ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರು, ರಾಯರ ಸನ್ನಿಧಿಗೆ ಭೇಟಿ ನೀಡಿದ ಅಣ್ಣಾಮಲೈ ದಂಪತಿ - Raghavendra Swamy Temple - RAGHAVENDRA SWAMY TEMPLE

🎬 Watch Now: Feature Video

thumbnail

By ETV Bharat Karnataka Team

Published : May 25, 2024, 2:29 PM IST

ರಾಯಚೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದೆ. ಫಲಿತಾಂಶ ಹಿನ್ನೆಲೆ ಈಗಾಗಲೇ ಕೆಲ ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ತಮಿಳುನಾಡು‌ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಹ ಟೆಂಪಲ್​ ರನ್​ ಶುರು ಮಾಡಿದ್ದಾರೆ. ಅವರು ತಮ್ಮ ಪತ್ನಿಯೊಂದಿಗೆ ರಾಯರ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದರು. 

ಇಂದು ಬೆಳಗ್ಗೆ ಅಣ್ಣಾಮಲೈ ಅವರು ತಮ್ಮ ಪತ್ನಿಯೊಂದಿಗೆ ಮಂತ್ರಾಲಯದ ‌ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು. ಆರಂಭದಲ್ಲಿ ಗ್ರಾಮದ ಆದಿ ದೇವತೆ ಶ್ರೀಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರನ್ನು ಭೇಟಿ ಮಾಡಿ ಉಭಯ ಕುಷಲೋಪರಿ ವಿಚಾರಿಸಿಕೊಂಡು ಮಾತುಕತೆ ನಡೆಸಿದರು. ಪೀಠಾಧಿಪತಿಗಳು ಅನುಗ್ರಹ ಫಲಮಂತ್ರಾಕ್ಷತೆ, ಶೇಷವಸ್ತ್ರ, ಸ್ಮರಣಿಕೆ, ಪೂಜ್ಯ ಶ್ರೀ ಸ್ವಾಮೀಜಿ ಆಶೀರ್ವಚನ ನೀಡುವ ಮೂಲಕ‌ ದಂಪತಿಗಳು ಆಶೀರ್ವದಿಸಿದರು. ಈ ವೇಳೆ ಮಠದ ವ್ಯವಸ್ಥಾಪಕ ಶ್ರೀನಿವಾಸರಾವ್, ಸಹಾಯಕ ವ್ಯವಸ್ಥಾಪಕ ಐ.ಪಿ. ನರಸಿಂಹಚಾರ್ಯ ಹಾಗೂ ಸಿಬ್ಬಂದಿ ಇದ್ದರು.

ಓದಿ:  ಲೋಕಸಭೆ ಚುನಾವಣೆ: ಬೆಳಗ್ಗೆ 11 ಗಂಟೆವರೆಗೆ ಶೇಕಡಾ 25.76 ರಷ್ಟು ಮತದಾನ - VOTING TURN OUT

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.