ಮೈಸೂರು: 100 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸುವಿನ ರಕ್ಷಣೆ-WATCH - Rescue of cow

🎬 Watch Now: Feature Video

thumbnail

By ETV Bharat Karnataka Team

Published : Aug 12, 2024, 8:00 AM IST

ಮೈಸೂರು: ಸುಮಾರು 100 ಅಡಿ ಆಳದ ತೆರೆದ ಬಾವಿಗೆ ಬಿದ್ದ ಹಸುವನ್ನು ಹುಣಸೂರು ತಾಲೂಕಿನ ಹುಸೇನ್​ಪುರ ಗ್ರಾಮದಲ್ಲಿ ರಕ್ಷಿಸಲಾಗಿದೆ. ಕೆ.ಆರ್. ನಗರದ ಲಕ್ಷ್ಮಿಕಾಂತ ಯಾದವ್​ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಹಸುವನ್ನು ಆಳದ ಬಾವಿಯಿಂದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 48 ವರ್ಷದ ಲಕ್ಷಿಕಾಂತ್ ಅವರು ಬಾವಿಗೆ ಇಳಿದು ಹಸುವನ್ನು ಸುರಕ್ಷಿತವಾಗಿ ಮೇಲೆ ತಂದಿದ್ದಾರೆ. ಇವರ ಈ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಪಕ್ಕದ ಮನೆಗೆ ಬಂದ ಹೆಬ್ಬಾವು ಹಿಡಿಯುವ ಧೈರ್ಯ ತೋರಿದ ಮಹಿಳೆ - VIDEO - Woman Catches Python 

100 ಅಡಿ ಆಳಕ್ಕೆ ಬಿದ್ದರೂ ಹಸುವಿಗೆ ಗಾಯಗಳಾಗಿವೆ ಬಿಟ್ಟರೆ ಪ್ರಾಣಾಪಾಯದಿಂದ ಪಾರಾಗಿದೆ. ರಕ್ಷಣೆಗೆಂದು ಬಾವಿಗೆ ಇಳಿದಿದ್ದ ಲಕ್ಷಿಕಾಂತ್ ಹಸುವಿನ ಹೆಗಲಿನ ಭಾಗ ಹಾಗೂ ಸೊಂಟದ ಭಾಗಕ್ಕೆ ಬಿಗಿಯಾಗಿ ಹಗ್ಗವನ್ನು ಕಟ್ಟಿ ಮೇಲೆ ಬಂದರು. ಬಳಿಕ ಎಲ್ಲರೂ ಸೇರಿ ನಿಧಾನಕ್ಕೆ ಕಟ್ಟಿದ್ದ ಹಗ್ಗವನ್ನು ಎಳೆದರು. ಕೊನೆಗೆ ಟೀಂ ವರ್ಕ್​ನಿಂದ ಗೋವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಇದನ್ನೂ ಓದಿ:ವಿಜಯಪುರ: ಅಪರೂಪದ ಪುನುಗು ಬೆಕ್ಕು ಪತ್ತೆ; ಚಿಕಿತ್ಸೆ ಕೊಡಿಸಿ ರಕ್ಷಿಸಿದ ಜನ - Civet Rescued

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.