ದಾಳಿಗೆ ಮುಂದಾದ ನಾಯಿಗಳಿಗೆ ಕಾಲೆತ್ತಿ ಹೆದರಿಸಿದ ಕಡವೆ: ವೈರಲ್​ ವಿಡಿಯೋ - SAMBAR DEER COUNTER ATTACK

🎬 Watch Now: Feature Video

thumbnail

By ETV Bharat Karnataka Team

Published : Oct 23, 2024, 10:39 PM IST

ಕಾರವಾರ (ಉತ್ತರ ಕನ್ನಡ): ಕಾಡಿನಿಂದ ನಾಡಿನೆಡೆಗೆ ಬಂದ ಕಡವೆಯೊಂದನ್ನು ನಾಯಿಗಳು ಬೆನ್ನಟ್ಟಿವೆ. ಈ ವೇಳೆ ಪ್ರತಿದಾಳಿಗೆ ನಿಂತ ಕಡವೆಯೂ, ನಾಯಿಗಳನ್ನೇ ಹೆದರಿಸುತ್ತಿರುವ ಅಪರೂಪದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಚಿತ್ತಾರ ಬಳಿ ಕಡವೆಯೊಂದನ್ನು ನಾಯಿಗಳು ಓಡಿಸಿಕೊಂಡು ಬಂದಿದ್ದು, ಅದು ತೋಟದಂಚಿಗೆ ಓಡಿದೆ. ಆದರೂ ನಾಯಿಗಳು ಬೆನ್ನುಬಿಡದೆ ಇದ್ದಾಗ, ತೋಟದಂಚಿನ ಕೊಳ್ಳವೊಂದರಲ್ಲಿ ತಿರುಗಿ ನಿಂತ ಕಡವೆ, ಸುತ್ತುಗಟ್ಟಿದ ನಾಯಿಗಳನ್ನು ಕಂಡು ಪ್ರತಿದಾಳಿಗೆ ಮುಂದಾಗಿತ್ತು. ತನ್ನ ಕಾಲನ್ನು ನೀರಿಗೆ ಪುನಃ ಪುನಃ ಅಪ್ಪಳಿಸಿ, ನೀರು ಚಿಮ್ಮಿಸಿ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದೆ. ಈ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಇದೀಗ ವೈರಲ್ ಆಗಿದೆ.

ಕಡವೆಯನ್ನು ಕಂಡ ಗ್ರಾಮಸ್ಥರು, ಕೂಡಲೇ ನಾಯಿಗಳನ್ನು ಓಡಿಸಿದ್ದಾರೆ. ಬಳಿಕ ಕಡವೆಯನ್ನು ರಕ್ಷಿಸಿ ಅದನ್ನು ಅರಣ್ಯ ಪ್ರದೇಶಕ್ಕೆ ಕಳಿಸಿದ್ದಾರೆ. 

ಇದನ್ನೂ ಓದಿ: Watch Dog Killed by Leopard..ಧಾರವಾಡದಲ್ಲಿ ಮನೆಗೆ ಬಂದು ನಾಯಿ ಕೊಂದ ಚಿರತೆ

ಇದನ್ನೂ ಓದಿ: ಮೈಸೂರು: ಒಂದು ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ! - ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.