ಮೈಸೂರಿನಲ್ಲಿ ಭಾರತ್ ಅಕ್ಕಿ ಖರೀದಿಗೆ ಮುಗಿಬಿದ್ದ ಜನ: ವಿಡಿಯೋ - ಭಾರತ್ ಅಕ್ಕಿ
🎬 Watch Now: Feature Video
Published : Mar 3, 2024, 9:33 AM IST
ಮೈಸೂರು: ಬಡವರಿಗೆ ಕಡಿಮೆ ದರದಲ್ಲಿ ಭಾರತ್ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹಸಿರು ನಿಶಾನೆ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ನಿನ್ನೆ (ಶನಿವಾರ) ಭಾರತ್ ಅಕ್ಕಿ ವಿತರಿಸುವ ಕಾರ್ಯಕ್ಕೆ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಚಾಲನೆ ನೀಡಿದರು. ಸ್ಥಳೀಯ ಶಾಸಕ ಶ್ರೀವತ್ಸ ಸೇರಿದಂತೆ ಪಾಲಿಕೆಯ ಮಾಜಿ ಸದಸ್ಯರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಅಕ್ಕಿ ಖರೀದಿಸಲು ಜನ ಮುಗಿಬಿದ್ದರು.
ಅಗ್ರಹಾರ ವೃತ್ತ, ಕುವೆಂಪು ನಗರದ ಶಾಂತಿಸಾಗರ, ವಿವೇಕಾನಂದ ವೃತ್ತ ಹಾಗೂ ಚಾಮುಂಡಿಪುರಂ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಭಾರತ್ ಅಕ್ಕಿ ವಿತರಣೆ ನಡೆಯಿತು. ಜನರು ತಲಾ 10 ಕೆ.ಜಿ ತೂಕದ ಅಕ್ಕಿ ಚೀಲವನ್ನು 290 ರೂಪಾಯಿ ನೀಡಿ ಖರೀದಿಸಿದರು. ಒಂದು ಕೆ.ಜಿ ಅಕ್ಕಿಗೆ 29 ರೂಪಾಯಿಯಂತೆ 10 ಕೆ.ಜಿ ಅಕ್ಕಿಗೆ 290 ರೂಪಾಯಿ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಬಡ, ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿಕೊಂಡು ಭಾರತ್ ಅಕ್ಕಿ ಮಾರಾಟಕ್ಕೆ ಮುಂದಾಗಿದೆ.
ಇದನ್ನೂ ಓದಿ: ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ದಿನೇಶ್ ಗುಂಡೂರಾವ್