thumbnail

ಮುಸ್ಲಿಂ ಬಾಂಧವರಿಂದ ಶ್ರೀರಾಮನಿಗೆ ಪೂಜೆ, ಅನ್ನಸಂರ್ಪಣೆ: ಸೌಹಾರ್ದತೆಗೆ ಸಾಕ್ಷಿಯಾದ ಹುಬ್ಬಳ್ಳಿ

By ETV Bharat Karnataka Team

Published : Jan 22, 2024, 10:40 PM IST

ಹುಬ್ಬಳ್ಳಿ : ದೇವನೊಬ್ಬ ನಾಮ ಹಲವು. ಶ್ರೀರಾಮ ಅಂದರೆ ಹಿಂದುತ್ವ ಮಾತ್ರವಲ್ಲ, ಸರ್ವಧರ್ಮದ ಸಮನ್ವಯತೆ ಎಂಬುವುದಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿ ಸಾಕ್ಷಿಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದಂತೆಯೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾಮನ ಪೂಜೆ ಪುನಸ್ಕಾರ ಜೋರಾಗಿಯೇ ನಡೆದಿದೆ.

ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗೆ ಹಿಂದೂಗಳು ಭಾಗವಹಿಸುವುದು ಸಹಜ. ಆದರೆ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದವರು ಕೂಡ ಶ್ರೀರಾಮನ ಪೂಜೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದಿದ್ದಾರೆ. ಅಲ್ಲದೇ ರಾಮನ ಮುಂದೆ ಸಖತ್ ಸ್ಟೇಪ್ ಕೂಡ ಹಾಕಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಅನ್ವರ ಮುಲ್ಲಾ ಹಾಗೂ ಕುಟುಂಬದ ಸದಸ್ಯರು ಓಣಿಯ ಜನರ ಜೊತೆಗೆ ಸೇರಿ ಶ್ರೀರಾಮನ ಪೂಜೆ ಮಾಡಿದ್ದಾರೆ.

ಇನ್ನು ಮತ್ತೊಂದು ಕಡೆಯಲ್ಲಿ ಅಂದರೆ ದೇಶಪಾಂಡೆ ನಗರದ ಸಬನೂರು ಬಿಲ್ಡಿಂಗ್​ನಲ್ಲಿ ಅಬ್ದುಲ್ ಗಣಿ ಮುಲ್ಲಾ ಎಂಬುವರು ಸ್ವತಃ ತಾವೇ ಅಡುಗೆ ಮಾಡಿ, ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಿದ ಶ್ರೀರಾಮನ ಪಟ್ಟಾಭಿಷೇಕ: ಅಯೋಧ್ಯೆಯ ರಾಮಮಂದಿರ ಇಂದು ಚರಿತಾತ್ಮಕ ಘಟನೆಗೆ ಸಾಕ್ಷಿಯಾಗಿದೆ. ನಮ್ಮ ತಾತ ಮುತ್ತಾತರ, ಸಾಧು ಸಂತರ 500 ವರ್ಷಗಳ ತಪಸ್ಸಿಗೆ ಫಲ ಸಿಕ್ಕಿದೆ ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮೈಸೂರಿನಲ್ಲಿ ಹೇಳಿದರು.

ಇದನ್ನೂ ಓದಿ:  ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಿದ ಶ್ರೀರಾಮನ ಪಟ್ಟಾಭಿಷೇಕ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.