ಡಿವೈಎಫ್‌ಐ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರಿಂದ ಜಲಫಿರಂಗಿ ಪ್ರಯೋಗ - ವಿಡಿಯೋ
🎬 Watch Now: Feature Video
Published : Feb 8, 2024, 7:58 AM IST
|Updated : Feb 8, 2024, 9:01 AM IST
ಕೋಯಿಕ್ಕೋಡ್ (ಕೇರಳ): ಮಹಾತ್ಮಾ ಗಾಂಧೀಜಿ ಹುತ್ಮಾತ ದಿನವಾದ ಜನವರಿ 30 ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರೊಫೆಸರ್ ಒಬ್ಬರು ನಾಥುರಾಮ್ ಗೋಡ್ಸೆಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರು. ಇದನ್ನು ವಿರೋಧಿಸಿ ಕೋಯಿಕ್ಕೋಡ್ನಲ್ಲಿ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಡಿವೈಎಫ್‌ಐ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದರು. ಜಲಫಿರಂಗಿಗಳನ್ನು ಹಾರಿಸುತ್ತಿದ್ದಂತೆ ಪ್ರತಿಭಟನಾಕಾರರು ಮತ್ತಷ್ಟು ಉದ್ವಿಗ್ನಗೊಂಡರು. ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಅಂತಿಮವಾಗಿ ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಯನ್ನು ಬಳಕೆ ಮಾಡಬೇಕಾಯಿತು. ಬಳಿಕ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ದೂರಿನ ಮೇರೆಗೆ ಪ್ರೊಫೆಸರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ಕೇರಳದಲ್ಲಿ ಅನೇಕ ಸಂಘಟನೆಗಳು ಪ್ರೊಫೆಸರ್ ಡಾ. ಶೈಜಾ ಆಂಡವನ್ ಅವರು ನಾಥುರಾಮ್ ಗೋಡ್ಸೆಯನ್ನು ಬೆಂಬಲಿಸಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿವೆ. ಹಲವೆಡೆ ಪೋಲಿಸ್ ಠಾಣೆಗಳಲ್ಲಿ ಶೈಜಾ ಆಂಡವನ್ ವಿರುದ್ಧ ಪ್ರಕರಣಗಳು ಕೂಡ ದಾಖಲಾಗಿವೆ. ಇದನ್ನೂ ಓದಿ : ಬೆಳಗಾವಿ: ಎಮ್ಮೆಗಳನ್ನು ಕರೆ ತಂದು ಹಾಲು ಉತ್ಪಾದಕರ ಪ್ರೋತ್ಸಾಹಧನಕ್ಕೆ ಬಿಜೆಪಿ ಪ್ರತಿಭಟನೆ