆಚ್ಚು ಹಣ್ಣುಗಳಿಂದ ಸ್ವಾಮೀಜಿ ಗದ್ದುಗೆ ಅಲಂಕರಿಸಲಾಗಿದೆ. ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆಯುತ್ತಿದ್ದಾರೆ.

ಇಂದು ನಡೆಯಲಿರುವ ಸ್ವಾಮೀಜಿಯವರ 117ನೇ ಜಯಂತ್ಯುತ್ಸವ ಹಾಗೂ ಗುರುವಂದನ ಮಹೋತ್ಸವಕ್ಕೆ ಸುಮಾರು ಒಂದು ಲಕ್ಷ ಭಕ್ತರು ಮಠಕ್ಕೆ ಭೇಟಿ ನೀಡುವ ಸಾಧ್ಯತೆಗಳಿದ್ದು, ಎಲ್ಲರಿಗೂ ಪೂರಕವಾಗಿ ನಿರಂತರ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. 

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಗುರುವಂದನ ಮಹೋತ್ಸವ, ವೇದಿಕೆಗೆ ರಾಜಕಾರಣಿಗಳಿಗೆ ಪ್ರವೇಶವಿಲ್ಲ: ಸಿದ್ದಲಿಂಗ ಶ್ರೀ - Sri Shivakumar Swamiji

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.