Watch video: ಬಿದನೂರಿನಲ್ಲಿ ದಾಖಲೆಯ 316 ಎಂಎಂ ಮಳೆ: ರಸ್ತೆಗಳು ಜಲಾವೃತ - Record 316 mm rain in Bidanur - RECORD 316 MM RAIN IN BIDANUR

🎬 Watch Now: Feature Video

thumbnail

By ETV Bharat Karnataka Team

Published : Jul 30, 2024, 10:27 PM IST

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಬಿದನೂರು ಗ್ರಾಮದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 316 ಎಂಎಂ ಮಳೆಯಾಗಿದೆ. ಪರಿಣಾಮ ಗ್ರಾಮದ ರಸ್ತೆಗಳು ಜಲಾವೃತಗೊಂಡಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಆದರೆ, ಯಾವುದೇ ಹಾನಿಯಾಗಿಲ್ಲ. ಅದೇ ರೀತಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 240 ಎಂಎಂ ಮಳೆಯಾಗಿದೆ. ಚಕ್ರ ನಗರದಲ್ಲಿ 220 ಎಂಎಂ ಮಳೆಯಾಗಿದೆ. 

ಯಡೂರಿನಲ್ಲಿ 217ಎಂಎಂ ಮಳೆಯಾಗಿದೆ. ಹುಲಿಕಲ್ಲಿನಲ್ಲಿ 210 ಎಂಎಂ ಮಳೆಯಾಗಿದೆ. ಮಾಣಿಯಲ್ಲಿ 185 ಎಂಎಂ ಮಳೆಯಾಗಿದೆ. ಸಾವೇಹಕ್ಕಲಿನಲ್ಲಿ 167 ಎಂಎಂ ಮಳೆಯಾಗಿದೆ. ಕಾರ್ಗಲ್​ನಲ್ಲಿ 67.4 ಎಂಎಂ ಮಳೆಯಾಗಿದೆ. ಹೊಸನಗರದಲ್ಲಿ 39 ಎಂಎಂ ಮಳೆಯಾಗಿದೆ. 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1810.50 ಅಡಿ ತಲುಪಿದ್ದು, ಜಲಾಶಯಕ್ಕೆ 50.710 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1786.30 ಅಡಿ ದಾಖಲಾಗಿತ್ತು.

ಇದನ್ನೂ ನೋಡಿ: ಕಾನನದ ನಡುವೆ ಜುಳು ಜುಳು ಜಲಪಾತ; ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ 'ಮಿಂಚೋಳಿ ಫಾಲ್ಸ್' - Mincholi FALLS

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.