ಪ್ರಾಣ ಪ್ರತಿಷ್ಠಾಪನೆಗೆ ಭರದ ಸಿದ್ಧತೆ, ದಟ್ಟ ಮಂಜಿನಲ್ಲಿ ಭವ್ಯ ರಾಮ ಮಂದಿರ: ವಿಡಿಯೋ
🎬 Watch Now: Feature Video
Published : Jan 20, 2024, 1:58 PM IST
ಅಯೋಧ್ಯೆ: ರಾಮನಗರಿಯಲ್ಲಿ ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇಂದು ರಾಮಲಲ್ಲಾ ಮೂರ್ತಿಗೆ ಐದನೇ ದಿನದ ಧಾರ್ಮಿಕ ವಿಧಿ- ವಿಧಾನಗಳು ನಡೆಯುತ್ತಿವೆ. ಇನ್ನೊಂದೆಡೆ, ಅಯೋಧ್ಯೆಯ ಭವ್ಯ ರಾಮ ಮಂದಿರದ ಸುತ್ತ ದಟ್ಟ ಮಂಜಿನ ವಾತಾವರಣ ಆವರಿಸಿದೆ.
ಈಗಾಗಲೇ ದೇಶಾದ್ಯಂತ ವಿವಿಧ ಆಚರಣೆಗಳು ಆರಂಭಗೊಂಡಿದ್ದು, ವಿವಿಧ ಕಡೆಗಳಿಂದ ಪೂಜಾ ಸಾಮಗ್ರಿ, ಕಾಣಿಕೆಗಳು ಅಯೋಧ್ಯೆಗೆ ತಲುಪುತ್ತಿವೆ. ವಿಶೇಷವಾಗಿ, ಪಾಕಿಸ್ತಾನದ ಹಿಂಗ್ಲಾಜ್ ಶಕ್ತಿಪೀಠದಿಂದ ರಾಮಲಲ್ಲಾಗಾಗಿ ನೀರನ್ನು ಅಯೋಧ್ಯೆಗೆ ತರಲಾಗುತ್ತದೆ. ಜೊತೆಗೆ ಹೈದರಾಬಾದ್‌ನಿಂದ 1,265 ಕೆಜಿ ತೂಕದ ಲಡ್ಡು ಪ್ರಸಾದ ಕರಸೇವಕಪುರಂ ತಲುಪಿದೆ. ಡಾ.ಅನಿಲ್ ಮಿಶ್ರಾ ಅವರು ಎಲ್ಲ ವಿಧಿ- ವಿಧಾನಗಳ ಮುಂದಾಳತ್ವ ವಹಿಸಿದ್ದು, ಟ್ರಸ್ಟ್‌ಗೆ ಸಂಬಂಧಿಸಿದ ಇತರ ಅಧಿಕಾರಿಗಳು ಮತ್ತು 121 ಆಚಾರ್ಯರು ಜೊತೆಗಿರಲಿದ್ದಾರೆ.
ಮಂಗಳವಾರ ಪ್ರಾಯಶ್ಚಿತ್ತ ಮತ್ತು ಕರ್ಮಕುಟಿ ಪೂಜೆ ನೆರವೇರಿತ್ತು. ಬುಧವಾರ, ರಾಮಲಲ್ಲಾ ವಿಗ್ರಹವನ್ನು ಆವರಣಕ್ಕೆ ಕರೆತಂದಿದ್ದು, ಬಳಿಕ ಗರ್ಭಗುಡಿ ಪ್ರವೇಶ ಆಗಿದೆ. ಗುರುವಾರ ರಾಮಲಲ್ಲಾನನ್ನು ಗರ್ಭಗುಡಿಯಲ್ಲಿ ಕೂರಿಸಲಾಗಿದೆ. ಬಳಿಕ ಜನವರಿ 19 ರಂದು ಬೆಳಗ್ಗೆ ಕೇಸರಧಿವಾಸ, ಘೃತಾಧಿವಾಸ, ಸಂಜೆ ಧಾನ್ಯಾಧಿವಾಸ ಆಚರಣೆಗಳು ನಡೆದವು.
ಇದನ್ನೂ ಓದಿ: ಅಯೋಧ್ಯೆ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ ಕಲಾವಿದರ ಕಮಾಲ್: ವಿಡಿಯೋ